ಚಿತ್ರದುರ್ಗ: ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಮೂರು ಪಕ್ಷದ ನಾಯಕರು ಭರ್ಜರಿ ಮತಬೇಟೆಯಲ್ಲಿ ತೊಡಗಿದ್ದಾರೆ. ಅಬ್ಬರದ ಪ್ರಚಾರದ ಮಧ್ಯೆ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹಾಗೂ ಪರ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ನಡುವೆ ಮಾತಿನ ಏಟು-ಎದಿರೇಟು ಮುಂದುವರೆದಿದೆ. ಇಂದು ಚಿತ್ರದುರ್ಗದ ಕಾಂಗ್ರೆಸ್ ಅಭ್ಯರ್ಥಿ ಪರ ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ಪರ ಸಿದ್ದರಾಮಯ್ಯ ಮತಯಾಚನೆ ನಡೆಸಿದರು. ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಈಶ್ವರಪ್ಪ ಎನ್ನುವ ಒಬ್ಬ ಪೆದ್ದ ಇದ್ದಾನೆ. ಸೋಮಶೇಖರ್ ಗೆ ಗಂಧ ಗಾಳಿ ಏನೂ ಗೊತ್ತಿಲ್ಲ ಕಾಂಗ್ರೆಸ್ ಅಂತರವನ್ನು ಅಭ್ಯರ್ಥಿಯಾಗಿ ಮಾಡಿದೆ ಎಂದಿದ್ದಾನೆ. ಸೋಮಶೇಖರ್ ಗ್ರಾ.ಪಂ ಸದಸ್ಯ, ಅಧ್ಯಕ್ಷ ಹಾಗೂ ನಾನು ಸಿಎಂ ಆಗಿದ್ದಾಗ ರಾಜ್ಯಮಟ್ಟದ ನಿಗಮ ಮಂಡಳಿಗೆ ಅಧ್ಯಕ್ಷನಾಗಿ ಮಾಡಿದ್ದೆ. ಇವೆಲ್ಲಾ ಈಶ್ವರಪ್ಪ ಅವರಿಗೆ ಗೊತ್ತಿರಬೇಕಲ್ಲ. ಏನೋ ಬಾಯಿಗೆ ಬಂದಂಗೆ ಮಾತನಾಡಿ ಬಿಡೋದು. ಆಭ್ಯರ್ಥಿ ಆಯ್ಕೆ ಬಗ್ಗೆ ಈಶ್ವರಪ್ಪ ಯಾರು ನಮಗೆ ಹೇಳೋಕೆ. Who is this ಈಶ್ವರಪ್ಪ ಆರೋಪ ಮಾಡೋದಕ್ಕೆ. Eshwarappa is a show man ಎಂದು ತಿರುಗೇಟು ನೀಡಿದರು.
ನಾಚಿಕೆ ಆಗಲ್ವಾ ನಿಂಗೆ..?
ಈಶ್ವರಪ್ಪ ನಿಮ್ಮ ಕೆಲಸ ನೀವು ನೋಡಿಕೊಳ್ರಿ, ನಮ್ಮ ಕತೆ ಯಾಕೆ ನಿಂಗೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನಾಚಿಕೆ ಆಗಲ್ವಾ ನಿಂಗೆ ಎಂದು ಈಶ್ವರಪ್ಪ ವಿರುದ್ದ ಏಕವಚನದಲ್ಲೇ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಈಶ್ವರಪ್ಪ ರಾಜಕೀಯ ಗಂಧ-ಗಾಳಿ ಗೊತ್ತಿಲ್ಲ ಅಂತ ಹೇಳಿದ್ದಾನೆ ಅಲ್ವಾ? ಅವನಿಗೆ ರಾಜಕೀಯ ಗಂಧ-ಗಾಳಿ ಗೊತ್ತಿದ್ಯಾ? ಮಂತ್ರಿ ಆಗಿದ್ದೀನಿ ಅಂತ ಬಾಯಿಗೆ ಬಂದಂಗೆಲ್ಲಾ ಮತನಾಡೋದು ಅಷ್ಟೇ ಗೊತ್ತಿರೋದು ಎಂದು ಮಾತಿನಲ್ಲೇ ಚಾಟಿ ಬೀಸಿದರು.
ಯಾವುದೇ ಕುಚಿ೯ ಮೇಲೆ ಕುಳಿತ್ರು ಮುಳ್ಳು ಚುಚ್ಚಿದ ಹಾಗೆ ಆಗ್ತಿದೆ
ಇನ್ನು ಬಾಗಲಕೋಟೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಸಹ ಸಿದ್ದರಾಮಯ್ಯ ವಿರುದ್ಧ ಪ್ರತಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸಕಾ೯ರ ವಜಾಕ್ಕೆ ಆಗ್ರಹಿಸುತ್ತಿದ್ದಾರೆ. ಸಿದ್ದರಾಮಯ್ಯಗೆ ಸಿಎಂ ಕುಚಿ೯ ಕಳೆದುಕೊಂಡ ಬಳಿಕ ಯಾವುದೇ ಕುಚಿ೯ ಮೇಲೆ ಕುಳಿತ್ರು ಮುಳ್ಳು ಚುಚ್ಚಿದ ಹಾಗೆ ಆಗ್ತಿದೆ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನನೇ ಬೇಕು ಅಂತಾರೆ, ಅದೊಂದೇ ಅವರಿಗೆ ಮೆತ್ತಗೆ ಇರೋ ಕುಚಿ೯ ಅನಿಸುತ್ತೆ. ಆದಷ್ಟು ಬೇಗ ಮತ್ತೆ ಮುಖ್ಯಮಂತ್ರಿ ಆಗಬೇಕು ಅನ್ನೋ ಭ್ರಮೆಯಲ್ಲಿ ಅವರಿದ್ದಾರೆ. ನಾನೇ ಸಿಎಂ ಅಂತ ಹೇಳಿಕೊಳ್ಳತಾರೆ. ನೀವು ಹೇಳಕೂಡದು ಅಂದಿದ್ದಕ್ಕೆ ತಮ್ಮ ಶಿಷ್ಯಂದಿರ ಮೂಲಕ ಮುಂದಿನ ಸಿಎಂ ಸಿದ್ದರಾಮಯ್ಯ ಅಂತ ಘೋಷಣೆ ಕೂಗಿಸಿಕೊಂಡ್ರು. ಪಾಪ, ಇದಕ್ಕೆ ಡಿಕೆಶಿ ಸುಮ್ಮನೆ ಇತಾ೯ರಾ..ಅವರ ಬೆಂಬಲಿಗರು ಡಿಕೆ ಡಿಕೆ ಅಂತ ಕೂಗಿದ್ರು. ಕೂಗಕೂಡದು ಕೂಗಿದ್ರೆ ಶಿಸ್ತಿನ ಕ್ರಮ ಅಂತ ಬೊಗಳೆ ಹೇಳಿಕೆಯನ್ನು ಡಿಕೆಶಿ ಹೇಳ್ತಾರೆ ಎಂದು ಕುಹಕವಾಡಿದರು.
ಕಾಂಗ್ರೆಸ್ ಗೆಲ್ಲಲ್ಲ, ಇವರು ಸಿಎಂ ಆಗಲ್ಲ
ಸಿಎಂ ಆಗಬೇಕೆನ್ನೋ ಆಸೆ ಸಿದ್ದು, ಡಿಕೆಶಿಗೆ ಇದೆ, ಆದ್ರೆ ಜನ ಇವರನ್ನ ಗೆಲ್ಲಿಸೋದಿಲ್ಲ. ಕಾಂಗ್ರೆಸ್ ದೇಶ, ರಾಜ್ಯದಲ್ಲಿ ಇಲ್ಲವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಮುಂದಿನ ಬಾರಿ ರಾಜ್ಯ ಮತ್ತು ಕೇಂದ್ರದಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದ ಸಚಿವ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: MLC Election: ಬಿಜೆಪಿಗೆ ವರ್ತೂರು ಪ್ರಕಾಶ್ ಬೆಂಬಲ; ಕಣ್ಣೀರು ಹಾಕಿ ಶಪಥ ಮಾಡಿದ ಮಾಜಿ ಸಚಿವ
ಚಾಮುಂಡಿ ಸೋತು ಬದಾಮಿಗೆ ಬಂದಿದ್ದೀರಿ, ಈ ಸಾರಿ ಬದಾಮಿಯಲ್ಲಿ ಸ್ಪರ್ಧೆ ಮಾಡಲಿ ನೋಡೋಣ ಗೊತ್ತಾಗುತ್ತದೆ. ಒಂದೊಂದು ಸಾರಿ ಒಂದೊಂದು ಚುನಾವಣೆಗೆ ಒಂದೊಂದು ಕ್ಷೇತ್ರ. ಚಾಮುಂಡಿ ಜನ ಬೇಡ ಅಂದ ಕೂಡಲೆ ಬದಾಮಿ, ಬಾದಾಮಿ ಜನ ಬೇಡ ಅಂದ್ರೆ ಎಲ್ಲಿ ಹೋಗ್ತಾರೊ ಏನೋ. ಇವರದ್ದು ಮುಖ್ಯಮಂತ್ರಿ ಕನಸು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಡಿಕೆ ಆಗಲಿ ಸಿದ್ದರಾಮಯ್ಯ ಆಗಲಿ ಸಿಎಂ ಆಗುವ ಪ್ರಶ್ನೆ ಉದ್ಭವ ಆಗೋದಿಲ್ಲ ಎಂದ ಈಶ್ವರಪ್ಪ ಭವಿಷ್ಯ ನುಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ