ಕನ್ನಡ ಬಾವುಟ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ತಮಿಳುನಾಡು; ಬೆಂಗಳೂರಿಗರ ಮೇಲೆ ಹಲ್ಲೆ

ಬೆಂಗಳೂರಿನ ಯಲಹಂಕ ಬಳಿಯ ಸಿಂಗನಾಯಕನ ಹಳ್ಳಿಯಿಂದ ಭಕ್ತರು ಖಾಸಗಿ ಬಸ್​ನಲ್ಲಿ ತಮಿಳುನಾಡಿನಲ್ಲಿರುವ ಮೇಲು ಮಲತ್ತೂರಿನ ಒಂ ಶಕ್ತಿ ದೇವಾಲಯಕ್ಕೆ ತೆರಳಿದ್ದರು. ಬಸ್​ ಮೇಲೆ ಕನ್ನಡದ ಬಾವುಟ ಹಾಕಲಾಗಿತ್ತು. ದೇವಸ್ಥಾನದ ಪಾರ್ಕಿಂಗ್​ನಲ್ಲಿ ಕ್ಷುಲ್ಲಕ ಕಾರಣಕ್ಕೆ ತಮಿಳಿಗರು ಚಾಲಕನ ಜೊತೆ ಕಿರಿಕ್ ಮಾಡಿದ್ದಾರೆ.

news18-kannada
Updated:January 12, 2020, 3:24 PM IST
ಕನ್ನಡ ಬಾವುಟ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ತಮಿಳುನಾಡು; ಬೆಂಗಳೂರಿಗರ ಮೇಲೆ ಹಲ್ಲೆ
ಬಸ್​ ಮೇಲೆ ಹಾಕಲಾದ ಬಾವುಟ
  • Share this:
ಬೆಂಗಳೂರು (ಜ.12): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ವೈಮನಸ್ಸು ಮೊದಲಿನಿಂದಲೂ ಇದೆ. ಕೆಲ ವರ್ಷಗಳ ಹಿಂದೆ ಇದೇ ವಿಚಾರಕ್ಕೆ ಎರಡೂ ರಾಜ್ಯಗಳಲ್ಲಿ ಬೆಂಕಿ ಹೊತ್ತಿ ಉರಿದಿತ್ತು. ಈಗ ಕನ್ನಡ ಬಾವುಟ ವಿಚಾರದಲ್ಲಿ ತಮಿಳುನಾಡು ಕ್ಯಾತೆ ತೆಗೆದಿದೆ. ಅಷ್ಟಕ್ಕೂ ಆಗಿದ್ದೇನು? ಆ ಬಗ್ಗೆ ತಿಳಿದುಕೊಳ್ಳು ಈ ಸ್ಟೋರಿ ಓದಿ.

ಬೆಂಗಳೂರಿನ ಯಲಹಂಕ ಬಳಿಯ ಸಿಂಗನಾಯಕನ ಹಳ್ಳಿಯಿಂದ ಭಕ್ತರು ಖಾಸಗಿ ಬಸ್​ನಲ್ಲಿ ತಮಿಳುನಾಡಿನಲ್ಲಿರುವ ಮೇಲು ಮಲತ್ತೂರಿನ ಒಂ ಶಕ್ತಿ ದೇವಾಲಯಕ್ಕೆ ತೆರಳಿದ್ದರು. ಬಸ್​ ಮೇಲೆ ಕನ್ನಡದ ಬಾವುಟ ಹಾಕಲಾಗಿತ್ತು. ದೇವಸ್ಥಾನದ ಪಾರ್ಕಿಂಗ್​ನಲ್ಲಿ ಕ್ಷುಲ್ಲಕ ಕಾರಣಕ್ಕೆ ತಮಿಳಿಗರು ಚಾಲಕನ ಜೊತೆ ಕಿರಿಕ್ ಮಾಡಿದ್ದಾರೆ.

ಕನ್ನಡ ಧ್ವಜ ಕಟ್ಟಿಕೊಂಡು ಹೋಗಿದ್ದ ವಾಹನ ನೋಡಿ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ. ಜಗಳ ಆರಂಭವಾದ ಕೆಲವೇ ಕ್ಷಣಗಳಲ್ಲಿ 10-20 ಜನರು ಬಸ್​ ಒಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಸ್​ ಚಾಲಕ ನಟರಾಜ್​ ಹಾಗೂ ಕ್ಲೀನರ್​ಗೆ ತೀವ್ರ ಗಾಯಗಳಾಗಿವೆ. ನಂತರ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಬೆಂಗಳೂರಿಗೆ ಅವರು ವಾಪಾಸಾದ ನಂತರದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ಸಿಎಎ ಪೌರತ್ವ ಕೊಡುವ ಕಾನೂನು, ಕಿತ್ತುಕೊಳ್ಳುವ ಕಾನೂನು ಅಲ್ಲ; ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ