ಮೈಸೂರು: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ (Former Minister Tanveer Sait) ಚುನಾವಣಾ ರಾಜಕೀಯಕ್ಕೆ (Election Politics) ಘೋಷಣೆ ಮಾಡಿದ್ದಕ್ಕೆ ಅಭಿಮಾನಿಯೋರ್ವ ಆತ್ಮಹತ್ಯೆಗೆ (Suicide Attempt) ಯತ್ನಿಸಿದ್ದಾರೆ. ತನ್ವೀರ್ ಸೇಠ್ ನಿವಾಸದ ಎದುರು ಆಗಮಿಸಿದ್ದ ಅಭಿಮಾನಿ (Tanveer Saith Fan) ರಸೂಲ್, ಬಟ್ಟೆ ಬಿಚ್ಚಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಬಾಟಲಿ ಕಿತ್ತುಕೊಂಡು ಅಭಿಮಾನಿಯನ್ನು ಉದಯಗಿರಿ ಪೊಲೀಸರು ರಕ್ಷಿಸಿದ್ದಾರೆ. ವಿಶೇಷ ಚೇತನ ಅಭಿಮಾನಿಯೊಬ್ಬರು ತನ್ವೀರ್ ಸೇಠ್ ಅವರನ್ನು ಭೇಟಿಯಾಗಿ ಹೂವಿನ ಹಾರ ಹಾಕಿ, ಚುನಾವಣೆಗೆ (Election) ಸ್ಪರ್ಧೆ ಮಾಡಬೇಕು ಎಂದು ಮನವಿ ಮಾಡಿಕೊಂಡರು. ನನ್ನ ಆರೋಗ್ಯ ಸರಿ ಇಲ್ಲ. ಅದೇ ಕಾರಣಕ್ಕೆ ಚುನಾವಣಾ ರಾಜಕೀಯ ನಿವೃತ್ತಿ ಬಯಸಿದ್ದೇನೆ ಎಂದು ತನ್ವೀರ್ ಸೇಠ್ ಹೇಳಿದರು.
ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ತನ್ವೀರ್ ಸೇಠ್, ಜನ ನನ್ನ ತಾತನನ್ನು ಒಮ್ಮೆ, ತಂದೆಯನ್ನು 6 ಬಾರಿ, ನನ್ನನ್ನು 5 ಬಾರಿ ಗೆಲ್ಲಿಸಿದ್ದಾರೆ. ನರಸಿಂಹ ರಾಜ ಕ್ಷೇತ್ರದ ಮತದಾರರ ಋಣ ತೀರಿಸಬೇಕಿದೆ. ಕಾಂಗ್ರೆಸ್ ನನಗೆ ಹಲವಾರು ಅವಕಾಶ ನೀಡಿದೆ ಎಂದು ಹೇಳಿದರು.
ನಿವೃತ್ತಿ ಘೋಷಣೆಗೆ ಬೇಸರ ಇಲ್ಲ
ಚುನಾವಣಾ ನಿವೃತ್ತಿ ಘೋಷಣೆ ಮಾಡಿರೋದಕ್ಕೆ ನನಗೆ ಯಾವುದೇ ಬೇಸರ ಇಲ್ಲ. ಬೇರಾವುದೇ ಬೆಳವಣಿಗೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಒಂದು ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವುದಾದರೆ ನಾನೇ ಮುಂದೆ ನಿಂತು ಗೆಲ್ಲಿಸುತ್ತೇನೆ. ಬೇರೆಯವರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್‌ಗೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನಿವೃತ್ತಿ ಘೋಷಣೆ ಮಾಡಿರುವ ಹಿನ್ನೆಲೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದು ನನ್ನ ನಿರ್ಧಾರ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಅಂತಿಮ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.
‘ಕರ್ನಾಟಕ ಬಿಜೆಪಿ ಮುಕ್ತ’
ಕರ್ನಾಟಕ ಭ್ರಷ್ಟಾಚಾರದ ಕೂಪ ಆಗಿದೆ. ರಾಜ್ಯ ಬಿಜೆಪಿ ಸರ್ಕಾರ ಜನರಿಗೆ ಹೇಗೆ ಮೋಸ ಮಾಡಿದೆ ಅನ್ನೋದು ಜನರಿಗೆ ಗೊತ್ತಿದೆ. ಜನರು ದಡ್ಡರಲ್ಲ. ಈ ಬಾರಿ ಜನರು ತಕ್ಕ ಉತ್ತರ ಕೊಡ್ತಾರೆ ಅಂತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಅಲ್ಲದೇ ಬಿಜೆಪಿಗೆ ಲಿಂಗಾಯತ ಮತ ತಪ್ಪುತ್ತಿದೆ ಅಂತ ನಾನು ಜಾತಿ ಮೇಲೆ ಹೇಳೋಲ್ಲ. ಕರ್ನಾಟಕ ಬಿಜೆಪಿ ಮುಕ್ತ ಆಗೋ ಕಾಲ ಬರ್ತಿದೆ ಅಂತ ಹೇಳಿದ್ರು. ಇನ್ನು ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು, ವಿಧಾನಸೌಧದಿಂದ ರಾಜಭವನಕ್ಕೆ ಹೋಗೋವಾಗ ಕಣ್ಣೀರು ಹಾಕಿದರು. ಅವರು ಯಾಕೆ ಕಣ್ಣೀರು ಹಾಕಿದ್ರು ಅನ್ನೋದನ್ನು ಬಿಜೆಪಿ ನಾಯಕರು ಹೇಳಬೇಕು ಅಂತ ಹೇಳಿದೆ ಎಂದರು.
ಡಿಕೆಶಿಗೆ ಸೋಮಶೇಖರ್ ತಿರುಗೇಟು
ಈ ನಡುವೆ ಬಿಎಸ್‌ವೈ ಕಣ್ಣೀರು ಹಾಕಿದ್ರು ಅನ್ನೋ ಡಿಕೆಶಿ ಹೇಳಿಕೆಗೆ ಸಚಿವ ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ. ಡಿಕೆಶಿಗೆ ನಮ್ಮ ಪಕ್ಷದ ಬಗ್ಗೆ ಯಾಕೆ ಚಿಂತೆ ಮಾಡ್ತಾರೆ ಅಂತ ಕಿಡಿಕಾರಿದ್ರು. ಅಲ್ಲದೇ ನಾನು ಬಿಜೆಪಿಯಲ್ಲಿ ಇದ್ದೇನೆ. ಬಿಜೆಪಿಯಲ್ಲೇ ಸ್ಪರ್ಧೆ ಮಾಡ್ತೀನಿ ಅಂತ ಹೇಳಿದರು.
ಇದನ್ನೂ ಓದಿ: Cyber Crime: ಪೊಲೀಸರನ್ನೂ ಬಿಡದ ವಂಚಕರು; ಸೈಬರ್ ವಂಚನೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ
ಕಾರ್ಮಿಕ ಸಚಿವರ ವಿರುದ್ಧ ಪೋಸ್ಟರ್ ವಾರ್!
ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ ಮುಂದುವರಿದಿದೆ. ಸಿಎಂ ಹಾಗೂ ಕಾರ್ಮಿಕ ಸಚಿವರ ವಿರುದ್ಧ ಪೋಸ್ಟರ್ ವಾರ್ ಜೋರಾಗಿದೆ.
ಶಿರಸಿ ತಾಲೂಕಿನ ಬನವಾಸಿಯ ರಸ್ತೆ ಉದ್ದಕ್ಕೂ ‘PayCm’ ಪೊಸ್ಟರ್ ಅಳವಡಿಕೆ ಮಾಡಲಾಗಿದೆ. ರಸ್ತೆಬದಿಯಲ್ಲಿನ ಮರ ಹಾಗೂ ಕಟ್ಟಡಗಳಿಗೆ ಪೋಸ್ಟರ್ ಅಂಟಿಸಲಾಗಿದೆ. ಡೀಲ್ ನಿಮ್ಮದ್ದು ಕಮಿಷನ್ ನಮ್ದು ಎಂದು ಬರೆದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪೋಟೋ ಅಂಟಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ