HOME » NEWS » State » TALLEST STATUE OF LORD HANUMAN TO COME UP AT HAMPI SNVS

ಹಂಪಿಯಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ; ಇದರ ಎತ್ತರ ಮತ್ತು ವೆಚ್ಚ ಎಷ್ಟು ಗೊತ್ತಾ?

ಹನುಮಂತನ ಜನ್ಮಸ್ಥಳವೆಂದು ನಂಬಲಾಗಿರುವ ಬಳ್ಳಾರಿ ಜಿಲ್ಲೆ ಹಂಪಿಯ ಹೊರವಲಯದ ಹಂಪಾಪುರದಲ್ಲಿ ವಿಶ್ವದ ಅತಿ ದೊಡ್ಡ ಆಂಜನೇಯನ ಪ್ರತಿಮೆ ನಿರ್ಮಾಣ ಆಗಲಿದೆ ಎಂದು ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ನ ಅಧ್ಯಕ್ಷರು ತಿಳಿಸಿದ್ದಾರೆ.


Updated:November 17, 2020, 8:33 AM IST
ಹಂಪಿಯಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ; ಇದರ ಎತ್ತರ ಮತ್ತು ವೆಚ್ಚ ಎಷ್ಟು ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ನ. 17): ಬಳ್ಳಾರಿ ಜಿಲ್ಲೆಯ ಹಂಪಿಯ ಹೊರವಲಯದಲ್ಲಿ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ ತಲೆ ಎತ್ತಲಿದೆ. ರಾಮಜನ್ಮಭೂಮಿ ಇರುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಅಧ್ಯಕ್ಷ ಸ್ವಾಮಿ ಗೋವಿಂದ್ ಆನಂದ್ ಸರಸ್ವತಿ ಅವರು ಈ ವಿಚಾರವನ್ನು ತಿಳಿಸಿದ್ಧಾರೆ. ನಿನ್ನೆ ಅವರು ಅಯೋಧ್ಯೆಯ ರಾಮಜನ್ಮಭೂಮಿ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಭೇಟಿಯಾದ ಬಳಿಕ ಇದನ್ನು ಬಹಿರಂಗಪಡಿಸಿದ್ದಾರೆ. ಕರ್ನಾಟಕದ ಬಳ್ಳಾರಿಯಲ್ಲಿರುವ ಪಂಪಾಪುರದಲ್ಲಿ 215 ಮೀಟರ್ ಎತ್ತರದ ಹನುಮನ ವಿಗ್ರಹ ನಿರ್ಮಿಸುವ ಯೋಜನೆ ಇದಾಗಿದೆ. ಇದಕ್ಕೆ ಅಂದಾಜು 1,200 ಕೋಟಿ ರೂ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ಹಂಪಿಯ ಪಂಪಾಪುರವು ರಾಮಾಯಣದಲ್ಲಿ ಬರುವ ಕಿಷ್ಕಿಂದೆ ಸ್ಥಳ ಎಂದು ನಂಬಲಾಗಿದೆ. ಹನುಮಂತ ಇದೇ ಕಿಷ್ಕಿಂದೆಯಲ್ಲಿ ಜನಿಸಿದ್ದು ಎಂದು ವಾಲ್ಮೀಕಿ ರಾಮಾಯಣದಲ್ಲಿ ಹೇಳಲಾಗಿದೆ.

ಹನುಮಂತನ ವಿಗ್ರಹ ಸ್ಥಾಪನೆಗೆ ಹಣ ಸಂಗ್ರಹಿಸಲು ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂಸ್ಥೆಯು ರಾಷ್ಟ್ರವ್ಯಾಪಿ ರಥಯಾತ್ರೆ ನಡೆಸಲಿದೆ ಎಂದು ಟ್ರಸ್ಟ್​ನ ಅಧ್ಯಕ್ಷ ಸ್ವಾಮಿ ಗೋವಿಂದ್ ಆನಂದ್ ಸರಸ್ವತಿ ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು 6 ವರ್ಷದಲ್ಲಿ ಹಂಪಿಯ ಹಂಪಾಪುರದಲ್ಲಿ ವಿಶ್ವದ ಅತಿ ಎತ್ತರದ ಆಂಜನೇಯನ ಮೂರ್ತಿ ನಿರ್ಮಾಣವಾಗಲಿದೆ.

ಇದನ್ನೂ ಓದಿ: ಆಂಧ್ರದ ಕಾಂಚನಪಲ್ಲಿಯಿಂದ ಮಹಾರಾಷ್ಟ್ರದ ಕಾಗಲ್​ವರೆಗೆ ಬದ್ರಶೆಟ್ಟಿ ಪಾದಯಾತ್ರೆ; ಹುಬ್ಬಳ್ಳಿಯಲ್ಲಿ ಭರ್ಜರಿ ಸ್ವಾಗತ

ಇದೇ ವೇಳೆ, ಅಯೋಧ್ಯೆಯಲ್ಲಿ ಶ್ರೀ ರಾಮನ ಬೃಹತ್ ಪ್ರತಿಮೆ ನಿರ್ಮಿಸಲಾಗುತ್ತಿದೆ. ಇದು 221 ಮೀಟರ್ ಎತ್ತರದಲ್ಲಿದ್ದು, ವಿಶ್ವದ ಅತಿ ಎತ್ತರದ ರಾಮನ ಪ್ರತಿಮೆ ಆಗಿರಲಿದೆ. ಹನುಮಂತನ ಪ್ರತಿಮೆ ರಾಮನದಕ್ಕಿಂತ ದೊಡ್ಡದಿರುವುದು ಬೇಡವೆಂದು ಹಂಪಿಯಲ್ಲಿ ತುಸು ಕಡಿಮೆ ಎತ್ತರದ ಹನುಮಂತನ ಪ್ರತಿಮೆ ನಿರ್ಮಿಸಲು ಯೋಜಿಸಲಾಗಿದೆ.
Published by: Vijayasarthy SN
First published: November 17, 2020, 8:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories