ದೀಪಿಕಾ ಪಡುಕೋಣೆ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ ಕಾಂಗ್ರೆಸ್​​ ಸರ್ಕಾರ; ಮಧ್ಯ ಪ್ರದೇಶ, ಚತ್ತೀಸ್‌ಘಡದಲ್ಲಿ ‘ಚಾಪಾಕ್‘​​ಗೆ ಟ್ಯಾಕ್ಸ್​​ ಫ್ರೀ​

ಎರಡು ದಿನಗಳ ಹಿಂದೆ ಚಪಾಕ್’​ ಸಿನಿಮಾ ಪ್ರಚಾರಕ್ಕಾಗಿ ದೆಹಲಿಯಲ್ಲಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್​ಯು ಕ್ಯಾಂಪಸ್​ಗೆ ತೆರಳಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬೆನ್ನಲ್ಲೇ ದೀಪಿಕಾ ಹಾಗೂ ಚಪಾಕ್​ ಸಿನಿಮಾ ಬಹಿಷ್ಕಾರ​ ಮಾಡಿ ಎನ್ನುವ ಕೂಗು ಟ್ವಿಟ್ಟರ್​ನಲ್ಲಿ ಜೋರಾಗಿತ್ತು.

news18-kannada
Updated:January 9, 2020, 8:58 PM IST
ದೀಪಿಕಾ ಪಡುಕೋಣೆ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ ಕಾಂಗ್ರೆಸ್​​ ಸರ್ಕಾರ; ಮಧ್ಯ ಪ್ರದೇಶ, ಚತ್ತೀಸ್‌ಘಡದಲ್ಲಿ ‘ಚಾಪಾಕ್‘​​ಗೆ ಟ್ಯಾಕ್ಸ್​​ ಫ್ರೀ​
ದೀಪಿಕಾ ಪಡುಕೋಣೆ
  • Share this:
ನವದೆಹಲಿ(ಜ.09): ಖ್ಯಾತ ಬಾಲಿವುಡ್ ನಟಿ​​ ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್' ಸಿನಿಮಾಗೆ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಚತ್ತೀಸ್​ಘಡ ಸಿಎಂ ಭೂಪೇಶ್ ಬಘೇಲ್ ಮತ್ತು ಮಧ್ಯಪ್ರದೇಶ ಸಿಎಂ ಕಮಲನಾಥ್ ಈ ಆದೇಶ ಹೊರಡಿಸಿದ್ದಾರೆ. ಹಾಗಾಗಿಯೇ ಚತ್ತೀಸ್​ಘಡ ಮತ್ತು ಮಧ್ಯಪ್ರದೇಶದಲ್ಲಿ ಚಪಾಕ್​​​ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಮಧ್ಯಪ್ರದೇಶ ಸಿಎಂ ಕಮಲನಾಥ್​​, "ದೀಪಿಕಾ ಪಡುಕೋಣೆ ಅಭಿನಯದ ಚಪಾಕ್ ಸಾಮಾಜಿಕ ಕಳಕಳಿಯ ಚಿತ್ರ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಚಿತ್ರವಾಗಿದೆ. ಆಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ತೆ ಲಕ್ಷ್ಮಿ ಅಗರ್​​ವಾಲ್​​ ಸಿನಿಮಾ ಇದಾಗಿದೆ. ಹಾಗಾಗಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಟ್ಟಿದ್ದೇವೆ" ಎಂದಿದ್ದಾರೆ.

ಎರಡು ದಿನಗಳ ಹಿಂದೆ ಚಪಾಕ್’​ ಸಿನಿಮಾ ಪ್ರಚಾರಕ್ಕಾಗಿ ದೆಹಲಿಯಲ್ಲಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್​ಯು ಕ್ಯಾಂಪಸ್​ಗೆ ತೆರಳಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬೆನ್ನಲ್ಲೇ ದೀಪಿಕಾ ಹಾಗೂ ಚಪಾಕ್​ ಸಿನಿಮಾ ಬಹಿಷ್ಕಾರ​ ಮಾಡಿ ಎನ್ನುವ ಕೂಗು ಟ್ವಿಟ್ಟರ್​ನಲ್ಲಿ ಜೋರಾಗಿತ್ತು.

ಇದನ್ನೂ ಓದಿ: ಜೆಎನ್​ಯು ಪ್ರತಿಭಟನೆಗೆ ದೀಪಿಕಾ ಬೆಂಬಲ; ಚಪಾಕ್ ಸಿನಿಮಾ​ ಬಹಿಷ್ಕರಿಸಲು ಟ್ವಿಟ್ಟರ್​ನಲ್ಲಿ ಆಂದೋಲನ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಬರಮತಿ ಟಿ ಪಾಯಿಂಟ್​ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ದೀಪಿಕಾ ಆಗಮಿಸಿದ್ದರು. ಈ ಮೂಲಕ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದರು. ಪ್ರತಿಭಟನಾ ಸ್ಥಳದಲ್ಲಿ ಅವರು ಸ್ವಲ್ಪ ಸಮಯ ಇದ್ದಿದ್ದರು. ಇದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.

#boycottchhapaak ಹಾಗೂ #boycottdeepika ಹೆಸರಿನ ಹ್ಯಾಶ್​ಟ್ಯಾಗ್​ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆಗಿತ್ತು. ಟ್ವಿಟ್ಟರ್​ ಇಂಡಿಯನ್​ ಟ್ರೆಂಡ್ಸ್​ನಲ್ಲಿ #boycottchhapaak ಹ್ಯಾಶ್​ಟ್ಯಾಗ್​ ಮೊದಲನೇ ಸ್ಥಾನದಲ್ಲಿತ್ತು. ಇದು ‘ಚಪಾಕ್​’ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈ ಹೊತ್ತಲ್ಲೇ ಕಾಂಗ್ರೆಸ್​​​ ಆಡಳಿತ ಇರುವ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ