ತಮಿಳುನಾಡು ಮುಜರಾಯಿ ಇಲಾಖೆ (Tamil Nadu Minister) ಸಚಿವರ ಮಗಳು ಪ್ರಿಯಕರನೊಂದಿಗೆ ನಾಪತ್ತೆಯಾದ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸಚಿವರ ಮಗಳು ಪ್ರಿಯಕರನನ್ನು ಮದುವೆಯಾಗಿದ್ದು (Love Marriage), ತಮಗೆ ಜೀವ ಬೆದರಿಕೆ ಇದೆ. ತಾವಿಬ್ಬರು ಮದುವೆಯಾಗಿದ್ದು, ತಮಗೆ ರಕ್ಷಣೆ ನೀಡಬೇಕು ಎಂದು ಇದೀಗ ಕರ್ನಾಟಕ ಪೊಲೀಸರ (Karnataka Police) ಮೊರೆ ಹೋಗಿದ್ದಾರೆ. ತಮ್ಮ ತಂದೆ ಮಂತ್ರಿಯಾಗಿದ್ದು, ತಮಿಳುನಾಡು ಸರ್ಕಾರದಿಂದ ಯಾವುದೇ ಸಹಾಯ ಸಿಗುವುದಿಲ್ಲ ಎಂಬ ಹಿನ್ನಲೆ ನಾವು ಕರ್ನಾಟಕ ಪೊಲೀಸರಿಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಏನಿದು ಪ್ರಕರಣ
ತಮಿಳುನಾಡು ಮುಜರಾಯಿ ಇಲಾಖೆ ಸಚಿವ ಶೇಖರ್ ಬಾಬು ಮಗಳು ಜಯಕಲ್ಯಾಣಿ ಹಾಗು ಪ್ರಿಯಕರ ಸತೀಶ್ ಕುಮಾರ್ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದರು. ಕಳೆದ ಆರು ವರ್ಷಗಳಿಂದ ಇವರು ಮಧ್ಯೆ ಪ್ರೀತಿ ಇದೆ ಎಂಬುದಾಗಿ ಜಯಕಲ್ಯಾಣಿ ತಿಳಿಸಿದ್ದಾರೆ. ಇಬ್ಬರು ಪ್ರೀತಿಸುತ್ತಿದ್ದ ಹಿನ್ನಲೆ ಕಳೆದ ಆರು ತಿಂಗಳ ಹಿಂದೆ ಓಡಿ ಹೋಗುವ ಯತ್ನ ನಡೆಸಿದ್ದೇವು. ಆದರೆ, ತಮ್ಮ ತಂದೆ ತಮ್ಮ ಅಧಿಕಾರ ಬಳಸಿ ಪುಣೆಯಲ್ಲಿ ನಮ್ಮನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಎರಡು ತಿಂಗಳು ಕಾಲ ಪ್ರಿಯಕರ ಸತೀಶ್ ಕುಮಾರ್ನನ್ನು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಅವರ ಕುಟುಂಬದ ಸದಸ್ಯರಿಗೂ ತೊಂದರೆ ನೀಡಲಾಗಿದೆ ಎಂದು ಜಯ ಕಲ್ಯಾಣಿ ತಿಳಿಸಿದ್ದಾರೆ.
ಇದನ್ನು ಓದಿ: ಹೌದು, ನೀವು ಹಿಂದೆ ಕುಳಿತಿದ್ದೀರಲ್ಲ, ಗಮನಿಸುತ್ತಿರುತ್ತೀರಿ: BSY ಬಗ್ಗೆ ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ
ಇಬ್ಬರ ಪ್ರೀತಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಿದೆ. ನಾವಿಬ್ಬರು ಒಬ್ಬರನ್ನು ಒಬ್ಬರು ಬಿಟ್ಟಿರಲಾರೆವು. ಈ ಹಿನ್ನಲೆ ಕಳೆದ ಮೂರು ದಿನಗಳ ಹಿಂದೆ ಮನೆ ಬಿಟ್ಟು ಓಡಿ ಬಂದಿದ್ದೇವೆ. ಇದೀಗ ಮದುವೆ ಆಗಿದ್ದೇವೆ. ತಮ್ಮ ತಂದೆ ತಮಿಳು ನಾಡು ಸರ್ಕಾರದಲ್ಲಿ ಪ್ರಭಾವಿ ಮಂತ್ರಿ ಆಗಿರುವ ಹಿನ್ನಲೆ ನಾವು ಕರ್ನಾಟಕ ಪೊಲೀಸರಿಗೆ ಮನವಿ ಮಾಡಿದ್ದೇವೆ. ನಮಗೂ ಹಾಗೂ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಕೋರಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕನ್ನಡ ಸಂಘಟನೆ ಸಂಪರ್ಕ
ಕಳೆದ ಆರು ವರ್ಷಗಳ ನಮ್ಮ ಪ್ರೀತಿ ವಿಷಯ ಮನೆಯಲ್ಲಿ ತಿಳಿದು ಸಾಕಷ್ಟು ವಿರೋಧ ವ್ಯಕ್ತವಾಯಿತು. ಈ ವೇಳೆ ಯೂ ಟ್ಯೂಬ್ನಲ್ಲಿ ಕನ್ನಡ ಸಂಘಟನೆ ಸಂಪರ್ಕವನ್ನು ಪಡೆದೆವು. ಭಾರತಿ ಶೆಟ್ಟಿ ಅವರ ಸಂಪರ್ಕ ಪಡೆದೆವು ಎಂದು ತಿಳಿಸಿದ್ದಾರೆ.
ಇನ್ನು ಘಟನೆ ಕುರಿತು ಮಾತನಾಡಿರುವ ಕನ್ನಡ ಸಂಘಟನೆ ಕಾರ್ಯಕರ್ತ ಭಾರತೀ ಶೆಟ್ಟಿ, ಜಯಾ ಕಲ್ಯಾಣಿ ಅವರು ನಮ್ಮ ಸಂಪರ್ಕ ಬೆಳೆಸಿದ್ದರು.
ಇದನ್ನು ಓದಿ: Ukraine ಅಧ್ಯಕ್ಷರಿಗೆ PM Modi ಕರೆ; ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಕುರಿತು ಚರ್ಚೆ
ಅವರಿಬ್ಬರು ಒಟ್ಟಿಗೆ ಬಾಳಬೇಕು ಎಂದು ಇಚ್ಛಿಸಿದ್ದಾರೆ. ಅವರಿಬ್ಬರು ಹೀರೆ ಹಡಗಲಿ ತಾಲೂಕು ಹಾಲಸ್ವಾಮಿ ಮಠದಲ್ಲಿ ಹಿಂದೂ ಧರ್ಮದ ಅನುಸಾರ ಮದುವೆ ಆಗಿದೆ. ಈಗಾಗಲೇ ಮಗಳು ನಾಪತ್ತೆಯಾದ ಹಿನ್ನಲೆ ಸತೀಶ್ ಕುಮಾರ್ ಸಂಬಂಧಿಕರನ್ನು ಅಕ್ರಮವಾಗಿ ಬಂಧಿಸಿದ್ದಾರೆ. ನಮ್ಮಗೆ ಪ್ರಾಣ ರಕ್ಷಣೆ ಬೇಕು ಎಂದು ಸಂಪರ್ಕಿಸಿದ ಹಿನ್ನಲೆ ರಜ್ಯಾ ಪೊಲೀಸರ ಮುಂದೆ ಕರೆತರಲಾಗಿದೆ ಎಂದಿದ್ದಾರೆ.
ಎಂಬಿಬಿಎಸ್ ಪದವೀಧರೆ
ತಮಿಳುನಾಡು ಮುಜರಾಯಿ ಸಚಿವರ ಮಗಳು ಜಯ ಕಲ್ಯಾಣಿ ಎಂಬಿಬಿಎಸ್ ಪದವೀಧರೆಯಾಗಿದ್ದಾರೆ. ಇನ್ನು ಸತೀಶ್ ಕುಮಾರ್ ಡಿಪ್ಲೋಮೊ ಓದಿದ್ದಿದ್ದು, ಚೆನ್ನೈನಲ್ಲಿ ಉದ್ಯಮ ಹೊಂದಿದ್ದಾರೆ. ಈ ಹಿಂದೆ ಕೂಡ ಇವರಿಬ್ಬರ ಪ್ರೀತಿ ಪ್ರಕರಣ ಸುದ್ದಿ ಆಗಿತ್ತು. ಈ ವೇಳೆ ಸತೀಶ್ ಕುಮಾರು ತಾವು ಸಚಿವರ ಮಗಳು ಪರಸ್ಪರ ಪ್ರೀತಿ ಮಾಡುತ್ತಿದ್ದೇವೆ. ನಮ್ಮ ಪ್ರೀತಿಗೆ ಸಚಿವ ಶೇಖರ್ ಬಾಬು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ಮೇಲೆ ಹಲವು ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನಲೆ ರಕ್ಷಣೆ ಬೇಕು ಎಂದು ಸೆಲ್ಫಿ ವಿಡಿಯೋವೊಂದನ್ನು ಹರಿ ಬಿಟ್ಟಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ