Residential School: ವಿದ್ಯಾರ್ಥಿನಿಯರು ಮಲಗಿದ್ದ ವೇಳೆ ಇಣುಕಿ ನೋಡ್ತಿದ್ದ ಶಿಕ್ಷಕ; ಕಿರುಕುಳ ಕೊಟ್ಟ ಟೀಚರ್ಸ್​ಗೆ ಬಿತ್ತು ಗೂಸಾ!

ವಸತಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕಂಪ್ಯೂಟರ್​ ಆಪರೇಟರ್ ಇಬ್ಬರ ವಿರುದ್ಧ ಹೈಸ್ಕೂಲ್ ವಿದ್ಯಾರ್ಥಿನಿಯರೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ವಿದ್ಯಾರ್ಥಿನಿಯರು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ವಸತಿ‌ ಶಾಲೆಗೆ ಆಗಮಿಸಿದ ಪೋಷಕರು ಕೈಗೆ ಸಿಕ್ಕ ಕಂಪ್ಯೂಟರ್ ಆಪರೇಟರ್​​ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:


ಕಲಬುರಗಿ (ಸೆ.13) : ಮಕ್ಕಳು ಚೆನ್ನಾಗಿ ಓದಲಿ ಎಂದು ಅನೇಕ ಪೋಷಕರು (Parents) ವಸತಿ ಶಾಲೆಗಳಲ್ಲಿ ಮಕ್ಕಳನ್ನು ಬಿಟ್ಟಿರುತ್ತಾರೆ. ಆದ್ರೆ ಕೆಲ ವಸತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯವಿರಲಿ ಮಕ್ಕಳಿಗೆ ಭದ್ರತೆ ಎನ್ನುವುದೇ ಇರಲ್ಲ. ಕಲಬುರಗಿಯಲ್ಲೂ ಶಿಕ್ಷಕರೇ (Teacher) ಮಕ್ಕಳಿಗೆ ಲೈಂಗಿಕ ಕಿರುಕುಳ (Harassing) ಕೊಟ್ಟಿರೋ ಘಟನೆ ಬೆಳಕಿಗೆ ಬಂದಿದೆ. ವಸತಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕಂಪ್ಯೂಟರ್​ ಆಪರೇಟರ್ (Computer Operator)​ ಇಬ್ಬರೂ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಂಚಾವರಂ ಠಾಣಾ ವ್ಯಾಪ್ತಿಯಲ್ಲಿರುವ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಶಿಕ್ಷಕರ ವಿರುದ್ಧ ಬಾಲಕಿಯರ ದೂರು

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಇರೋ ಈ ವಸತಿ ಶಾಲೆಯಲ್ಲಿ ಅನೇಕ ವಿದ್ಯಾರ್ಥಿನಿಯರಿದ್ದಾರೆ. ವಸತಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕಂಪ್ಯೂಟರ್​ ಆಪರೇಟರ್ ಇಬ್ಬರ ವಿರುದ್ಧ ಹೈಸ್ಕೂಲ್ ವಿದ್ಯಾರ್ಥಿನಿಯರೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇಬ್ಬರ ವಿರುದ್ಧ ದೂರು ನೀಡಿರೋ ವಿದ್ಯಾರ್ಥಿನಿಯರು ಶಿಕ್ಷಕರ ಅಸಭ್ಯ ವರ್ತನೆ ಬಗ್ಗೆ ಆರೋಪಿಸಿದ್ದಾರೆ.

ಬಾಲಕಿಯರ ಮೈ-ಕೈ ಮುಟ್ಟಿ ಅಸಭ್ಯ ವರ್ತನೆ

ಬಾಲಕಿಯರ ಮೈ-ಕೈ ಮುಟ್ಟುವುದು, ಅಸಭ್ಯ ಮತ್ತು ಅಶ್ಲೀಲವಾಗಿ ಮಾತನಾಡುವುದು, ಕೊಠಡಿಯಲ್ಲಿ ಮಲಗಿದಾಗ ಇಣುಕಿ ನೋಡುವುದು ಮಾಡುತ್ತಾರೆ ಎಂದು ಆರೋಪ ಮಾಡಿರುವ ವಿದ್ಯಾರ್ಥಿನಿಯರು, ನಿನ್ನೆ ರಾತ್ರಿ ಊಟ ಮಾಡದೇ ಮುಖ್ಯ ಶಿಕ್ಷಕ ಮತ್ತು ಕಂಪ್ಯೂಟರ್ ಆಪರೇಟರ್ ವಿರುದ್ಧ ಕ್ರಮಕ್ಕೆ‌ ಆಗ್ರಹಿಸಿದರು.

ಕಂಪ್ಯೂಟರ್ ಆಪರೇಟರ್​ಗೆ ಬಿತ್ತು ಧರ್ಮದೇಟು

ವಿದ್ಯಾರ್ಥಿನಿಯರು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ವಸತಿ‌ ಶಾಲೆಗೆ ಆಗಮಿಸಿದ ಪೋಷಕರು ಕೈಗೆ ಸಿಕ್ಕ ಕಂಪ್ಯೂಟರ್ ಆಪರೇಟರ್​​ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ‌ ಬಗ್ಗೆ ಮಾಹಿತಿ ಪಡೆದ ಚಿಂಚೋಳಿ ತಹಶೀಲ್ದಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕಲಬುರಗಿ ಎಸ್​ಪಿ ಇಶಾ ಪಂತ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಸ್ಟೆಲ್​ಗೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ಕೌನ್ಸೆಲಿಂಗ್ ಮಾಡಿ ಧೈರ್ಯ ಹೇಳಿ ಊಟ ಮಾಡಲು‌ ಮನವೊಲಿಸಿ ತಾವೇ ಮುಂದೆ ನಿಂತು ಊಟ ಮಾಡಿಸಿದ್ದಾರೆ.



ಇದನ್ನೂ ಓದಿ: Mother Kills her Children: ಅತ್ತೆ ಜೊತೆ ಭಯಂಕರ ಜಗಳ; ತನ್ನಿಬ್ಬರು ಗಂಡು ಮಕ್ಕಳಿಗೆ ಬೆಂಕಿಯಿಟ್ಟ ಸೊಸೆ!

ಇಬ್ಬರನ್ನು ಬಂಧಿಸಿ ಪೊಲೀಸರಿಂದ ವಿಚಾರಣೆ

ಸದ್ಯ ಸಮಾಜ ಕಲ್ಯಾಣ ಇಲಾಖೆಯ ಚಿಂಚೋಳಿ ತಾಲೂಕು ಸಹಾಯಕ ನಿರ್ದೇಶಕ ಪ್ರಭುಲಿಂಗ ವಾಲಿ ಅವರು ನೀಡಿದ ದೂರಿನ ಮೇರೆಗೆ ವಸತಿ ಶಾಲೆಯ ಮುಖ್ಯ ಶಿಕ್ಷಕ ಮತ್ತು ಕಂಪ್ಯೂಟರ್ ಆಪರೇಟರ್ ವಿರುದ್ಧ ಕುಂಚಾವರಂ ಠಾಣೆಯಲ್ಲಿ ಪೊಕ್ಸೊ, ಅಟ್ರಾಸಿಟಿ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಇಬ್ಬರನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬ್ಯಾಡ್ಮಿಂಟನ್ ಕೋಚ್​​ ನಿಂದಲೇ ಕಿರುಕುಳ

ನಿನಗೆ ಒಳ್ಳೆ ಭವಿಷ್ಯ ಕೊಡುತ್ತೇನೆ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದ ಘಟನೆ ಪುಣೆಯ ಬ್ಯಾಡ್ಮಿಂಟನ್ ಕ್ಲಬ್ ಒಂದರಲ್ಲಿ ನಡೆದಿತ್ತು. ಕೋಚಿಂಗ್ ಮುಗಿಸಿದ ನಂತರ ಎಲ್ಲಾ ಮಕ್ಕಳು ತಮ್ಮ ಮನೆಯತ್ತ ಹೊರಟಿದ್ದರು. ಆದರೆ ಈ ಬಾಲಕಿಯನ್ನ ಇನ್ನು ಕೆಲವು ಹೊತ್ತು ಪ್ರಾಕ್ಟೀಸ್ ಮಾಡಲು ಕೋಚ್ ಹೇಳಿದ್ದಾನೆ. ಕೋಚ್ ಹೇಳಿದಂತೆ ಬಾಲಕಿಯು ಕೂಡ ಹೆಚ್ಚಿನ ಸಮಯ ಪ್ರಾಕ್ಟಿಸ್ ಮಾಡಿ ಮನೆಕಡೆ ಹೊರಡಲು ರೆಡಿಯಾಗಿದ್ದಾಳೆ. ಈ ವೇಳೆ ಶಟಲ್ ಗಳನ್ನು ಬಾಕ್ಸ್ ನಲ್ಲಿ ಹಾಕಿ ಲಾಕರ್ ರೂಂನಲ್ಲಿ ಎತ್ತಿಡಲು ಕೋಚ್ ಬಾಲಕಿ ತಿಳಿಸಿದ್ರು.

ಇದನ್ನು ಓದಿ : ಅಪ್ಪ ಅಶ್ಲೀಲ ವಿಡಿಯೋ ತೋರಿಸಿದ್ರು, ಹೋಟೆಲ್​ನಲ್ಲಿ ರೇಪ್ ಮಾಡಿದ್ರು: 17 ವರ್ಷದ ಬಾಲಕಿ ಹೇಳಿಕೆ

ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದ ಕೋಚ್

ಬಾಲಕಿ ಲಾಕರ್ ರೂಂ ಬಳಿ ಹೋಗಿದ್ರೆ. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಕೋಚ್, ಆಕೆಯನ್ನು ತುಂಬಾ ಸಲುಗೆಯಿಂದ ಮಾತನಾಡಿಸಲು ಶುರು ಮಾಡಿದ್ದನಂತೆ. ಯಾಕೆ ನೀನು ಸರಿಯಾಗಿ ಕ್ಲಾಸ್ ಗೆ
ಬರುತ್ತಿಲ್ಲ. ರೆಗುಲರ್ ಆಗಿ ಬಂದು ಆಟವಾಡುವುದನ್ನು ಕಲಿತುಕೋ ಎಂದು ಬಾಲಕಿಗೆ ಹೇಳುತ್ತಾ ಅಸಭ್ಯವಾಗಿ ವರ್ತಿಸಿದ್ದ.

Published by:ಪಾವನ ಎಚ್ ಎಸ್
First published: