• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಿಂದಗಿಯಲ್ಲಿ ಕಾಂಗ್ರೆಸ್ ಗೆ ಹೀನಾಯ ಸೋಲೆಂದ ಸಿಎಂ; ಹಾನಗಲ್ ಅಳಿಯ ಅಂದ್ರೂ ಸಿಎಂಗೆ ಸೋಲಿಸಿದ್ರು - ಡಿಕೆಶಿ ಟಾಂಗ್

ಸಿಂದಗಿಯಲ್ಲಿ ಕಾಂಗ್ರೆಸ್ ಗೆ ಹೀನಾಯ ಸೋಲೆಂದ ಸಿಎಂ; ಹಾನಗಲ್ ಅಳಿಯ ಅಂದ್ರೂ ಸಿಎಂಗೆ ಸೋಲಿಸಿದ್ರು - ಡಿಕೆಶಿ ಟಾಂಗ್

ಸಿಎಂ ಬೊಮ್ಮಾಯಿ ಮತ್ತು ಡಿ.ಕೆ.ಶಿವಕುಮಾರ್

ಸಿಎಂ ಬೊಮ್ಮಾಯಿ ಮತ್ತು ಡಿ.ಕೆ.ಶಿವಕುಮಾರ್

ಸಿಂಧಗಿಯಲ್ಲಿ ಹೀನಾಯ ಸೋಲನುಭವಿಸಿದ ಕಾಂಗ್ರೆಸ್ ನವರು ನಮ್ಮ ಬಗ್ಗೆ ಏನು ಮಾತಾಡ್ತಾರೆ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದರೆ, ಹಾನಗಲ್ ನ ಅಳಿ ಅಂದು ಸೋತವರು ತಾವಲ್ಲ ಎಂದು ಡಿಕೆಶಿ ಲೇವಡಿ ಮಾಡಿದ್ದಾರೆ.

  • Share this:

ಹುಬ್ಬಳ್ಳಿ - ಉಪ ಚುನಾವಣೆ (By Election) ಮುಗಿದು, ಫಲಿತಾಂಶವೂ ಬಂದು ಹಳೆಯದಾಗುತ್ತಾ ಬಂದಿದ್ದರೂ, ಆರೋಪ - ಪ್ರತ್ಯಾರೋಪಗಳಿಗೆ ಮಾತ್ರ ತೆರೆ ಬಿದ್ದಿಲ್ಲ. ಅದರಲ್ಲಿಯೂ ಹಾನಗಲ್  (Hangal)ಫಲಿತಾಂಶ ಕಾಂಗ್ರೆಸ್ ಗೆ ಹೊಸ ಅಸ್ತ್ರ ಕೊಟ್ಟಿದ್ದರೆ, ಆಡಳಿತಾರೂಢ ಬಿಜೆಪಿಗೆ ಮುಜುಗರಕ್ಕೀಡು ಮಾಡಿದೆ. ಸಿಂದಗಿಯಲ್ಲಿ (Sindagi) ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು, ಅವಸಾನದತ್ತ ಸಾಗಿರೋದ್ರ ಬಗ್ಗೆ ಕಾಂಗ್ರೆಸ್ ಗಮನ ಸರಿಸಲಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಕಾಂಗ್ರೆಸ್ ಗೆ ಕಿವಿ ಮಾತು ಹೇಳಿದ್ದಾರೆ. ಹಾನಗಲ್ ಅಳಿಯ ಅಂತ ಹೇಳಿ ಸೋತದ್ದು ತಾವಲ್ಲ ಎನ್ನೋ ಮೂಲಕ ಸಿಎಂ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಟಾಂಗ್ ಕೊಟ್ಟಿದ್ದಾರೆ.  


ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಬಿಜೆಪಿ ಶಾಸಕರು ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಲವಾರು ಬಿಜೆಪಿ ಮುಖಂಡರು ಕಾಂಗ್ರೆಸ್ ಗೆ ಸೇರೋಕೆ ಸಾಲುಗಟ್ಟಿ ನಿಂತಿದ್ದಾರೆಂಬ ಡಿಕೆಶಿ ಹೇಳಿಕೆಗೆ ಕಿಡಿ ಕಾರಿದ್ದಾರೆ.


ಇದನ್ನೂ ಓದಿ:  Night Curfew;  ನೈಟ್ ಕರ್ಪ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ


ಕಾಂಗ್ರೆಸ್ ದೇಶದಲ್ಲಿ ಯಾವ ಸ್ಥಿತಿಗೆ ತಲುಪಿದೆ ಅನ್ನೋದನ್ನ  ಮೊದಲು ನೋಡಿಕೊಳ್ಳಲಿ. ಸಿಂದಗಿಯಲ್ಲಿ ಬಿಜೆಪಿ ದೊಡ್ಡ ಮಟ್ಟದ ಗೆಲುವು ಸಾಧಿಸಿದೆ. ಅಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿದೆ. ಕಾಂಗ್ರೆಸ್ ಈಗಾಗಲೇ ಭಾರತದಲ್ಲೇ ಹೋಳಾಗುತ್ತಲಿದೆ. ಅದರ ಬಗ್ಗೆ ಅವರು ಗಮನ ಹರಿಸಲಿ ಎಂದು ಡಿಕೆಶಿ ವಿರುದ್ಧ ಬೊಮ್ಮಾಯಿ ಹರಿಹಾಯ್ದರು.


ಪತ್ರಕರ್ತರ ವಿರುದ್ಧವೂ ಸಿಎಂ ಗರಂ..!


ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ವಿರುದ್ಧವೂ ಸಿಎಂ ಬಸವರಾಜ ಬೊಮ್ಮಾಯಿ ಗರಂ ಆದರು. ದೀಪಾವಳಿ ಹಿನ್ನೆಲೆಯಲ್ಲಿ ಕಳೆದ ಎರಡು ದಿಂಗಳಿಂದ ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯವಿದ್ದ ಬೊಮ್ಮಾಯಿ, ಇಂದು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳನ್ನು ಮಾತನಾಡಿಸಲು ಮಾಧ್ಯಮ ಪ್ರತಿನಿಧಿಗಳು ಯತ್ನಿಸಿದ್ದರು. ಎಲ್ಲಿ ಬೇಕಲ್ಲಿ ಇದನ್ನ ರೂಢಿ ಮಾಡಿಕೊಳ್ಳಬೇಡಿ ಎಂದು ಮಾಧ್ಯಮವರಿಗೆ ಸಿಎಂ ಹಿತಪೋದೇಶ ಮಾಡಿದರು. ಹುಬ್ಬಳ್ಳಿ ಪತ್ರಕರ್ತರು ಪ್ರತಿಕ್ರಿಯೆ ನೀಡಲು ಆಹ್ವಾನ ನೀಡಿದ ವೇಳೆ ಸಿಎಂ ಗರಂ ಆದರು.


ಮತದಾರರು ಸಿಎಂ ಕೈ ಹಿಡಿಯಲಿಲ್ಲ


ಹಾನಗಲ್ ಅಳಿಯೂ ಅಂದ್ರೂ ಸಿಎಂ ರನ್ನು ಸೋಲಿಸಿದ್ರು. ಹಾನಗಲ್ ಚುನಾವಣೆ ವೇಳೆ ಈ ಕ್ಷೇತ್ರದ ಅಳಿಯ, ಸಿಎಂ ತವರು ಜಿಲ್ಲೆ ಅಂಥ ಮತದಾರರ ಓಲೈಸಲು ಯತ್ನಿಸಿದ್ದು ನಾವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಬಸವರಾಜ್ ಬೊಮ್ಮಾಯಿಗೆ ಟಾಂಗ್ ಕೊಟ್ಟಿದ್ದಾರೆ. ಸಿಂದಗಿಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ ಅನ್ನೋದನ್ನು ನೋಡಿಕೊಳ್ಳಲಿ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿ, ಬಿಜೆಪಿಯವರು ಜೆಡಿಎಸ್ ಸ್ಥಾನವನ್ನು ಗೆದ್ದಿದ್ದಾರೆ. ನಾವು ಸಿಎಂ ತವರಿನಲ್ಲಿ ಬಿಜೆಪಿ ಸ್ಥಾನವನ್ನು ಗೆದ್ದುಕೊಂಡಿದ್ದೇವೆ.


ಇದನ್ನೂ ಓದಿ:  Siddaramaiah ನಾಲಿಗೆಗೆ ಬೆಲೆ ಇಲ್ಲ, ಮುಂದಿನ ಚುನಾವಣೆಯಲ್ಲಿ ಅವರು ಎಲ್ಲಿಯೇ ಸ್ಪರ್ಧಿಸಿದರೂ ಸೋಲಿಸ್ತೀವಿ: Minister KS Eshwarappa


ಸಿಎಂ ಬೊಮ್ಮಾಯಿ ತಮ್ಮ ತವರು ಜಿಲ್ಲೆ, ಇಲ್ಲಿನ ಅಳಿಯ ಅಂದ್ರು. ಡಜನ್ ಗಟ್ಟಲೆ ಸಚಿವರನ್ನು ಉಸ್ತುವಾರಿಯನ್ನಾಗಿ ಮಾಡಿದರು. ಹಾನಗಲ್ ಅಳಿಯ ಅಂದ್ರೂ ಮತದಾರರು ಮಾತ್ರ ಸಿಎಂ ಕೈ ಹಿಡಿಯಲೇ ಇಲ್ಲ ಎಂದು ಬೊಮ್ಮಾಯಿಗೆ ಡಿಕೆಶಿ ತಿರುಗೇಟು ನೀಡಿದ್ದರು.


ದಿನಸಿ ಬೆಲೆ ಇಳಿಕೆ ಆಗಬೇಕು


ಹಾನಗಲ್ ನಲ್ಲಿ ನಾವು ಗೆದ್ದಿದ್ದೇವೆ, ಮತದಾರರ ಬಗ್ಗೆ ನಂಬಿಕೆ ಇತ್ತು. ಜನರ ಜೇಬಿನ ಪಿಕ್ ಪಾಕೆಟ್ ಬಿದ್ದಿತ್ತು. ಅದಕ್ಕೆ ಈಗ ಜನರೇ ಉತ್ತರ ಕೊಟ್ಟಿದ್ದಾರೆ. ಅಲ್ಲಿನ ಉತ್ತರಕ್ಕೆ ಈಗ ಪ್ರಧಾನಿ ಮತ್ತು ಸಿಎಂ ಪೆಟ್ರೋಲ್, ಡೀಸೆಲ್ ಇಳಿಸಿದ್ದಾರೆ. ಇನ್ನು ಹಲವು ದಿನಸಿಗಳ ಮೇಲೆ ಇಳಿಕೆ ಆಗಬೇಕು.


ನಾನು ದೇವರಿಗೆ ಬೇಡಿಕೊಂಡಿದ್ದೆ, ದೇವತೆಗೆ ಹೇಳಿಕೊಂಡಿದ್ದೆ. ಭಕ್ತನಿಗೂ ದೇವರಿಗೂ ಇರುವ ವ್ಯವಹಾರ ಹೇಳೋಕೆ ಆಗಲ್ಲ. ವೈಯಕ್ತಿಕವಾಗಿ ದೇವರಲ್ಲಿ ಬೇಡಿದ್ದೆ, ವರ ಕೊಟ್ಟಿದ್ದಾಳೆ ನನಗೆ. ದೇಶದಲ್ಲಿ ಕಾಂಗ್ರೆಸ್ ಹೋಳಾಗುತ್ತಿದೆ ಸಿಎಂ ಹೇಳಿಕೆಗೆ ಕಿಡಿ ಕಾರಿದ ಡಿ.ಕೆ.ಶಿ, ಅವರ ಹೇಳಿಕೆಗೆ ಬಹಳ ಸಂತೋಷ. ಈ ಸೀಟ್ ವಿಶೇಷ ಏನೆಂದ್ರೆ ಜನತಾದಳ ಸೀಟ್ ಅವರು ಗೆದ್ದಿದ್ದಾರೆ. ಬಿಜೆಪಿ ಸೀಟ್ ನಾವು ಗೆದ್ದಿದ್ದೇವೆ.  ನಾನು ಇಲ್ಲಿನ ಅಳಿಯ ಅಂತ ಯಾರು ಹೇಳಿದ್ದು. ಎಲ್ಲ ಸಚಿವರನ್ನ ತಂದು ಬಿಟ್ಟುದ್ದು ನಾನಲ್ಲ. ತವರು ಜಿಲ್ಲೆ, ಇಲ್ಲಿನ ಅಳಿಯ ಅಂದ್ರೂ ಜನ ಬೆಂಬಲ ನೀಡಿಲ್ಲ. ಚುನಾವಣೆ ಫಲಿತಾಂಶವೇ ತೈಲ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದರು.


ಬಿಟ್ ಕಾಯಿನ್ ತನಿಖೆಯ ದಾಖಲೆ ಬಿಡುಗಡೆ ಮಾಡಲು ಆಗ್ರಹ


ಬಿಟ್ ಕ್ವಾಯಿನ್ ಪ್ರಕರಣವನ್ನು ಇಡಿ ಗೆ, ಸಿಬಿಐ ಗೆ ಕೊಟ್ಟಿದೀವಿ ಅಂತಾರೆ. ಕೊಟ್ಟಿದ್ದರ ಬಗ್ಗೆ ಸಿಎಂ ದಾಖಲೆ ಬಿಡುಗಡೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿಎಂ ಅವರೇ ಅದರ ಬಗ್ಗೆ ವಿವರಣೆ ಕೊಡಬೇಕು. ನಾನು ಯಾವುದೇ ರಾಜಕಾರಣಿ ಬಗ್ಗೆ ಮಾತಾಡಿಲ್ಲ. ಪ್ರಕರಣವನ್ನು ಌಡಿ ಗೆ ಕೊಟ್ಟಿದ್ದೇವೆ ಅಂತ ಒಂದು ಕಡೆ ಹೇಳ್ತಾರೆ. ಮತ್ತೊಂದು ಕಡೆ ಸಿಬಿಐ ಗೆ ಕೊಟ್ಟಿದ್ದೀವಿ ಅಂತಾರೆ. ಹೀಗಾಗಿ ಪ್ರಕರಣ ತನಿಖೆ ಬಗ್ಗೆ ಸಾರ್ವಜನಿಕವಾಗಿ ಜನರಿಗೆ ಸ್ಪಷ್ಟಪಡಿಸಲಿ.


ನಾವು ಸಹ ಆರ್ ಟಿ ಐ ಮೂಲಕ ಅರ್ಜಿ ಸಲ್ಲಿಸಲಿದ್ದೇವೆ. ಇದರ ಬಗ್ಗೆ ಮಾಹಿತಿ ತಿಳಿಸಿದರೆ ಸಾಕೆಂದು ಡಿಕೆಶಿ ಅಭಿಪ್ರಾಯಪಟ್ಟಿದ್ದಾರೆ.


ಪೆಟ್ರೋಲ್ ಮತ್ತು ಡೀಸೆಲ್ ದರಕ್ಕಿಂತ ತೆರಿಗೆಗಳೇ ಹೆಚ್ಚಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಕಡಿಮೆ ಇದ್ದರೂ ತೆರಿಗೆ ಹೆಚ್ಚು ಹೆಚ್ಚು ಹಾಕಿ ಕೇಂದ್ರ ಸರ್ಕಾರ ಲಾಭ ಗಳಿಸಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸಲ್ ಮೇಲೆ ಪ್ರತಿ ಲೀಟರ್ ಗೆ ಕನಿಷ್ಟ 25 ರೂಪಾಯಿ ದರ ಇಳಿಸಬೇಕು. ಜೊತೆಗೆ ಅಡುಗೆ ಅನಿಲದ ದರವನ್ನು 500 ರೂಪಾಯಿಗೆ ಇಳಿಸಬೇಕೆಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

Published by:Mahmadrafik K
First published: