ವಿಫಲವಾದ ಕೊರೋನಾ ವಿರುದ್ಧದ ಹೋರಾಟ; ಏರ್​ಲಿಫ್ಟ್​​ ಮುನ್ನವೇ ಇಹಲೋಕ ತ್ಯಜಿಸಿದ ಮೂಡಬಿದ್ರೆ ಶಿಕ್ಷಕಿ

ಶಿಕ್ಷಕಿಯ ಚಿಕಿತ್ಸೆಗೆ ಸರ್ಕಾರವೇ ಮುಂದೆ ಬಂದಿತ್ತು. ಉನ್ನತ ಚಿಕಿತ್ಸೆಗಾಗಿ ಶಿಕ್ಷಕಿ ಪದ್ಮಾಕ್ಷಿ ಅವರನ್ನು ಬೆಂಗಳೂರು ಅಥವಾ ಮದ್ರಾಸ್ ಗೆ ಏರ್ ಲಿಫ್ಟ್ ಮಾಡುವ ಸಿದ್ಧತೆಯೂ ನಡೆದಿತ್ತು. ಕೊರೋನಾ ಎಫೆಕ್ಟ್ ನಿಂದ ಶ್ವಾಸಕೋಶದಲ್ಲಿ ತೀವ್ರ ತೊಂದರೆ ಎದುರಿಸುತ್ತಿದ್ದ ಪದ್ಮಾಕ್ಷಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದ್ದಾರೆ. ಶಿಕ್ಷಕಿಯ ನಿಧನಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

news18-kannada
Updated:October 17, 2020, 12:29 PM IST
ವಿಫಲವಾದ ಕೊರೋನಾ ವಿರುದ್ಧದ ಹೋರಾಟ; ಏರ್​ಲಿಫ್ಟ್​​ ಮುನ್ನವೇ ಇಹಲೋಕ ತ್ಯಜಿಸಿದ ಮೂಡಬಿದ್ರೆ ಶಿಕ್ಷಕಿ
ಕೊರೋನಾಗೆ ಬಲಿಯಾದ ಶಿಕ್ಷಕಿ
  • Share this:
ಉಡುಪಿ(ಅ.17): ರಾಜ್ಯ ಸರ್ಕಾರದ ವಿದ್ಯಾಗಮ ಯೋಜನೆ ಜಾರಿ ಪರಿಣಾಮ ಆ ಶಿಕ್ಷಕ ದಂಪತಿಗೆ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿತ್ತು. ಶಿಕ್ಷಕ ಕೊರೋನಾದಿಂದ ಹುಷಾರಾದ್ರೂ, ಶಿಕ್ಷಕಿ ಮಾತ್ರ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ಮಾಡುತ್ತಿದ್ದರು. ಶಿಕ್ಷಕಿಯ ರಕ್ಷಣೆಗೆ ಇಡೀ ಸರ್ಕಾರವೇ ಬಂದರೂ ವಿಧಿಯಾಟದ ಮುಂದೆ ಎಲ್ಲಾ ಪ್ರಯತ್ನಗಳು ಸೋತವು. ಮಗಳ ಪ್ರಾರ್ಥನೆಯೂ ಫಲಿಸದೆ ಮಹಾಮಾರಿ ಆ ಶಿಕ್ಷಕಿಯನ್ನು ಬಲಿ ಪಡೆದಿದೆ. ಸಾವನ್ನಪ್ಪಿದ ಮಹಿಳೆಯ ಹೆಸರು ಪದ್ಮಾಕ್ಷಿ. ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ನಿವಾಸಿ. ರಾಜ್ಯ ಸರ್ಕಾರದ ವಿದ್ಯಾಗಮ ಎನ್ನುವ ಯೋಜನೆ ಶಿಕ್ಷಕಿಯಾಗಿರೋ ಇವರನ್ನ ಅಕ್ಷರಶಃ ಸಾವಿನ ದವಡೆಗೆ ತಳ್ಳಿದೆ. ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಸಾವು‌ ಬದುಕಿನ ಮಧ್ಯೆ ನಡೆಸುತ್ತಿದ್ದ ಹೋರಾಟದಲ್ಲಿ ಪದ್ಮಾಕ್ಷಿ ಸೋತಿದ್ದಾರೆ. 15 ದಿನಗಳ ಜೀವನ್ಮರಣ ಹೋರಾಟದಲ್ಲಿ ಕೊರೊನಾವೇ ಗೆದ್ದಿದೆ. ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕಿಯ ಚಿಕಿತ್ಸೆಯ ಬಗ್ಗೆ ಸರ್ಕಾರವೇ ಮುಂದೆ ಬಂದಿತ್ತು. ತಾಯಿಯ ಸ್ಥಿತಿಗೆ ಸರ್ಕಾರವೇ ಕಾರಣ ಅಂತಾ ಶಿಕ್ಷಕಿಯ ಮಗಳು ಐಶ್ವರ್ಯ ಜೈನ್ ಫೇಸ್ ಬುಕ್ ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಮಾಧ್ಯಮಗಳಲ್ಲಿ ಈ ವರದಿ ಬಂದ ತಕ್ಷಣ ಎಚ್ಚೆತ್ತ ಸರ್ಕಾರ ಶಿಕ್ಷಕಿಯ ನೆರವಿಗೆ ಧಾವಿಸಿತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದಿಯಾಗಿ ಎಲ್ಲರೂ ಶಿಕ್ಷಕಿಯ ರಕ್ಷಣೆಗೆ ನಿಂತರು. ಆದರೆ ವಿಧಿಯ ಮುಂದೆ ಸರ್ಕಾರದ ಹೋರಾಟವೆಲ್ಲಾ ವ್ಯರ್ಥವಾಗಿದೆ. ಶಿಕ್ಷಕಿ ಪದ್ಮಾಕ್ಷಿ ಕಾಲನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ.

ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳು ಸಾರ್ವಜನಿಕರಿಗೆ ಮುಕ್ತ; ಜಿಲ್ಲಾಧಿಕಾರಿ ಹಾಕಿದ್ದ ನಿರ್ಬಂಧ ತೆರವು

ಶಿಕ್ಷಕಿ ಪದ್ಮಾಕ್ಷಿ ಎನ್‌. ಅವರು ಮಕ್ಕಿಯ ಜವಾಹರಲಾಲ ನೆಹರು ಅನುದಾನಿತ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೋವಿಡ್‌ ಹಿನ್ನೆಲೆಯಲ್ಲಿ ಶಾಲೆಗಳು ಬಂದ್‌ ಆಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ‘ವಿದ್ಯಾಗಮನ’ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಶಿಕ್ಷಕಿಯ ಚಿಕಿತ್ಸೆಗೆ ಸರ್ಕಾರವೇ ಮುಂದೆ ಬಂದಿತ್ತು. ಉನ್ನತ ಚಿಕಿತ್ಸೆಗಾಗಿ ಶಿಕ್ಷಕಿ ಪದ್ಮಾಕ್ಷಿ ಅವರನ್ನು ಬೆಂಗಳೂರು ಅಥವಾ ಮದ್ರಾಸ್ ಗೆ ಏರ್ ಲಿಫ್ಟ್ ಮಾಡುವ ಸಿದ್ಧತೆಯೂ ನಡೆದಿತ್ತು. ಕೊರೋನಾ ಎಫೆಕ್ಟ್ ನಿಂದ ಶ್ವಾಸಕೋಶದಲ್ಲಿ ತೀವ್ರ ತೊಂದರೆ ಎದುರಿಸುತ್ತಿದ್ದ ಪದ್ಮಾಕ್ಷಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದ್ದಾರೆ. ಶಿಕ್ಷಕಿಯ ನಿಧನಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಕೊರೋನಾ ವೈರಸ್ ಶಿಕ್ಷಕಿಯ ಪತಿ, ಡಿಕೆ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಶಶಿಕಾಂತ್ ಗೂ ತಗುಲಿದ್ರೂ, ಅವರು ಜೀವಾಪಾಯದಿಂದ ದೂರವಾಗಿದ್ದರು. ಎರಡು ದಿನಗಳ ಹಿಂದೆ ಶಿಕ್ಷಕಿ ಪದ್ಮಾಕ್ಷಿಯ ದೇಹದಿಂದ ಕೊರೋನಾ ದೂರವಾಗಿದ್ರೂ ಆರೋಗ್ಯ ಮಾತ್ರ ಸ್ಥಿರವಾಗಿರಲಿಲ್ಲ. ಶ್ವಾಸಕೋಶಕ್ಕೆ ಕೊರೋನಾ ಸೋಂಕು ಲಗ್ಗೆ ಇಟ್ಟು ತೀವ್ರ ತೊಂದರೆ ಉಂಟು ಮಾಡಿತ್ತು‌. ತೀವ್ರ ಹೃದಯ ಸ್ತಂಭನದಿಂದ ಶುಕ್ರವಾರ ಮುಂಜಾನೆ ಶಿಕ್ಷಕಿ ಪದ್ಮಾಕ್ಷಿ ನಿಧನರಾಗಿದ್ದಾರೆ.

ಒಟ್ಟಿನಲ್ಲಿ  ಕೊರೋನಾ ಮಾಹಾಮಾರಿಯ ಸಾವಿನ ಯಾನಕ್ಕೆ ಅಮಾಯಕ ಶಿಕ್ಷಕಿ ಬಲಿಯಾಗಿದ್ದಾರೆ. ವಿಧಿಯ ಮುಂದೆ ಮಾನವ ಶಕ್ತಿಯೆಲ್ಲಾ ಗೌಣ ಅಂತಾ ಮತ್ತೊಮ್ಮೆ ಸಾಬೀತಾಗಿದೆ.
Published by: Latha CG
First published: October 17, 2020, 12:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading