HOME » NEWS » State » TASK FORCE COMMITTEE MEMBERS ARE HELD A MEETING AND DISCUSS ABOUT CORONA SPREADING LG

ಸಭೆ ಸೇರಿರುವ ಟಾಸ್ಕ್​ಫೋರ್ಸ್​​ ಸಮಿತಿ ಸದಸ್ಯರು; ಚರ್ಚೆಯಾಗಲಿರುವ ವಿಷಯಗಳಿವು..!

ಆರ್‌ಟಿಪಿಸಿಆರ್ ಪರೀಕ್ಷೆಗೆ ಬೆಲೆ ನಿಗದಿ‌. ಸರ್ಕಾರಿ ಆಸ್ಪತ್ರೆಯಲ್ಲಿ ₹. 500/- ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ₹.800/- ನಿಗದಿ. ಇದರ ಜೊತೆಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳಿಗೆ ನಿಗದಿಯಾಗಬೇಕಾದ ಹಣದ ಕುರಿತು ಚರ್ಚೆ ನಡೆಸಲಾಗುತ್ತದೆ.

news18-kannada
Updated:May 15, 2021, 1:09 PM IST
ಸಭೆ ಸೇರಿರುವ ಟಾಸ್ಕ್​ಫೋರ್ಸ್​​ ಸಮಿತಿ ಸದಸ್ಯರು; ಚರ್ಚೆಯಾಗಲಿರುವ ವಿಷಯಗಳಿವು..!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮೇ 15): ರಾಜ್ಯದಲ್ಲಿ ಕೊರೋನಾ ವೈರಸ್‌ ಅಟ್ಟಹಾಸ  ಹೆಚ್ಚಾದ ಹಿನ್ನೆಲೆ, ಇಂದು ರಾಜ್ಯದ ಟಾಸ್ಕ್​ ಫೋರ್ಸ್​​ ಸಮಿತಿ ಸದಸ್ಯರು ಎರಡನೇ ಸಭೆ ಸೇರಿ ಚರ್ಚೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ನಿರೀಕ್ಷೆಗೂ ಮೀರಿ ಹರಡುತ್ತಿದ್ದು, ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಈಗಾಗಲೇ ಲಾಕ್​ಡೌನ್ ಜಾರಿ ಮಾಡಿದ್ದರೂ ಸಹ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ  ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಇಂದು ಟಾಸ್ಕ್​ ಫೋರ್ಸ್​ ಸಮಿತಿ ಸದಸ್ಯರು ಸಭೆ ಸೇರಿದ್ದಾರೆ. 

ಸಭೆಯಲ್ಲಿ ಚರ್ಚೆಯಾಗಲಿರುವ ವಿಚಾರಗಳು:

1. ಆರ್‌ಟಿಪಿಸಿಆರ್ ಪರೀಕ್ಷೆಗೆ ಬೆಲೆ ನಿಗದಿ‌. ಸರ್ಕಾರಿ ಆಸ್ಪತ್ರೆಯಲ್ಲಿ ₹. 500/- ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ₹.800/- ನಿಗದಿ. ಇದರ ಜೊತೆಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳಿಗೆ ನಿಗದಿಯಾಗಬೇಕಾದ ಹಣದ ಕುರಿತು ಚರ್ಚೆ.

2. 18 ವರ್ಷದಿಂದ 44 ವರ್ಷದವರೆಗೆ 3.26 ಕೋಟಿ ಲಸಿಕೆ ಅವಶ್ಯಕತೆ ಇದೆ. ಸೀರಂ ಇನ್ಸ್ಟಿಟ್ಯೂಟ್‌ಯಿಂದ ಬರುವ ಲಸಿಕೆಗೆ ದರ ನಿಗದಿಪಡಿಸುವುದು. ಕೋವಿಶೀಲ್ಡ್ ಪ್ರತಿ ಡೋಸ್‌ಗೆ ₹. 300/-. ಕೋವ್ಯಾಕ್ಸಿನ್ ಪ್ರತಿ ಡೋಸ್‌ಗೆ ₹. 400/- ನಿಗದಿಪಡಿಸುವುದು.

3.ಔಷಧಿಗಳ ಬೇಡಿಕೆಗಳ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ‌.

4. ಕೋವಿಡ್-19 ರೋಗಿಗಳುಗೆ ಅವಶ್ಯವಿರುವ ವೈದ್ಯಕೀಯ ಆಕ್ಸಿಜನ್ ಜನರೇಟರ್‌ನ್ನು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ 18 ಸಂಸ್ಥೆಗಳಿಗೆ ರೂ.62.70 ಕೋಟಿ ವೆಚ್ಚದಲ್ಲಿ ಒದಗಿಸಲು ಆಡಳಿತಾತ್ಮಕ ಅನುಮೋದನೆ.

Anushka Sharma: ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿಯ ಗೆಳೆತನ ಈಗಿನದ್ದು ಮಾತ್ರವಲ್ಲ..!5. ಕೋವಿಡ್-19 ಕಾಲ್ ಸೆಂಟರ್ 1912 ಅನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಾಡುವುದನ್ನು ಬಿಟ್ಟು ಒಂದೇ ಸೂರಿನಡಿಯಲ್ಲಿ ತರುವುದು.

6. ಬೆಡ್‌ಗಳ ನಿರ್ವಹಣೆ ಕಡ್ಡಾಯವಾಗಿ ಪ್ರದರ್ಶಿಸುವ ಬಗ್ಗೆ ಉಸ್ತುವಾರಿ ಹರ್ಷಗುಪ್ತಾಗೆ ವಹಿಸುವುದು.

7. ಔಷಧ ಮತ್ತು ಪರಿಕರಗಳ ಬೇಡಿಕೆ, ಸಂಗ್ರಹಣೆ RAT kit ಮುಖಾಂತರ ಪರೀಕ್ಷೆ ಹೆಚ್ಚಳ.

8. ಹೋಂ ಐಸೋಲೇಷನ್‌ನಲ್ಲಿ ಇರುವ ಸೋಂಕಿತರಿಗೆ ಮೆಡಿಕಲ್ ಕಿಟ್ ಒದಗಿಸುವುದು ಕಡ್ಡಾಯ.

9.‌ ಖಾಸಗಿ ಆಸ್ಪತ್ರೆಯ ವೆಂಟಿಲೇಟರ್‌ಗಳನ್ನು MS Ramaiah medical college, Rajarajeshwari medical college, Dr.Ambedkar medical college, Columbia Asia hospital Whitefield, Suguna hospital, Kim's Hospital, Oxford medical college, Rangadore memorial hospital, People tree hospital, Meenakshi hospital, Dayananda Sagar medical college, MVJ medical college Hosakote, Akash medical college Devanahalli, Adichunchanagiri medical college Mandya, Narayana hospital ಗಳಿಗೆ ನೀಡುವುದು. ಮುಂದಿನ 6 ತಿಂಗಳು ಶುಲ್ಕವಿಲ್ಲದಂತೆ ವಿಸ್ತರಿಸಲು ಸಭೆಯಲ್ಲಿ ಅನುಮೋದನೆ.

10. ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಹಾಗೂ interns ಹಾಗೂ ಇತರೆ ಆರೋಗ್ಯ ವಿಜ್ಞಾನಗಳ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸೇವೆ ಬಳಸಿಕೊಳ್ಳುವ ಬಗ್ಗೆ ಪರಿಶೀಲನೆ.

11. ರೆಮಿಡಿಸಿವಿರ್ ಕೊರತೆ ಬಗ್ಗೆ ಚರ್ಚೆ.
Youtube Video

12. ಆಕ್ಸಿಜನ್ ಹಾಗೂ ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಗೆ ಇಂದಿನ ಸಭೆಯಲ್ಲಿ ನಿರ್ಧಾರ.
Published by: Latha CG
First published: May 15, 2021, 1:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories