SSLC Exam: ಇಲ್ಲಿನ ಶಾಲೆಗಳಲ್ಲಿ ರಾತ್ರಿಯೂ ಪಾಠ, ಭಾನುವಾರವೂ ಕ್ಲಾಸ್! ಎಸ್ಎಸ್‌ಎಲ್‌ಸಿ ಎಕ್ಸಾಂಗೆ ಭರ್ಜರಿ ತಯಾರಿ

ವಿದ್ಯಾರ್ಥಿಗಳನ್ನು ಓದಿನಲ್ಲಿ ಸಂಪೂರ್ಣ ತೊಡಗಿಸಲು, ಆ ಮೂಲಕ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು  ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜುಗೊಳಿಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರಾತ್ರಿ ವೇಳೆ ಪಾಠ, ಭಾನುವಾರವೂ ಪೂರ್ಣ ತರಗತಿ ನಡೆಸಲಾಗುತ್ತಿದೆ. 

ಶಾಲೆಯಲ್ಲಿ ರಾತ್ರಿ ವೇಳೆ ನಡೆಯುತ್ತಿರುವ ತರಗತಿ

ಶಾಲೆಯಲ್ಲಿ ರಾತ್ರಿ ವೇಳೆ ನಡೆಯುತ್ತಿರುವ ತರಗತಿ

  • Share this:
ಚಾಮರಾಜನಗರ: ಇಲ್ಲಿ ರಾತ್ರಿ (Night) ವೇಳೆಯು ಪಾಠ (Teaching) ಮಾಡಲಾಗುತ್ತಿದೆ,  ಭಾನುವಾರವೂ (Sunday) ತರಗತಿಗಳು  (Class) ನಡೆಯುತ್ತಿವೆ, ವಿದ್ಯಾರ್ಥಿಗಳು  (Students) ಹಗಲಿರುಳು ಶಾಲೆಗಳಲ್ಲೇ  ಉಳಿದು ಅಭ್ಯಾಸ ಮಾಡುತ್ತಿದ್ದಾರೆ, ದಿನಕ್ಕೊಬ್ಬರು ಶಿಕ್ಷಕರಂತೆ (Teacher) ಶಾಲೆಯಲ್ಲೇ ವಾಸ್ತವ್ಯ ಮಾಡುತ್ತಾರೆ, ಕೆಲವೆಡೆ ಮನೆಮನೆಗೆ ಶಿಕ್ಷಕರು ಭೇಟಿ ನೀಡುತ್ತಾರೆ, ಹೀಗೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ (Chamarajanagar) ಎಸ್‌ಎಸ್ಎಲ್‌ಸಿ  ಪರೀಕ್ಷೆಯಲ್ಲಿ (SSLC Exam) ಹೆಚ್ಚಿನ  ಫಲಿತಾಂಶ ಗಳಿಸಲು  ಇನ್ನಿಲ್ಲದ ಪ್ರಯತ್ನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಎಸ್‌‌ಎಸ್‌ಎಲ್‌ಸಿ ಪ್ರಮುಖ ಘಟ್ಟವಾಗಿದ್ದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಮುನ್ನುಡಿ  ಬರೆಯುವ ನಿಟ್ಟಿನಲ್ಲಿ  ಹಾಗು ಜಿಲ್ಲೆಯ ಫಲಿತಾಂಶಗಳು ಉತ್ತಮಗೊಳಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕರು ಶ್ರಮಿಸತೊಡಗಿದ್ದಾರೆ.

ಶೈಕ್ಷಣಿಕವಾಗಿ ಹಿಂದುಳಿದ ಚಾಮರಾಜನಗರ

ಚಾಮರಾಜನಗರ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ, ಇದಕ್ಕೆ ಕಾರಣ ಅನೇಕ. ಆದರೆ ಇತ್ತೀಚೆಗೆ ಶೈಕ್ಷಣಿಕ ಸ್ಥಿತಿಗತಿ ನಿಧಾನವಾಗಿ ಸುಧಾರಿಸತೊಡಗಿದೆ. ಕೆಲವು ವರ್ಷಗಳ ಹಿಂದೆ ರಾಜ್ಯದ ಇತರ ಜಿಲ್ಲೆಗೆ ಹೋಲಿಸಿದರೆ ಚಾಮರಾಜನಗರ ಜಿಲ್ಲೆಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶ  ಬಹಳ ಕಡಿಮೆ ಇತ್ತು.

ಈಗ ಸುಧಾರಿಸುತ್ತಿದೆ ಶಿಕ್ಷಣ ವ್ಯವಸ್ಥೆ

2018 ರಲ್ಲಿ 24ನೇ ಸ್ಥಾನ, 2019 ರಲ್ಲಿ 15, 2020ರಲ್ಲಿ 11, 2021 ರಲ್ಲಿ 9 ನೇ ಸ್ಥಾನ ಹೀಗೆ ಶಿಕ್ಷಣ ಇಲಾಖೆಯ ಪರಿಶ್ರಮದ ಫಲವಾಗಿ ಕ್ರಮೇಣವಾಗಿ ಫಲಿತಾಂಶ ದಲ್ಲಿ ಸುಧಾರಣೆ ಕಂಡು ಬರುತ್ತಿದೆ. ಈ ವರ್ಷ ಫಲಿತಾಂಶವನ್ನು ಇನ್ನೂ ಉತ್ತಮಗೊಳಿಸಲು ಚಾಮರಾಜನಗರ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗು ಶಿಕ್ಷಕರು ಪಣತೊಟ್ಟಿದ್ದಾರೆ.

ಇದನ್ನೂ ಓದಿ: SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ರೆಡಿ ಆಗ್ತಾ ಇದ್ದೀರಾ? ಹಾಗಾದ್ರೆ ಬೆಂಗಳೂರು ಆಕಾಶವಾಣಿಯಲ್ಲಿ ಪಾಠ ಕೇಳಿ!

ಎಸ್ಎಸ್‌ಎಲ್‌ಸಿ ಪರೀಕ್ಷೆಗಾಗಿ ತಯಾರಿ

ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ತರಗತಿಗಳು ಸರಿಯಾಗಿ ನಡೆದಿಲ್ಲ. ಇದು ಮಕ್ಕಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದು ಎಸ್‌ಎಸ್ಎಲ್‌ಸಿ ಫಲಿತಾಂಶದ ಮೇಲು ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಈ ಬಾರಿ ವಿಶೇಷ ಮುತುವರ್ಜಿ ವಹಿಸಿರುವ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಉತ್ತಮ ಫಲಿತಾಂಶಕ್ಕಾಗಿ ಹತ್ತು ಹಲವು ರೀತಿಯ ಪ್ರಯತ್ನ ನಡೆಸಿದ್ದಾರೆ.

ರಾತ್ರಿಯೂ ಪಾಠ, ಸಂಡೆಯೂ ಕ್ಲಾಸ್!

ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಮೂಲಿ  ತರಗತಿಗಳ ಜೊತೆಗೆ  ಪ್ರತಿ ದಿನ ರಾತ್ರಿ ವೇಳೆಯು ಪಾಠ ಮಾಡಲಾಗುತ್ತಿದೆ ಶನಿವಾರ, ಭಾನುವಾರ ಪೂರ್ಣ ತರಗತಿ ನಡೆಸಲಾಗುತ್ತಿದೆ. ಮಕ್ಕಳನ್ನು ಶಾಲೆಯಲ್ಲೇ ಉಳಿಸಿಕೊಂಡು ಗುಂಪು ಅಭ್ಯಾಸ ಮಾಡಿಸಲಾಗುತ್ತಿದೆ. ಸಂಜೆ 7 ರಿಂದ ರಾತ್ರಿ10.30 ಹಾಗು ಬೆಳಿಗ್ಗೆ 5.30 ರಿಂದ  8 ಗಂಟೆಯವರೆಗೆ ವಿಶೇಷ ಬೋಧನೆ ಮಾಡಲಾಗುತ್ತಿದೆ.ರಾತ್ರಿ ಉಳಿದುಕೊಳ್ಳುವ ಮಕ್ಕಳಿಗೆ ಊಟ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ

ಹಿರಿಯ ಅಧಿಕಾರಿಗಳ ಮಾರ್ಗದರ್ಶನ

ಶಾಲೆ ಮುಗಿಸಿ ಮನೆಗೆ ಹೋಗುವ ಬಹುತೇಕ  ವಿದ್ಯಾರ್ಥಿಗಳಿಗೆ  ಮನೆಗೆಲಸ ಸೇರಿದಂತೆ ಮನೆಯಲ್ಲಿ ಓದಲು ಸಾಧ್ಯವಾಗುವುದಿಲ್ಲ. ಅವರನ್ನು ಓದಿನಲ್ಲಿ ಸಂಪೂರ್ಣ ತೊಡಗಿಸಲು ಆ ಮೂಲಕ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯನ್ನು  ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜುಗೊಳಿಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ  ರಾತ್ರಿ ವೇಳೆ ಪಾಠ, ಶನಿವಾರ ಭಾನುವಾರ ಪೂರ್ಣ ತರಗತಿ ನಡೆಸಲಾಗುತ್ತಿದೆ.  ಚಾಮರಾಜನಗರ ಕ್ಷೇತ್ರಶಿಕ್ಷಣಾಧಿಕಾರಿ ಸೋಮಣ್ಣೇಗೌಡ ನ್ಯೂಸ್18 ಗೆ ತಿಳಿಸಿದರು.

ಶಾಲೆಯಲ್ಲೇ ಉಳಿದುಕೊಂಡು ಅಭ್ಯಾಸ

ಶಾಲೆ ಮುಗಿಸಿ ಮನೆಗೆ ಹೋದರೆ ಸರಿಯಾಗಿ ಓದಲು ಆಗಲ್ಲ, ಸಂದೇಹಗಳ ಪರಿಹಾರಕ್ಕೆ ಮೊಬೈಲ್ ನಲ್ಲಿ ಶಿಕ್ಷಕರನ್ನು ಸಂಪರ್ಕಿಸಿದರೆ ಸರಿಯಾಗಿ ಅರ್ಥ ಆಗಲ್ಲ, ಮನೆಗೆಲಸ, ಅದು ಇದು ಅಂತ ಓದಿನ ಕಡೆ ಗಮನ ಕೊಡಲು ಸಾಧ್ಯವಾಗಲ್ಲ.

ಈಗ ಶಾಲೆಗಳಲ್ಲೇ ಉಳಿಸಿಕೊಂಡು  ವಿಶೇಷ ಅಭ್ಯಾಸ ಮಾಡಿಸುವುದರಿಂದ ಹೆಚ್ಚಿನ ಅನುಕೂಲವಾಗಿದೆ. ಸಂದೇಹಗಳಿದ್ದರೆ ಶಿಕ್ಷಕರಿಂದ ಸ್ಥಳದಲ್ಲೇ ಪರಿಹರಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ದೊಡ್ಡರಾಯಪೇಟೆ ಸರ್ಕಾರಿ ಪ್ರೌಢಶಾಲೆಯ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿ ಮನು.

ಇದನ್ನೂ ಓದಿ: State Transport: SSLC ವಿದ್ಯಾರ್ಥಿಗಳಿಗೆ KSRTC, BMTCಯಲ್ಲಿ ಉಚಿತ ಪ್ರಯಾಣ, ಹಾಲ್ ಟಿಕೆಟ್ ತೋರಿಸಿದ್ರೆ ಸಾಕು

ಮನೆಮನೆಗೂ ತೆರಳಿ ಪಾಠ ಮಾಡುವ ಶಿಕ್ಷಕರು

ರಾತ್ರಿ ಪಾಠ ಹಾಗು ಶನಿವಾರ ಭಾನುವಾರ ಪೂರ್ಣ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳ ಮನೆಗಳಿಗೆ  ಶಿಕ್ಷಕರು ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳ ಮನೆಮನೆಗು ಭೇಟಿ ನೀಡಿ ವಿದ್ಯಾರ್ಥಿಗಳ ಮನೆಗಳಲ್ಲೇ ಅವರ ಸಂದೇಹಗಳನ್ನು ನಿವಾರಿಸುತ್ತಾ ಅವರ ಓದಿನ ಬಗ್ಗೆ ನಿಗಾ ವಹಿಸಿದ್ದಾರೆ.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ 12,271 ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಿದ್ದು  ಪರೀಕ್ಷೆಗೆ ಕೇವಲ ಐದು ದಿನ ಬಾಕಿ ಇದ್ದು ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸಕಲ ರೀತಿಯಲ್ಲು ಅವರನ್ನು ಸಜ್ಜುಗೊಳಿಸಲಾಗುತ್ತಿದೆ.
Published by:Annappa Achari
First published: