ಕರ್ನಾಟಕ ಶಿಕ್ಷಣ ಇಲಾಖೆಯು (Karnataka Education Department) 2022ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ (TET Result) ಪ್ರಕಟಿಸಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಫಲಿತಾಂಶ ಪರೀಕ್ಷಿಸಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಒಟ್ಟು ಅಭ್ಯರ್ಥಿಗಳ ಪೈಕಿ ಪತ್ರಿಕೆ -1 ರಲ್ಲಿ 20,070 ಅಭ್ಯರ್ಥಿಗಳು, ಪತ್ರಿಕೆ 2 ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಈ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್ (Minister B C Nagesh) ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಈ ವೆಬ್ ಸೈಟ್ನಲ್ಲಿ TET ಫಲಿತಾಂಶ ನೋಡಬಹುದಾಗಿದೆ
https://sts.karnataka.gov.in/TET/
ಫಲಿತಾಂಶ ಚೆಕ್ ಮಾಡುವ ವಿಧಾನ
* ಶಿಕ್ಷಣ ಇಲಾಖೆಯ http://www.schooleducation.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
* ತೆರೆದ ಹೋಮ್ ಪೇಜ್‌ನಲ್ಲಿ 'KARTET-2022 Results' ಎಂಬಲ್ಲಿ ಕ್ಲಿಕ್ ಮಾಡಿ.
* ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿಯನ್ನು ನೀಡಿ 'Submit' ಎಂಬಲ್ಲಿ ಕ್ಲಿಕ್ ಮಾಡಿರಿ.
* ಪರೀಕ್ಷಾ ಫಲಿತಾಂಶ ಸಿಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಟಿಇಟಿ ಫಲಿತಾಂಶದ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್ (Minister B C Nagesh) ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಫಲಿತಾಂಶವನ್ನು ಕೆಲ ಹೊತ್ತಿನಲ್ಲಿ ಪ್ರಕಟಿಸಲಾಗುವುದು.
ಪತ್ರಿಕೆ 1ರಲ್ಲಿ 20,070 ಅಭ್ಯರ್ಥಿಗಳು ಹಾಗೂ
ಪತ್ರಿಕೆ 2ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.@BSBommai
— B.C Nagesh (@BCNagesh_bjp) December 14, 2022
ಕರ್ನಾಟಕ ಶಾಲಾ ಶಿಕ್ಷಕರ ಪರೀಕ್ಷೆಯನ್ನು ನವೆಂಬರ್ 06,2022 ರಂದು ನಡೆಸಲಾಗಿತ್ತು. 332913 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 28,471 ಅಭ್ಯರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಪೇಪರ್-1 ಪರೀಕ್ಷೆಗೆ 140801 ಅಭ್ಯರ್ಥಿಗಳು ಮತ್ತು ಪೇಪರ್ 2 ಪರೀಕ್ಷೆಗೆ 192112 ಅಭ್ಯರ್ಥಿಗಳು ಹಾಜರಾಗಿದ್ದರು. ಪತ್ರಿಕೆ-1ಕ್ಕೆ 1,54,929 ಅಭ್ಯರ್ಥಿಗಳು ಮತ್ತು ಪತ್ರಿಕೆ-2 ಕ್ಕೆ 2,06456 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಪೇಪರ್ 1 ಪರೀಕ್ಷೆ ಬರೆದ ಅಭ್ಯರ್ಥಿಗಳು
ಬೆಂಗಳೂರು ದಕ್ಷಿಣದಲ್ಲಿ 3871, ಬೆಂಗಳೂರು ಉತ್ತರದಲ್ಲಿ 3555, ಬೆಂಗಳೂರು ಗ್ರಾಮೀಣ ಪ್ರದೇಶದಲ್ಲಿ 788 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಚಿತ್ರದುರ್ಗದಲ್ಲಿ 5492, ದಾವಣಗೆರೆಯಲ್ಲಿ 5473, ಕೋಲಾರ 3266, ಶಿವಮೊಗ್ಗ 4152, ತುಮಕೂರಿನಲ್ಲಿ 4229, ಚಿಕ್ಕಬಳ್ಳಾಪುರದಲ್ಲಿ 2495 ಮಧುಗಿರಿಯಲ್ಲಿ 1076, ಬಾಗಲಕೋಟೆಯಲ್ಲಿ 5438, ಬೆಳಗಾವಿ-5686, ವಿಜಯಪುರ- 9844, ಧಾರವಾಡ- 6640, ಗದಗ-3861 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಹಾವೇರಿಯಲ್ಲಿ 4233, ಉತ್ತರ ಕನ್ನಡದಲ್ಲಿ 1361 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
35 ಶೈಕ್ಷಣಿಕ ಜಿಲ್ಲೆಗಳಲ್ಲಿ 589 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-1 ಮತ್ತು 781 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-2 ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆದಿತ್ತು. ಮೊದಲ ಅಧಿವೇಶನ ಪತ್ರಿಕೆ-1 ಸಮಯ 9.30 to 12 ಅಪರಾಹ್ನದವರೆಗೆ ಮತ್ತು ಎರಡನೇ ಅಧಿವೇಶನ ಪತ್ರಿಕೆ- II ಸಮಯ 2.00 to 4.30PM ರವರೆಗೆ ನಡೆದಿತ್ತು.
ನವೆಂಬರ್ 26 ರಂದು ಕೀ ಉತ್ತರ ಪ್ರಕಟ
ನವೆಂಬರ್ 26 ರಂದು ಕೀ ಉತ್ತರಗಳನ್ನುಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಅಭ್ಯರ್ಥಿಗಳು ಉತ್ತರಗಳನ್ನು ಪರಿಶೀಲಿಸಿಕೊಳ್ಳಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು
ಇದನ್ನೂ ಓದಿ: Midday Meal: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಹಬ್ಬದೂಟ! ವಿಶೇಷ ದಿನಗಳಲ್ಲಿ ಸ್ಪೆಷಲ್ ಭೋಜನ; ಶಿಕ್ಷಣ ಇಲಾಖೆ ಸುತ್ತೋಲೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ