HOME » NEWS » State » TAMIL NADU FORMER MINISTER M MANIKANDAN ARREST AT BANGALORE TODAY EARLY MORNING IN RAPE CASE LG

M. Manikandan Arrest: ನಟಿ ಮೇಲೆ ಅತ್ಯಾಚಾರ ಆರೋಪ; ಬೆಂಗಳೂರಿನಲ್ಲಿ ತಮಿಳುನಾಡಿನ ಮಾಜಿ ಸಚಿವ ಅರೆಸ್ಟ್​

ತಮಿಳುನಾಡು ಹೈಕೋರ್ಟ್​ ಮಣಿಕಂದನ್​​ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಈ ಹಿನ್ನಲೆ ಆರೋಪಿ ಮಣಿಕಂದನ್​ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು.

news18-kannada
Updated:June 20, 2021, 11:14 AM IST
M. Manikandan Arrest: ನಟಿ ಮೇಲೆ ಅತ್ಯಾಚಾರ ಆರೋಪ; ಬೆಂಗಳೂರಿನಲ್ಲಿ ತಮಿಳುನಾಡಿನ ಮಾಜಿ ಸಚಿವ ಅರೆಸ್ಟ್​
ಮಾಜಿ ಸಚಿವ ಮಣಿಕಂದನ್
  • Share this:
 ಬೆಂಗಳೂರು(ಜೂ.20): ಅತ್ಯಾಚಾರ ಆರೋಪ ಹೊತ್ತಿರುವ ತಮಿಳುನಾಡಿನ ಎಐಡಿಎಂಕೆ ಪಕ್ಷದ ಮಾಜಿ ಸಚಿವ ಮಣಿಕಂದನ್​ ಅವರನ್ನು ಇಂದು ಬೆಂಗಳೂರಿನಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.  ಅತ್ಯಾಚಾರ ಪ್ರಕರಣದ ಆರೋಪಿ ಮಣಿಕಂದನ್​ ತಲೆಮರೆಸಿಕೊಂಡಿದ್ದರು ಎನ್ನಲಾಗಿದ್ದು, ತಮಿಳುನಾಡು ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಮಾಜಿ ಸಚಿವರನ್ನು ಬಂಧಿಸಿದ್ದಾರೆ. 

ಆರೋಪಿ ಮಣಿಕಂದನ್​ ಮಲೇಷ್ಯಾ ಮೂಲದ ನಟಿ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಕೇಳಿ ಬಂದಿದೆ.  2017ರಲ್ಲಿ ಮಣಿಕಂದನ್ ಐಟಿ ಸಚಿವರಾಗಿದ್ದಾಗ ನಟಿಯ ಪರಿಚಯವಾಗಿತ್ತು.  ಮಲೇಷಿಯಾದಲ್ಲಿ ಹೂಡಿಕೆ ಮಾಡುವ ವಿಚಾರಕ್ಕೆ ನಟಿಯನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಮಣಿಕಂದನ್​ ನಟಿಯನ್ನು  ಮದುವೆಯಾಗುವುದಾಗಿ ನಂಬಿಸಿ,  ಲಿವಿಂಗ್ ಇನ್ ರಿಲೇಶನ್ ಇದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:Kolar: ಮಾವು ರಫ್ತು ಮಾಡಲು ರಾಜ್ಯದಿಂದ ಮೊದಲ ಕಿಸಾನ್ ರೈಲಿಗೆ ಚಾಲನೆ

ಮದುವೆಯಾಗುವುದಾಗಿ ನಂಬಿಸಿದ್ದಲ್ಲದೇ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಜೊತೆಗೆ ಮೂರು ಬಾರಿ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿದ್ದರು ಎಂಬ ಆರೋಪವೂ ಸಹ ಕೇಳಿ ಬಂದಿದೆ. ಇಷ್ಟೇ ಅಲ್ಲದೇ, ಮಲೇಷಿಯಾದ ಸಂತ್ರಸ್ತ ನಟಿ ಕುಟುಂಬಸ್ಥರಿಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ  ಅದ್ಯಾರ್​ ಆಲ್​ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡು ಹೈಕೋರ್ಟ್​ ಮಣಿಕಂದನ್​​ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಈ ಹಿನ್ನಲೆ ಆರೋಪಿ ಮಣಿಕಂದನ್​ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು.  ಆನೇಕಲ್‌ನ ತಮ್ಮನಾಯಕನಹಳ್ಳಿಯಲ್ಲಿ ಆರೋಪಿ ಮಣಿಕಂದನ್​ನ್ನು ತಮಿಳುನಾಡು ಪೊಲೀಸರು ಇಂದು  ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:Kolar: ಮಾವು ರಫ್ತು ಮಾಡಲು ರಾಜ್ಯದಿಂದ ಮೊದಲ ಕಿಸಾನ್ ರೈಲಿಗೆ ಚಾಲನೆ

ಆರೋಪಿ ಮಣಿಕಂದನ್​ ಜೆಡಿಎಸ್ ಮುಖಂಡ ತಮ್ಮನಾಯಕನಳ್ಳಿ ಶ್ರೀನಿವಾಸ್ ಅವರಿಗೆ ಸೇರಿದ ವಿಲ್ಲಾ ಒಂದರಲ್ಲಿ ಕಳೆದ 10 ದಿನಗಳಿಂದ ಉಳಿದುಕೊಂಡಿದ್ದರು.  ಖಚಿತ ಮಾಹಿತಿ ಮೇರೆಗೆ ಕಳೆದ ರಾತ್ರಿ ಚೆನ್ನೈ ಪೊಲೀಸರು ಬೆಂಗಳೂರಿಗೆ ಬಂದಿದ್ದರು. ಮೊದಲು ಪೊಲೀಸರು ತಮ್ಮನಾಯಕನಹಳ್ಳಿ ಶ್ರೀನಿವಾಸ್ ಅವರನ್ನು ಭೇಟಿ ಮಾಡಿದ್ದರು. ಇದಾದ ಬಳಿಕ ಇಂದು ಮುಂಜಾನೆ ಮೂರು ಗಂಟೆಗೆ ಅತ್ಯಾಚಾರ ಪ್ರಕರಣದ ಆರೋಪಿ ಮಣಿಕಂದನ್​ನ್ನು ಪೊಲೀಸರು ಬಂಧಿಸಿದ್ದಾರೆ.
Youtube Video

ಅರೆಸ್ಟ್ ಮಾಡಿದ ಚೆನ್ನೈ ಪೊಲೀಸರು ಆರೋಪಿಯನ್ನು ಆನೇಕಲ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಳಿಕ, ತಮಿಳುನಾಡಿಗೆ ಕರೆದೊಯ್ದಿದ್ದಾರೆ.
Published by: Latha CG
First published: June 20, 2021, 11:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories