ಮಂಡ್ಯ(ಜ.20): ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಶೂಟಿಂಗ್ಗೆ ಮಂಡ್ಯದಲ್ಲಿ ಕಂಟಕ ಎದುರಾಗಿದೆ. ರೈತ ಹೋರಾಟಗಾರರು ಮೈಶುಗರ್ ಕಾರ್ಖಾನೆಯಲ್ಲಿ ಚಿತ್ರದ ಶೂಟಿಂಗ್ ಬಗ್ಗೆ ಸುಮಲತಾ ಅಂಬರೀಶ್ ವಿರುದ್ದ ಕಿಡಿಕಾರಿದ್ದಾರೆ. ಆದ್ರೆ ಇದಕ್ಕೆ ಸುಮಲತಾ ಕೂಡ ಬೇಸರ ವ್ಯಕ್ತಪಡಿಸಿದ್ದು, ರೈತ ಹೋರಾಟಗಾರರ ವಿರುದ್ದ ಗುಡುಗಿದ್ದಾರೆ.ಹೌದು! ಮಂಡ್ಯ ಮೈ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರದ ಶೂಟಿಂಗ್ ಮಾಡಲಾಗ್ತಿದೆ. ಇದಕ್ಕೆ ಮಂಡ್ಯದ ರೈತ ಹಿತರಕ್ಷಣಾ ಸಮಿತಿ ಹೋರಾಟಗಾರರು ಗರಂ ಆಗಿದ್ದಾರೆ. ಸುಮಲತಾ ಅಂಬರೀಷ್ ತಮ್ಮ ಪ್ರಭಾವ ಬಳಸಿ ಕಾರ್ಖಾನೆಯಲ್ಲಿ ತಮ್ಮ ಪುತ್ರನ ಚಿತ್ರದ ಶೂಟಿಂಗ್ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ. ಅಲ್ಲದೆ ಯಾವುದೇ ಅನುಮತಿ ಪಡೆಯದೆ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದು, ಚಿತ್ರೀಕರಣವನ್ನ ಸ್ಥಗಿತ ಮಾಡಬೇಕು ಅಂತ ಆಗ್ರಹಿಸಿದ್ದಾರೆ.
ಇನ್ನು ರೈತ ಹಿತರಕ್ಷಣಾ ಸಮಿತಿ ಸದಸ್ಯರು ಸುಮಲತಾ ವಿರುದ್ದ ಆರೋಪ ಮಾಡ್ತಿದ್ದಂತೆ, ಇತ್ತ ಬಿಜೆಪಿಯವರು ಕೂಡ ಮಧ್ಯ ಪ್ರವೇಶ ಮಾಡಿದ್ದಾರೆ. ಸುಮಲತಾ ಅಂಬರೀಷ್ ಯಾವುದೇ ಅನುಮತಿ ಪಡೆಯದೆ ಶೂಟಿಂಗ್ ನಡೆಸ್ತಿದ್ದಾರೆ ಅನ್ನೋದು ಸುಳ್ಳು, ರೈತ ಹಿತರಕ್ಷಣಾ ಸಮಿತಿ ಹೋರಾಟಗಾರರು ಜಿ ಮಾದೇಗೌಡರನ್ನ ದುರ್ಬಳಕೆ ಮಾಡಿಕೊಂಡು ಈ ರೀತಿ ವಿರೋಧ ವ್ಯಕ್ತಪಡಿಸ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಅಲ್ಲದೆ ಶೂಟಿಂಗ್‌ಗಾಗಿ ಮೈ ಶುಗರ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನೀಡಿರೋ ದಾಖಲೆಯನ್ನ ರಿಲೀಸ್ ಮಾಡಿ ರೈತ ಹೋರಾಟಗಾರರ ನಡೆಯನ್ನು ಖಂಡಿಸಿದ್ದಾರೆ.
ಒಂದೂವರೆ ವರ್ಷದ ಮಟ್ಟಿಗೆ ಕೃಷಿ ಕಾನೂನುಗಳನ್ನು ತಡೆಹಿಡಿಯಲು ಮುಂದಾದ ಕೇಂದ್ರ ಸರ್ಕಾರ
ಇನ್ನು ಮತ್ತೊಂದು ಕಡೆ ಸುಮಲತಾ ಅಂಬರೀಷ್ ಕೂಡ ರೈತ ಹೋರಾಟಗಾರರ ನಡೆಯನ್ನ ಖಂಡಿಸಿದ್ದಾರೆ. ರೈತ ಹೋರಾಟಗಾರರಿಗೆ ವಿದ್ಯಾಭ್ಯಾಸ ಇರಲಿ, ಕನಿಷ್ಟ ಸಾಮಾನ್ಯ ಜ್ಞಾನ ಇರಬೇಕಿತ್ತು. ಅಲ್ಲದೆ ಇವರಿಗೆ ಪ್ರಚಾರ ಬೇಕಾಗಿದೆ. ಹೀಗಾಗಿ ಸುಮಲತಾ ಹೆಸರು ಹೇಳಿಕೊಂಡು ಬಂದ್ರೆ ಪ್ರಚಾರ ಸಿಗತ್ತೆ ಅಂತ ಹೀಗೆ ನಡೆದುಕೊಳ್ತಿದ್ದಾರೆ. ಅಲ್ಲದೆ ಈ ಹಿಂದೆ ಇಲ್ಲಿ ಹಲವಾರು ಶೂಟಿಂಗ್ ನಡೆದು ಶಿವರಾಜಕುಮಾರ್, ಸುದೀಪ್ ರಂತ ನಟರು ನಟಿಸಿದ್ದಾರೆ. ಆಗ ಇಲ್ಲದ ಇವರ ವಿರೋಧ ಈಗ ಯಾಕೆ? ಅಭಿಮಾನದಿಂದ ಮಂಡ್ಯದಲ್ಲಿ ಶೂಟಿಂಗ್ ಮಾಡಲು ಬರ್ತಾರೆ. ಆದ್ರೆ ಇವ್ರು ಈ ರಿತಿ ನಡೆದುಕೊಂಡ್ರೆ ಮುಂದೆ ಯಾರು ಇಲ್ಲಿಗೆ ಶೂಟಿಂಗ್ ಮಾಡಲು ಬರ್ತಾರೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ