ಕೆ.ಹೆಚ್. ಮುನಿಯಪ್ಪ v/s ವಿ. ಮುನಿಯಪ್ಪ ದಂಗಲ್; ಇಬ್ಬರು ನಾಯಕರ ಜಂಗಿಕುಸ್ತಿಗೆ ದಂಗಾದ ಗುಂಡೂರಾವ್

ಈವರೆಗೆ ರಾಜ್ಯ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ v/s ಕೆ.ಹೆಚ್. ಮುನಿಯಪ್ಪ ಫೈಟ್ ಎಂದೇ ಬಿಂಬಿಸಲಾಗಿತ್ತು. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ ವಿ. ಮುನಿಯಪ್ಪ v/s ಕೆ.ಹೆಚ್. ಮುನಿಯಪ್ಪ ಪರಸ್ಪರ ಮಾತಿನ ಯುದ್ಧಕ್ಕೆ ಇಳಿದಿರುವ ರಾಜ್ಯ ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

MAshok Kumar | news18-kannada
Updated:October 20, 2019, 3:32 PM IST
ಕೆ.ಹೆಚ್. ಮುನಿಯಪ್ಪ v/s ವಿ. ಮುನಿಯಪ್ಪ ದಂಗಲ್; ಇಬ್ಬರು ನಾಯಕರ ಜಂಗಿಕುಸ್ತಿಗೆ ದಂಗಾದ ಗುಂಡೂರಾವ್
ಸಿದ್ದರಾಮಯ್ಯ, ಕೆ.ಎಚ್​​​ ಮುನಿಯಪ್ಪ, ರಮೇಶ್​​​ ಕುಮಾರ್​​​​​
  • Share this:
ಬೆಂಗಳೂರು (ಅಕ್ಟೋಬರ್ 20); ಇತ್ತೀಚೆಗೆ ಕೆಪಿಸಿಸಿ ಸಭೆಯಲ್ಲಿ ಪ್ರಾದೇಶಿಕ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಏಕ ವಚನದಲ್ಲಿ ಹರಿಹಾಯ್ದಿದ್ದ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗಾಗಿ ಕೆಲಸ ಮಾಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದರು.

ಕೆಪಿಸಿಸಿ ಸಭೆಯಲ್ಲಿ ನಡೆದಿದ್ದ ಈ ಗಲಾಟೆ ರಾಜ್ಯ ಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ v/s ಮುನಿಯಪ್ಪ ದಂಗಲ್ ಎಂದೇ ಬಿಂಬಿಸಲಾಗಿತ್ತು. ಆದರೆ, ರಾಜ್ಯ ಕಾಂಗ್ರೆಸ್​ನಲ್ಲಿ ಇದೀಗ ಹೊಸ ದಂಗಲ್ ಶುರುವಾಗಿದೆ. ಈ ಕುರಿತ ಎಕ್ಸ್​ಕ್ಲೂಸಿವ್ ಖಚಿತ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದೆ.

ಅಸಲಿಗೆ ಮೂರು ದಿನದ ಹಿಂದೆ ಕೋಲಾರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕೆ.ಹೆಚ್. ಮುನಿಯಪ್ಪ ಹಾಗೂ ಬೆಂಬಲಿಗರು ಮತ್ತೊಮ್ಮೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ರಮೇಶ್ ಕುಮಾರ್ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿರುದ್ಧ ಹರಿಹಾಯ್ದಿದ್ದರು. ಹೀಗಾಗಿ ಮುನಿಯಪ್ಪ ಬೆಂಬಲಿಗರ ವಿರುದ್ಧ ಶಿಸ್ತುಕ್ರಮ ಜರುಗಿಸಲು ದಿನೇಶ್ ಗುಂಡೂರಾವ್ ಮುಂದಾಗಿದ್ದರು. ಆದರೆ, ಕೆ.ಹೆಚ್. ಮುನಿಯಪ್ಪ ಶಿಸ್ತುಕ್ರಮ ಬೇಡ ಎಂದು ಹಠ ಹಿಡಿದಿದ್ದರು.

ಆದರೆ, ಈ ವೇಳೆ ಮಧ್ಯಪ್ರವೇಶಿಸಿ ಕೆ.ಹೆಚ್. ಮುನಿಯಪ್ಪ ವಿರುದ್ಧ ಕಿಡಿಕಾರಿರುವ ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿ. ಮುನಿಯಪ್ಪ, “ಈ ಹಿಂದೆ ನೀನು ಕಾಂಗ್ರೆಸ್ಸಿಗರನ್ನೆ ಸೋಲಿಸಿದ್ದೀಯ? ಒಳ ಒಪ್ಪಂದ ಮಾಡಿಕೊಂಡು ಪಾರ್ಟಿ ಹಾಳು ಮಾಡಿದ್ದೀಯ? ಈಗ ನೀನು ಒಳ್ಳೆಯವನ ರೀತಿ ಪೋಸು ಕೊಡ್ತಿದ್ದೀಯ? ಎಂದು ವಚನದಲ್ಲೇ ಹರಿಹಾಯ್ದಿದ್ದಾರೆ. ಅಲ್ಲದೆ, ಒಂದು ಹಂತದಲ್ಲಿ ಇಬ್ಬರೂ ನಾಯಕರು ಸೊಂಟದ ಕೆಳಗಿನ ಭಾಷೆ ಪ್ರಯೋಗವಾಗಿದ್ದು, ಸಭೆಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಬ್ಬರ ಜಗಳ ನೋಡಿ ತಲೆಮೇಲೆ ಕೈ ಹೊತ್ತು ಕುಳಿತು ಬಿಟ್ಟಿದ್ದರು” ಎಂದು ಹೇಳಲಾಗುತ್ತಿದೆ.

ಒಟ್ಟಲ್ಲಿ ಈವರೆಗೆ ರಾಜ್ಯ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ v/s ಕೆ.ಹೆಚ್. ಮುನಿಯಪ್ಪ ಫೈಟ್ ಎಂದೇ ಬಿಂಬಿಸಲಾಗಿತ್ತು. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ ವಿ. ಮುನಿಯಪ್ಪ v/s ಕೆ.ಹೆಚ್. ಮುನಿಯಪ್ಪ ಪರಸ್ಪರ ಮಾತಿನ ಯುದ್ಧಕ್ಕೆ ಇಳಿದಿರುವ ರಾಜ್ಯ ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

(ವರದಿ - ಚಿದಾನಂದ ಪಟೇಲ್)

ಇದನ್ನೂ ಓದಿ : ಸಿದ್ದರಾಮಯ್ಯಗೆ ವಿಪಕ್ಷ ನಾಯಕನ ಸ್ಥಾನ: ‘ಪಕ್ಷದ ತೀರ್ಮಾನಕ್ಕೆ ಬದ್ಧ’ – ಮುನಿಸು ನುಂಗಿಕೊಂಡ ಕೆ.ಎಚ್. ಮುನಿಯಪ್ಪ
First published: October 20, 2019, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading