Crime News: ಇದು ಮೈಸೂರಿನಲ್ಲಿ ನಡೆದ ಘಟನೆ.. ಕೈ ಮೇಲಿನ ಹಚ್ಚೆಯಿಂದ ಪತ್ತೆಯಾಯ್ತು ಅನಾಥ ಶವದ ಗುರುತು

Dead Body: ಮೃತಪಟ್ಟ ವ್ಯಕ್ತಿಯನ್ನು ಬೆಳಗೊಳ ಗ್ರಾಮದ ರಾಮೇಗೌಡ ಎಂದು ಗುರುತಿಸಲಾಗಿದ್ದು, ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದ ಎಂದು ಕುಟುಂಬಸ್ಥರು ದೂರು ದಾಖಲಿಸಿದ್ದರು.. ಆದರೆ ಅನಾರೋಗ್ಯದಿಂದ ಶ್ರೀರಂಗಪಟ್ಟಣ ಚೆಕ್ ಪೋಸ್ಟ್ ಬಳಿ ನಿಧನರಾದ ಬಳಿಕ, ಆತನ ಕೈಯ ಮೇಲೆ ಇದ್ದ ಹಚ್ಚೆಯ ಗುರುತಿನಿಂದ ಕುಟುಂಬಸ್ಥರು ಆತನ ಶವ ಪತ್ತೆ ಹಚ್ಚಿ ಸಂಸ್ಕಾರ ನೆರವೇರಿಸಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಾಮಾನ್ಯವಾಗಿ ಯಾವುದಾದರೊಂದು ಗುರುಗಳಲ್ಲಿ ಅಪರಿಚಿತ ಶವ(Dead Body) ದೊರೆತಾಗ ಪೊಲೀಸರು(Police) ಅದನ್ನು ಅನಾಥಾಶವ ಎಂದು ಗುರುತಿಸಿ ವಾರಸುದಾರರ ಪದವೇ ಹಲವು ದಿನಗಳ ಕಾಲ ಕಾಯ್ದು ಕೊನೆಗೆ ಆ ಶವವನ್ನ ಸಂಸ್ಕಾರ ಮಾಡುತ್ತಾರೆ.. ಆದರೆ ಕೆಲವೊಮ್ಮೆ ಪೊಲೀಸರು ಶವ ಸಂಸ್ಕಾರ ಮಾಡಿ ಎಷ್ಟೋ ದಿನಗಳ(Days) ಬಳಿಕ ವಾರಸುದಾರರು ಶವವನ್ನು ಹುಡುಕಿಕೊಂಡು ಬಂದ ಹಲವು ಘಟನೆಗಳು(Incident) ಇವೆ. ಆದರೆ ಈ ಘಟನೆಯಲ್ಲಿ ಮಾತ್ರ ಕೊಂಚ ವಿಭಿನ್ನವಾಗಿ ನಡೆದಿದ್ದು ಪೊಲೀಸರು ಶವ ಸಂಸ್ಕಾರ ಮಾಡುವ ಮುನ್ನವೇ ಸಂಬಂಧಿಕರು ಸಿನಿಮೀಯ ಶೈಲಿಯಲ್ಲಿ(Film Style) ಎಂಟ್ರಿಕೊಟ್ಟು ಶವ ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ.

    ಕೈ ಮೇಲಿನ ಹಚ್ಚೆಯಿಂದ ಪತ್ತೆಯಾಯಿತು ಅನಾಥ ಶವದ ಗುರುತು

    ಕೆಲವೊಮ್ಮೆ ಯಾರಾದರೂ ಟ್ಯಾಟೂ ಹಾಕಿಸಿಕೊಂಡರೆ ಅದನ್ನ ಶೋಕಿಗಾಗಿ ಹಾಕಿಸಿಕೊಂಡಿದ್ದಾರೆ ಎನ್ನುವವರೇ ಹೆಚ್ಚು.. ಆದರೆ ಕೆಲವೊಮ್ಮೆ ನಮ್ಮ ಕೈಯಲ್ಲಿ ನಾವು ಹಾಕಿಸಿಕೊಳ್ಳುವ ಹಚ್ಚಿ ನಮ್ಮ ಗುರುತನ್ನ ಪತ್ತೆಹಚ್ಚಲು ಸಹಕಾರಿಯಾಗಿದೆ. ಅದೇ ರೀತಿ ಮೃತ ವ್ಯಕ್ತಿಯೊಬ್ಬನನ್ನ ಆತನ ಕೈ ಮೇಲೆ ಇದ್ದ ಹಚ್ಚೇಯ ಗುರುತಿನಿಂದ ಕುಟುಂಬಸ್ಥರು ಗುರುತು ಹಿಡಿದು ಆತನ ಶವಸಂಸ್ಕಾರ ಮಾಡಲು ತೆಗೆದುಕೊಂಡು ಹೋದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಕೆಲವು ದಿನದ ಹಿಂದೆ ಶ್ರೀರಂಗಪಟ್ಟಣದ ಚೆಕ್ ಪೋಸ್ಟ್ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿತ್ತು.. ಅನಾರೋಗ್ಯದಿಂದ ಆ ವ್ಯಕ್ತಿ ಮೃತಪಟ್ಟಿದ್ದು, ಅದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆಯಲ್ಲಿ ಬಹಿರಂಗವಾಗಿತ್ತು.

    ಇದನ್ನೂ ಓದಿ: ಇಂದಿನಿಂದ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ಪುನೀತ್ ಹಾಗೂ ಬಿಪಿನ್ ರಾವತ್​​ಗೆ ಪುಷ್ಪ ನಮನ

    ಹೀಗಾಗಿ ಪೊಲೀಸರು ಅಪರಿಚಿತ ವ್ಯಕ್ತಿಯ ಶವವನ್ನು ತಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅಲ್ಲಿ ಶವವನ್ನು ಇರಿಸಿದ್ದರು. ಅದೇ ಪತ್ತೆಯಾದ ಮೃತ ವ್ಯಕ್ತಿಯ ಗುರುತಿಗಾಗಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿಕೊಂಡಿದ್ದರು.. ಆದರೆ ಯಾರು ಬರದೇ ಇದ್ದಾಗ ಪೊಲೀಸರು ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಕೊನೆಗೆ ಮೃತವ್ಯಕ್ತಿಯ ಕೈ ಮೇಲೆ ಇದ್ದ ಹಚ್ಚೆಯ ಗುರುತಿನಿಂದ ಸಂಬಂಧಿಕರು ಬಂದು ಆತನ ಶವವನ್ನ ಸಂಸ್ಕಾರ ಮಾಡಲೂ ತೆಗೆದುಕೊಂಡು ಹೋಗಿದ್ದಾರೆ.

    15 ದಿನದಿಂದ ನಾಪತ್ತೆಯಾಗಿದ್ದ ಮೃತವ್ಯಕ್ತಿ

    ಇನ್ನು ಮೃತಪಟ್ಟ ವ್ಯಕ್ತಿಯನ್ನು ಬೆಳಗೊಳ ಗ್ರಾಮದ ರಾಮೇಗೌಡ ಎಂದು ಗುರುತಿಸಲಾಗಿದ್ದು, ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದ ಎಂದು ಕುಟುಂಬಸ್ಥರು ದೂರು ದಾಖಲಿಸಿದ್ದರು.. ಆದರೆ ಅನಾರೋಗ್ಯದಿಂದ ಶ್ರೀರಂಗಪಟ್ಟಣ ಚೆಕ್ ಪೋಸ್ಟ್ ಬಳಿ ನಿಧನರಾದ ಬಳಿಕ, ಆತನ ಕೈಯ ಮೇಲೆ ಇದ್ದ ಹಚ್ಚೆಯ ಗುರುತಿನಿಂದ ಕುಟುಂಬಸ್ಥರು ಆತನ ಶವ ಪತ್ತೆ ಹಚ್ಚಿ ಸಂಸ್ಕಾರ ನೆರವೇರಿಸಿದ್ದಾರೆ.ಸದ್ಯ ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಮಾವಿನ‌ಮರದ ನೆರಳಲ್ಲಿ ಮದುವೆ; ಕುವೆಂಪು ಮಂತ್ರ ಮಾಂಗಲ್ಯ‌ ಸಕಾರ ಗೊಳಿಸಿದ ವಧು ವರರು

    ಅನಾಥ ಶವವನ್ನು ಸಮಾಧಿಯಿಂದ ತೆಗೆದಿದ್ದ ಪೊಲೀಸರು

    ಇನ್ನು ಶ್ರೀರಂಗಪಟ್ಟಣದಲ್ಲಿ ಶವಸಂಸ್ಕಾರ ಆಗುವ ಮುನ್ನವೇ ಕುಟುಂಬಸ್ಥರು ಶವದ ಗುರುತು ಪತ್ತೆ ಹಚ್ಚಿದರೆ, ಈ ಹಿಂದೆ ದಾವಣಗೆರೆಯಲ್ಲಿ ಇದಕ್ಕೆ ವಿರುದ್ಧವಾದ ಪ್ರಕರಣ ನಡೆದಿತ್ತು.. ಅನಾಥಾ ಶವ ಎಂದು ಪೊಲೀಸರು ಶವವನ್ನ ಸಂಸ್ಕಾರ ನಡೆಸಿದ್ದರು.. ಆದರೆ ಇದ್ದಕ್ಕಿದ್ದಂತೆ ಬಂದ ಮೃತವ್ಯಕ್ತಿಯ ತಂದೆಯ ತನಿಖೆ ನಡೆಸುವಂತೆ ದೂರು ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ದಡದಲ್ಲಿ ದೊರೆತಿದ್ದ ಶವವನ್ನು , ಶವ ಹೂತು ಹಾಕಿ 20 ದಿನಗಳ ಬಳಿಕ ಶವವನ್ನು ಹೊರ ತೆಗೆದು, ತನಿಖೆ ನಡೆಸಲು ಮುಂದಾಗಿದ್ದು. ಇನ್ನು ಈ ಪ್ರಕರಣದಲ್ಲಿ ಹೊನ್ನಾಳಿಯ ಬುಳ್ಳಾಪುರ ಗ್ರಾಮದ ನಿವಾಸಿ ತಿಪ್ಪೇಸ್ವಾಮಿ ಎನ್ನುವವರ ಶವ ಕೊಲೆಯಾದ ರೀತಿಯಲ್ಲಿ ತುಂಗಭದ್ರಾ ನದಿ ತೀರದಲ್ಲಿ ಪತ್ತೆಯಾಗಿತ್ತು.ಆದ್ರೆ ಪೋಲಿಸರು ಅನಾಥ ಶವ ಎಂದು ಅಂತ್ಯಸಂಸ್ಕಾರ ನೆರವೇರಿಸಿದ್ದರು .
    Published by:ranjumbkgowda1 ranjumbkgowda1
    First published: