ಶಾಲಾ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ; ಸಿಸಿಟಿವಿಯಲ್ಲಿ ಬಯಲಾಯ್ತು ಕಾಮುಕನ ನಿಜಬಣ್ಣ

ಶಾಲೆಯ ಶಿಕ್ಷಕನೊರ್ವ ತನ್ನ ಕೊಠಡಿಯಲ್ಲಿ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಪ್ರಚೋದನೆ ಕಾರ್ಯ ನಡೆಸಿದ್ದಾನೆ. ಆತ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿ, ಇದೀಗ ವಿಡಿಯೋ ವೈರಲ್​ ಆಗಿದೆ. 

HR Ramesh | news18
Updated:May 13, 2019, 3:08 PM IST
ಶಾಲಾ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ; ಸಿಸಿಟಿವಿಯಲ್ಲಿ ಬಯಲಾಯ್ತು ಕಾಮುಕನ ನಿಜಬಣ್ಣ
ಶಾಲಾ ವಿದ್ಯಾರ್ಥಿಯೊಂದಿಗೆ ಕಾಮುಕ ಶಿಕ್ಷಕನ ಅಸಭ್ಯ ವರ್ತನೆ
  • News18
  • Last Updated: May 13, 2019, 3:08 PM IST
  • Share this:
ಬಾಗಲಕೋಟೆ: ಮಕ್ಕಳಿಗೆ ಪಾಠ ಹೇಳಿಕೊಟ್ಟು, ಅವರನ್ನು ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕನಿಗೆ ಸಮಾಜದಲ್ಲಿ ಅತ್ಯುತ್ತಮ ಸ್ಥಾನವಿದೆ. ಗುರುವನ್ನು ದೇವರ ಸ್ಥಾನದಲ್ಲಿಟ್ಟು ಗೌರವಿಸುವ ಸಂಪ್ರದಾಯ ನಮ್ಮಲ್ಲಿದೆ. ಇಂತಹ ಸ್ಥಾನದಲ್ಲಿ ಇರುವ ಗುರು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದರೆ, ಅದು ಮಕ್ಕಳ ಮೇಲೆ ಸಮಾಜದ ಮೇಲೆ ಎಂತಹ ದುಷ್ಪರಿಣಾಮ ಬೀರಬಹುದು ಎಂಬುದು ಎಲ್ಲರಿಗೂ ಗೊತ್ತಿರುವಂತಹದ್ದೆ.

ಹಾಸನ ಕಾಲೇಜೊಂದರ ಪ್ರಾಂಶುಪಾಲ ವಿದ್ಯಾರ್ಥಿನಿಯರನ್ನು ಪ್ರವಾಸಕ್ಕೆ ಕರೆದೊಯ್ದು ಅವರೊಂದಿಗೆ ಅಶ್ಲೀಲವಾಗಿ ವರ್ತಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಮತ್ತೆ ಅಂತಹದ್ದೆ ಘಟನೆ ಬಾಗಲಕೋಟೆಯಲ್ಲೂ ನಡೆದಿದೆ.

ಇದನ್ನು ಓದಿ: ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ವಿದ್ಯಾರ್ಥಿನಿಯರ ಜೊತೆ ಚೆಲ್ಲಾಟವಾಡಿದ ಪ್ರಿನ್ಸಿಪಾಲ್​; ವಿಡಿಯೋ ವೈರಲ್​​

ಶಾಲೆಯ ಶಿಕ್ಷಕನೊರ್ವ ತನ್ನ ಕೊಠಡಿಯಲ್ಲಿ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಪ್ರಚೋದನೆ ಕಾರ್ಯ ನಡೆಸಿದ್ದಾನೆ. ಆತ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿ, ಇದೀಗ ವಿಡಿಯೋ ವೈರಲ್​ ಆಗಿದೆ.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಾಲೆಯೊಂದರಲ್ಲಿ ಫೆಬ್ರವರಿ ತಿಂಗಳಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಶಾಲಾಬಾಲಕಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಕಾಮುಕ ಶಿಕ್ಷಕ ಬೇಲೂರಪ್ಪನನ್ನು ಅಮಾನತ್ತು ಮಾಡಲಾಗಿದ್ದು, ಆತನ ಮೇಲೆ ಪೋಕ್ಸೋ ಕಾಯ್ದೆಯಡಿ ಬಾದಾಮಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಾಮುಕ ಶಿಕ್ಷಕನನ್ನು ಮೇ 6ರಂದು ಬಂಧಿಸಲಾಗಿದೆ.
First published:May 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ