Ganesh Chaturthi : ಕರ್ನಾಟಕ ಬೆನ್ನಲ್ಲೇ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಮಿಳುನಾಡಿನಲ್ಲೂ ವಿನಾಯಿತಿ

ಸಾರ್ವಜನಿಕ ಒತ್ತಾಯದ ಬಳಿಕ ಗಣೇಶ ಹಬ್ಬದಂದು ರಾಜ್ಯದಲ್ಲಿ ಸಣ್ಣ ದೇವಾಯಗಳ ತೆರೆಯಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ.

ಗಣೇಶನ ವಿಗ್ರಹ

ಗಣೇಶನ ವಿಗ್ರಹ

  • Share this:
    ಚೆನ್ನೈ (ಸೆ. 6): ಕಳೆದ ಬಾರಿಗೆ ಹೋಲಿಸಿಕೊಂಡರೆ ದೇಶದಲ್ಲಿ ಈ ಬಾರಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಕೇರಳ, ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ರಕರಣಗಳು (delta case) ದಾಖಲಾಗಿರುವುದು ಕೊಂಚ ಆತಂಕ ಮನೆ ಮಾಡಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಗಡಿ ಜಿಲ್ಲೆ ಹೊರತು ಪಡಿಸಿ, ಉಳಿದೆಲ್ಲಾ ಕಡೆ ಸೋಂಕು ಕಡಿಮೆ ಇದೆ. ಈ ಹಿನ್ನಲೆ ಶೇ. 2ಕ್ಕಿಂತ ಪಾಸಿಟಿವಿಟಿ ಸೋಂಕು ಕಡಿಮೆ ಇರುವ ಕಡೆ 5 ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ  ಸರ್ಕಾರ ಅನುಮತಿ ನೀಡಿದೆ. ಕರ್ನಾಟಕದಲ್ಲಿ ಗಣೇಶ ಹಬ್ಬ (Ganesha festival) ಆಚರಣೆಗೆ ವಿನಾಯಿತಿ ಸಿಕ್ಕ ಬೆನ್ನಲ್ಲೇ ಇದೀಗ ನೆರೆಯ ತಮಿಳುನಾಡಿನಲ್ಲೂ (tamilnadu) ಗಣೇಶ ಹಬ್ಬ ಆಚರಣೆಗೆ ನಿಯಮಗಳ ಸಡಿಲಿಕೆ ಮಾಡಲಾಗಿದೆ.  ಸಾರ್ವಜನಿಕ ಒತ್ತಾಯದ ಬಳಿಕ ಗಣೇಶ ಹಬ್ಬದಂದು ರಾಜ್ಯದಲ್ಲಿ ಸಣ್ಣ ದೇವಾಯಗಳ ತೆರೆಯಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ.

    ರಾಜ್ಯದಲ್ಲಿ ಗಣೇಶ ಹಬ್ಬದ ಮಾರ್ಗಸೂಚಿ ಬಿಡುಗಡೆಗೊಳಿಸುವಂತೆ ಹಿಂದು ಸಂಘಟನೆ ಎಚ್​​ಎಂಕೆ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಈ ಅರ್ಜಿ ವಿಚಾರಣೆ ಬಳಿಕ ನ್ಯಾಯಾಲಯದ ಮುಂದೆ ಈ ಕುರಿತು ತಿಳಿಸಿರುವ ಡಿಎಂಕೆ ಸರ್ಕಾರ, ಗಣೇಶ ಹಬ್ಬದಂದು ಚಿಕ್ಕ ದೇವಾಲಯಗ ತೆರೆಯಲು ಅವಕಾಶ ನೀಡಲಾಗಿದೆ. ಜೊತೆಗೆ ಗಣೇಶ ಹಬ್ಬದಂದು ಮನೆಯಲ್ಲಿ ಕೂರಿಸಿದ ಗಣೇಶಗಳನ್ನು ಸಣ್ಣ ದೇವಾಲಯಗಳನ್ನು ತಂದು ಇಡಬೇಕು. ಈ ಗಣೇಶ ಮೂರ್ತಿಗಳ ವಿಸರ್ಜನೆ ಜವಾಬ್ದಾರಿಯನ್ನು ಡಿಎಂಕೆ ಸರ್ಕಾರ ತೆಗೆದುಕೊಳ್ಳಲಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ.

    ರಾಜ್ಯದಲ್ಲಿ ಸೋಂಕಿನ ಪ್ರಮಾಣ ದಾಖಲಾಗುತ್ತಿರುವ ಹಿನ್ನಲೆ ವೀಕೆಂಡ್​ಗಳನ್ನು ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಿ, ಕಳೆದ ವಾರ ಸರ್ಕಾರ ಘೋಷಣೆ ಹೊರಡಿಸಿತ್ತು. ಜೊತೆಗೆ ಬೀಚ್​ಗಳಲ್ಲೂ ಕೂಡ ಭಾನುವಾರ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ.

    ಸಾರ್ವಜನಿಕ ಹಬ್ಬಗಳ ಆಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿದ ಬಳಿಕ ರಾಜ್ಯದಲ್ಲಿ ಸೆಪ್ಟೆಂಬರ್​ 10ರಂದು ಗಣೇಶ ಹಬ್ಬ ಆಚರಣೆಗೆ ನಿರ್ಧರಿಸಲಾಗಿದೆ. ಕಳೆದ ಬಾರಿಗಿಂತೆ ಈ ಬಾರಿ ಕೊಂಚ ನಿಯಮಗಳ ಸಡಿಲಿಕೆಯಾಗಿದೆ. ಜನರು ಪ್ರತ್ಯೇಕವಾಗಿ ಗಣೇಶ ಮೂರ್ತಿಯನ್ನು ಸಮುದ್ರದಲ್ಲಿ ವಿಸರ್ಜಿಸಬಹುದಾಗಿದೆ. ಆದರೆ, ವಿಸರ್ಜನೆ ವೇಳೆ ಯಾವುದೇ ಮೆರವಣಿಗೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

    ಇದನ್ನು ಓದಿ: ಬೆಳಗಾವಿ, ಹುಬ್ಬಳ್ಳಿ ಪಾಲಿಕೆಯಲ್ಲಿ ಬಿಜೆಪಿ ಮೇಲುಗೈ; ತರೀಕೆರೆ ಪುರಸಭೆ ಕೈ ವಶ

    ಇನ್ನು ರಾಜ್ಯದಲ್ಲಿ ವೈದ್ಯಕೀಯ ತಜ್ಞರ ಅಭಿಪ್ರಾಯ ಪಡೆದು ಶಾಲೆ ಆರಂಭಿಸಲಾಗಿದೆ. 9 ರಿಂದ 12ನೇ ತರಗತಿವರೆಗೆ ಶಾಲೆ ಆರಂಭಿಸಲಾಗಿತ್ತು. ಈ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ಕಾರಿ ಮತ್ತು ಖಾಸಗಿ ನಡೆಸುವ ಶಾಲೆಗಳು ಮತ್ತು ಕಾಲೇಜು ಹಾಸ್ಟೆಲ್‌ಗಳು ತೆರೆದಿವೆ. ಜೊತೆಗೆ ಹಾಸ್ಟೆಲ್​ನಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.

    ಕೇರಳದಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚುತ್ತಿರುವ ಹಿನ್ನಲೆ ನೆರೆಯ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅವರ ನೆಗೆಟಿವ್​ ಆರ್​ಟಿಪಿಸಿಆರ್​ ವರದಿ ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.

    ರಾಜ್ಯದಲ್ಲಿ ಪ್ರಕರಣ ಕಡಿಮೆಯಾದರೂ ಜನರು ಮೈ ಮರೆತು ಬೀಚ್​ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನಲೆ ವಾರಾಂತ್ಯದಲ್ಲಿ ಸಾರ್ವಜನಿಕ ಪ್ರವೇಶ ನಿರಾಕರಿಸಲಾಗಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:Seema R
    First published: