Yadagiri: ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್; ಬುಡ್ಗ ಜನಾಂಗದ ಸಮುದಾಯದ ಮಕ್ಕಳಿಗೆ ಶಿಕ್ಷಣ ಮರೀಚಿಕೆ

ಶಿಕ್ಷಕ ಶರಣಪ್ಪ ಕಾಟಾಚಾರಕ್ಕೆ ಎಂಬಂತೆ ಬೆಳಗ್ಗೆ ಶಾಲೆಗೆ ಆಗಮಿಸಿ ಸಹಿ ಮಾಡಿ ಮತ್ತೆ  ಮರಳಿ ಬರುವದಿಲ್ಲ. ಶಿಕ್ಷಕರೇ ಸರಿಯಾಗಿ ಕೆಲಸಕ್ಕೆ ಬಾರದಕ್ಕೆ ವಿದ್ಯಾರ್ಥಿಗಳು ಕೂಡ ಶಾಲೆಗೆ ಬರುತ್ತಿಲ್ಲ.

ಶಾಲೆ

ಶಾಲೆ

  • Share this:
ಯಾದಗಿರಿ: ಕೆಲಸಕ್ಕೆ (Duty) ಚಕ್ಕರ್ ಹಾಕಿ ಸಂಬಳಕ್ಕೆ ಮಾತ್ರ ಆ ಶಾಲೆಯ ಶಿಕ್ಷಕ (School Teacher) ಹಾಜರಾಗುತ್ತಿದ್ದಾರೆ‌. ಸರಕಾರ  (Government) ಬಡ ಮಕ್ಕಳ ಅನುಕೂಲಕ್ಕಾಗಿ ಶಾಲೆ ಆರಂಭಿಸಿದೆ.  ಆದರೆ ಸರಕಾರಿ ಶಾಲೆ ಶಿಕ್ಷಕ (School Teacher) ಕೆಲಸಕ್ಕೆ ಹಾಜರಾಗದೇ ಸಂಬಳಕ್ಕೆ ಮಾತ್ರ ಹಾಜರಾಗುತ್ತಿದ್ದಾರೆ‌. ಸರಕಾರದಿಂದ ಕೈ ತುಂಬಾ ಸಂಬಳ (Salary) ಪಡೆಯುವ ಶಿಕ್ಷಕ ಮಕ್ಕಳಿಗೆ ಶಿಕ್ಷಣ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಿಠಕಲ್ (Gurumitkal, Yadagiri) ಪಟ್ಟಣದ ಇಂದಿರಾ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (Lower Primary School) ಶಿಕ್ಷಕರು ಇಲ್ಲ. ಹಾಗಾಗಿ ವಿದ್ಯಾರ್ಥಿಗಳು ಸಹ ಇರಲ್ಲ.

ಈ ಶಾಲೆಗೆ ಬಡ್ಗ ಜನಾಂಗದವರ ಮಕ್ಕಳು ಪ್ರವೇಶ ಪಡೆದಿದ್ದಾರೆ. 1 ರಿಂದ 5ನೇ ತರಗತಿ ಶಾಲೆ ಇದಾಗಿದ್ದು, ಕೇವಲ 28 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ಓರ್ವ ಶಿಕ್ಷಕ ಶರಣಪ್ಪ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಹಿ ಮಾಡಿ ನಾಪತ್ತೆಯಾಗುವ ಶಿಕ್ಷಕ

ಶಿಕ್ಷಕ ಶರಣಪ್ಪ ಕಾಟಾಚಾರಕ್ಕೆ ಎಂಬಂತೆ ಬೆಳಗ್ಗೆ ಶಾಲೆಗೆ ಆಗಮಿಸಿ ಸಹಿ ಮಾಡಿ ಮತ್ತೆ  ಮರಳಿ ಬರುವದಿಲ್ಲ. ಶಿಕ್ಷಕರೇ ಸರಿಯಾಗಿ ಕೆಲಸಕ್ಕೆ ಬಾರದಕ್ಕೆ ವಿದ್ಯಾರ್ಥಿಗಳು ಕೂಡ ಶಾಲೆಗೆ ಬರುತ್ತಿಲ್ಲ.

ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು

ಅಲೆಮಾರಿ ಜನಾಂಗದ ಮಕ್ಕಳಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಗುಣಮಟ್ಟದ ಶಿಕ್ಷಣ ನೀಡಬೇಕಾದ ಶಿಕ್ಷಕ ,ಅಲೆಮಾರಿ ಜನಾಂಗದ ಮಕ್ಕಳಂದ್ರೆ ಅಲರ್ಜಿವೆಂಬಂತೆ ವರ್ತನೆ ತೋರುತ್ತಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ಓದಿಸದಿದ್ದರೂ ತನಗೆ ತಿಂಗಳ ಸಂಬಳ ಬರುತ್ತೆಂದು ತಿಳಿದು ಶಾಲೆಗೆ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ‌. ಇದರಿಂದ ಬಡ ಮಕ್ಕಳು ಶಿಕ್ಷಣ ಪಡೆಯಲು ವಂಚಿತರಾಗಿದ್ದಾರೆ.

ಇದನ್ನೂ ಓದಿ: J Manjunath: ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಜೆ ಮಂಜುನಾಥ್

ಶಿಕ್ಷಕರಿಂದಾಗಿ ಮಕ್ಕಳು ಸಹ ಶಾಲೆಗೆ ಹೋಗ್ತಿಲ್ಲ

ಈ ಬಗ್ಗೆ ಸ್ಥಳೀಯ ಬಾಲಕೃಷ್ಣ ಮಾತನಾಡಿ, ಸರಕಾರ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಇಂದಿರಾನಗರ ಕಾಲೋನಿಯಲ್ಲಿ ಶಾಲೆ ಆರಂಭ ಮಾಡಿದೆ. ಆದರೆ, ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಿ ಶಿಕ್ಷಣ ನೀಡುವ ಕೆಲಸ ಮಾಡುತ್ತಿಲ್ಲ. ಸರಿಯಾಗಿ ಶಿಕ್ಷಕರು ಬಾರದ ಕಾರಣ ಮಕ್ಕಳು ಶಾಲೆಗೆ ಹೋಗುತ್ತಿಲ್ಲ.

ಗುಣಮಟ್ಟದ ಶಿಕ್ಷಣ ನೀಡುವಂತೆ ಸ್ಥಳೀಯರ ಆಗ್ರಹ

ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

Teachers absent in Government School everyday nmpg mrq
ಶಾಲೆ


ಜನ ಸರಕಾರ ಬಟ್ಟೆ, ಬಿಸಿಯೂಟ ಹೀಗೆ ಮಕ್ಕಳು ಶಾಲೆಯಿಂದ ವಂಚಿತರಾಗಬಾರದೆಂದು ಬಡ ಮಕ್ಕಳಿಗೆ ಅನೇಕ ಯೋಜನೆ ಜಾರಿಗೆ ತಂದರು. ಈ ಶಾಲೆಯ ಶಿಕ್ಷಕ ಶರಣಪ್ಪ ಸರಿಯಾಗಿ ಕೆಲಸಕ್ಕೆ ಬಾರದಕ್ಕೆ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಶಿಕ್ಷಕ ಶರಣಪ್ಪ ವಿರುದ್ಧ ಆಕ್ರೋಶ

ಸರಕಾರ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೋಟ್ಯಂತರ ಹಣ ಖಣ ಖರ್ಚು ಮಾಡುತ್ತದೆ. ಆದರೆ, ಸರಕಾರದ ವೇತನ ಪಡೆದು ನಿತ್ಯವೂ ಶಾಲೆಗೆ ಬಾರದೇ ಶಿಕ್ಷಕ ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗುವ ಕೆಲಸ ಮಾಡುತ್ತಿದ್ದಾರೆ.

ಈ ಬಗ್ಗೆ ಸಾಕಷ್ಟು ಬಾರಿ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲವೆಂದು ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Ancient Building: ರಾಮನಗರದಲ್ಲಿ ಪತ್ತೆಯಾಗಿದೆ ಟಿಪ್ಪು ಕಾಲದ ನೆಲಮಾಳಿಗೆ

ಡಿಡಿಪಿಐ ಶಾಂತಗೌಡ ಪಾಟೀಲ್ ಭರವಸೆ

ಈ ಬಗ್ಗೆ ಡಿಡಿಪಿಐ ಶಾಂತಗೌಡ ಪಾಟೀಲ್ ಅವರು ಮಾತನಾಡಿ, ಈ ಬಗ್ಗೆ ಇಲಾಖೆ ಗಮನಕ್ಕೆ ಬಂದಿಲ್ಲ. ಶಿಕ್ಷಕರು ಗೈರಾಗಿದ್ದ ಬಗ್ಗೆ ತಪ್ಪಿತಸ್ಥ ಶಿಕ್ಷಕರ ಮೇಲೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
Published by:Mahmadrafik K
First published: