Ayodhya Verdict: ತೀರ್ಪು ಏನೇ ಬಂದರೂ ಸ್ವೀಕರಿಸಿ; ಧರ್ಮದ ಹೆಸರಿನಲ್ಲಿ ರಾಜಕಾರಣ ಬೇಡ: ತನ್ವೀರ್​ ಸೇಠ್​​

Ayodhya Verdict: ನಾವು ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಗೌರವ ವ್ಯಕ್ತಪಡಿಸಬೇಕು. ಸಂವಿಧಾನದ ಆಶಯದಂತೆ ನಡೆಯಬೇಕು. ನಾವೆಲ್ಲ ಭಾರತೀಯರು, ಭಾರತ ಕಟ್ಟುವ ಸಂಕಲ್ಪ ತೊಡಬೇಕು. ತೀರ್ಪಿನ ಕುರಿತು ನಿಮ್ಮ ಭಾವನೆ ಏನೇ ಇದ್ದರೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಬೇಡಿ

Seema.R | news18-kannada
Updated:November 9, 2019, 10:54 AM IST
Ayodhya Verdict: ತೀರ್ಪು ಏನೇ ಬಂದರೂ ಸ್ವೀಕರಿಸಿ; ಧರ್ಮದ ಹೆಸರಿನಲ್ಲಿ ರಾಜಕಾರಣ ಬೇಡ: ತನ್ವೀರ್​ ಸೇಠ್​​
ಶಾಸಕ ತನ್ವೀರ್​ ಸೇಠ್
Seema.R | news18-kannada
Updated: November 9, 2019, 10:54 AM IST
ಮೈಸೂರು (ನ.09): ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಏನೇ ತೀರ್ಪು ನೀಡಿದರೂ ಅದನ್ನು ಎಲ್ಲರೂ ಸ್ವೀಕರಿಸಬೇಕು. ಧರ್ಮದ ಹೆಸರಿನಲ್ಲಿ ಯಾವುದೇ ರಾಜಕಾರಣ ಬೇಡ ಎಂದು ಕಾಂಗ್ರೆಸ್​ ನಾಯಕ ತನ್ವೀರ್​ ಸೇಠ್​ ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್​ ತೀರ್ಪಿನ ಕುರಿತು ಮಾತನಾಡಿದ ಅವರು. ನಾವು ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಗೌರವ ವ್ಯಕ್ತಪಡಿಸಬೇಕು. ಸಂವಿಧಾನದ ಆಶಯದಂತೆ ನಡೆಯಬೇಕು. ನಾವೆಲ್ಲ ಭಾರತೀಯರು, ಭಾರತ ಕಟ್ಟುವ ಸಂಕಲ್ಪ ತೊಡಬೇಕು. ತೀರ್ಪಿನ ಕುರಿತು ನಿಮ್ಮ ಭಾವನೆ ಏನೇ ಇದ್ದರೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಬೇಡಿ ಎಂದಿ ಕೋರಿಕೊಂಡುರು.

ಇದನ್ನು ಓದಿ: Ayodhya Verdict: ಇಂದು ಐತಿಹಾಸಿಕ ಅಯೋಧ್ಯೆ ವಿವಾದದ ತೀರ್ಪು ಪ್ರಕಟ​; ಎಲ್ಲರ ಚಿತ್ತ ಸುಪ್ರೀಂಕೋರ್ಟ್​ನತ್ತ

ಭಾರತೀಯರಾದ ನಾವು ಎಲ್ಲರೂ ಒಂದೇ.  ನಮ್ಮ ನಿರೀಕ್ಷೆಗೆ ತಕ್ಕಂತೆ ಎಲ್ಲವೂ ಆಗುವುದಿಲ್ಲ. ಭಗವಂತ ಕೊಡುವ ತೀರ್ಪನ್ನು ಸ್ವೀಕರಿಸೋಣ.  ಹಿಂಸೆ, ತೊಂದರೆ ಕೋಡೋದು, ವದಂತಿ ಹಬ್ಬಿಸೋದು ಬೇಡ. ನಮ್ಮ ಅಕ್ಕ ಪಕ್ಕದ ನಿವಾಸಿಗಳು ಎಲ್ಲರು ಪ್ರೀತಿ ಇಂದ ಇರೋಣ. ನಮಗೆ ಸೌಹಾರ್ದ ಪ್ರೀತಿ ವಿಶ್ವಾಸ ಮುಖ್ಯ ಎಂದರು.

ರಾಜಕೀಯ ಮುಖಂಡರಿಂದ ಮನವಿ

ಸುಪ್ರೀಂ ಕೋರ್ಟ್ ನೀಡುವ ತೀರ್ಪು ಯಾರೊಬ್ಬರ ಸೋಲು ಗೆಲುವಿನ ಪ್ರಶ್ನೆಯಲ್ಲ. ದೇಶಾದ್ಯಂತ ಜನರು ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ಶಾಂತಿ ಪ್ರಿಯ ರಾಜ್ಯವಾಗಿದ್ದು ಜನರು ಅತಿರೇಕ ಆಚರಣೆಗಳಿಗೆ ಮುಂದಾಗಬಾರದು ಎಂದು ಸಿಎಂ ಯಡಿಯೂರಪ್ಪ,, ಸಚಿವರಾದ ಆರ್ ಅಶೋಕ್, ಶ್ರೀರಾಮುಲು ಮೊದಲಾದವರು ಮನವಿ ಮಾಡಿಕೊಂಡಿದ್ದಾರೆ.

First published:November 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...