Karnataka Politics: ನನ್ನನ್ನು ಲೂಟಿ ಅನ್ನೋ ಇವ್ರೇನು ಸತ್ಯಹರಿಶ್ಚಂದ್ರನ ಮಕ್ಕಳಾ? ಸಿಟಿ ರವಿ, ಸಿದ್ದು ನಡುವೆ ಟಾಕ್​ ವಾರ್!

ನನ್ನ ಬಗ್ಗೆ ಲೂಟಿ ಪದ ಬಳಕೆ ಮಾಡುವ ಇವರು ಸತ್ಯಹರಿಶ್ಚಂದ್ರನ ಮಕ್ಕಳಾ? ನನ್ನ ಬಗ್ಗೆ ಮಾತನಾಡುತ್ತಿರುವ ಇವರು ಬೇರೆಯವರ ಬಗ್ಗೆ ಮಾತನಾಡಲಿ ನೋಡೋಣ? ನಾನು ಹೇಳಬೇಕಾಗಿದ್ದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ ಎಂದು ಸಿಟಿ ರವಿ ಕಿಡಿಕಾರಿದ್ರು. 

ಸಿದ್ದರಾಮಯ್ಯ, ಸಿಟಿ ರವಿ

ಸಿದ್ದರಾಮಯ್ಯ, ಸಿಟಿ ರವಿ

  • Share this:
ಬೆಂಗಳೂರು (ಸೆ.12): ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿಟಿ ರವಿ (C.T Ravi) ನಡುವೆ ಮಾತಿನ ಚಕಮಕಿ ನಡೆದಿದೆ. ಸಿ.ಟಿ.ರವಿ– ಲೂಟಿ ರವಿ ಎಂದು ಅವರು ಹೇಳುವುದಾದ್ರೆ  ನಾನು ಸಿದ್ದರಾಮಯ್ಯ ಅವರು ಪೆದ್ದ, ಇಲ್ಲವೇ ಕಚ್ಚೆಹರುಕ ಅನ್ನುವುದರಲ್ಲಿ ತಪ್ಪೇನಿದೆ ಎಂದು ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಕಚ್ಚೆಹರುಕ ಎಂಬ ಪದ ಬಳಕೆಗೆ ಈಗಲೂ ಬದ್ಧನಾಗಿದ್ದೇನೆ. ಈ ವಿಚಾರವನ್ನು ನಾನು ಈಗಾಗಲೇ ಸಾರ್ವಜನಿಕ ಚರ್ಚೆಗೂ (Public Debate) ಬಿಟ್ಟಿದ್ದೇನೆ. ಚರ್ಚೆ ನಡೆಯಲಿ ಬಿಡಿ ಎಂದು ಸಿಟಿ ರವಿ ಹೇಳಿದ್ದಾರೆ. 

ಹೆಚ್ಚಿನ ಮಾಹಿತಿನಿ ಎಚ್​ ವಿಶ್ವನಾಥ್​ ಕೇಳಿ

ಕಚ್ಚೆ ಹರುಕ ಅನ್ನುವ ವಿಚಾರ ನನ್ನ ಮಾತಲ್ಲ. ಬಿಜೆಪಿಯ ಆರೋಪವೂ ಅಲ್ಲ. ಇದು ಮೈಸೂರಿನ ಮಾತು. ಲೋಕಲ್‌ ನ್ಯೂಸ್‌. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ, ಅವರ ಒಂದು ಕಾಲದ ಒಡನಾಡಿ ಎಚ್.ವಿಶ್ವನಾಥ್ ಅವರನ್ನು ಕೇಳಬಹುದು. ಇವರಿಬ್ಬರದೂ ಒಂದೇ ರಕ್ತ. ಹೀಗಾಗಿ ಅವರಲ್ಲಿ ಹೆಚ್ಚಿನ ಮಾಹಿತಿ ಇರುತ್ತದೆ. ಸೂಕ್ತ ಕಾಲ ಬಂದಾಗ ಅವರೇ ಹೇಳಬಹುದು ಎಂದು ರವಿ ಹೇಳಿದರು.

ಇವರೇನು ಸತ್ಯಹರಿಶ್ಚಂದ್ರನ ಮಕ್ಕಳಾ?

ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಪ್ರಾಸಬದ್ಧವಾಗಿ ಸಿಟಿಯನ್ನು ಲೂಟಿ ಎನ್ನುವುದಾದರೆ ಸಿದ್ದುವನ್ನು ಪೆದ್ದು ಅನ್ನಬಹುದಲ್ಲ. ಆದರೆ, ನಮಗೆ ಸಂಸ್ಕೃತಿ ಇದೆ. ಸಾರ್ವಜನಿಕ ಜೀವನದಲ್ಲಿ ಆರೋಪಗಳನ್ನು ಮಾಡುವಾಗ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕು. ನನ್ನ ಬಗ್ಗೆ ಲೂಟಿ ಪದ ಬಳಕೆ ಮಾಡುವ ಇವರು ಸತ್ಯಹರಿಶ್ಚಂದ್ರನ ಮಕ್ಕಳಾ? ನನ್ನ ಬಗ್ಗೆ ಮಾತನಾಡುತ್ತಿರುವ ಇವರು ಬೇರೆಯವರ ಬಗ್ಗೆ ಮಾತನಾಡಲಿ ನೋಡೋಣ? ನಾನು ಹೇಳಬೇಕಾಗಿದ್ದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ ಎಂದು ಸಿಟಿ ರವಿ ಕಿಡಿಕಾರಿದ್ರು.

ಇದನ್ನೂ ಓದಿ: BJP ಕೆಣಕಲು RSS ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಕಾಂಗ್ರೆಸ್​! ಸಂಸದ ತೇಜಸ್ವಿ ಸೂರ್ಯ ಕೆಂಡಾಮಂಡಲ

 ಸಿ ಟಿ ರವಿ ಅಲ್ಲ ಲೂಟಿ ರವಿ

ಚಿಕ್ಕಮಗಳೂರಿನ ಜನರು ಸಿಟಿ ರವಿ ಅವರನ್ನು, ಸಿ ಟಿ ರವಿ ಅಲ್ಲ ಲೂಟಿ ರವಿ ಎಂದು ಕರೆಯುತ್ತಾರೆ ಎಂದು ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿ ಟಿ ರವಿ ಬಗ್ಗೆ ವ್ಯಂಗ್ಯವಾಡಿದ್ದರು. ಜಮಖಂಡಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ಜನರು ಹೀಗೆ ಕರೆಯುತ್ತಾರೆ. ನಾನು ಕರೆಯುತ್ತಿರುವುದಲ್ಲ ಎಂದು ಹೇಳಿದರು.

ಇನ್ನು ಅರ್ಕಾವತಿ, ಸೋಲಾರ್ ಹಗರಣದ ತನಿಖೆ ಬಹಿರಂಗ ಪಡಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮನ್ನು ಹೆದರಿಸುತ್ತೀರಾ.? ಬ್ಲಾಕ್ ಮೇಲ್ ಮಾಡ್ತಿರಾ?, ಇದಕ್ಕೆಲ್ಲ ನಾವು ಹೆದರುವ ಗಿರಾಕಿಗಳಲ್ಲ. 2006 ರಿಂದ ಈವರೆಗಿನ 16 ವರ್ಷದಲ್ಲಿ ಬಿಜೆಪಿ 11 ವರ್ಷ ಆಡಳಿತ ನಡೆಸಿದೆ. ನಾವು ಐದು ವರ್ಷ ಇದ್ದೆವು. ಸಿದ್ದರಾಮಯ್ಯ ಸರ್ಕಾರದ ಹಗರಣ ಎಂದು ಹೇಳುತ್ತಾರೆ. 2006 ರಿಂದ ಎಲ್ಲವನ್ನು ತನಿಖೆ ಮಾಡಿ ಎಂದು ಸಿದ್ದರಾಮಯ್ಯನವರು ಸರ್ಕಾರಕ್ಕೆ ಸವಾಲ್ ಹಾಕಿದರು. ಜೊತೆಗೆ ಇದರ ತನಿಖೆಗೆ ಪ್ರತ್ಯೇಕ ಆಯೋಗ ಮಾಡಲಿ. 2006 ರಿಂದ 2023 ರ ವರೆಗೂ ಯಾರ ಕಾಲದಲ್ಲಿ ಏನಾಗಿದೆಯೋ ಎಲ್ಲವನ್ನೂ ತನಿಖೆ ಮಾಡಲಿ ಎಂದು ಹೇಳಿದ್ದರು.

ಇದನ್ನೂ ಓದಿ: H D Kumaraswamy: ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ಅತಿದೊಡ್ಡ ಹಗರಣ ಬಯಲಿಗೆಳೆಯುವೆ; ಎಚ್​ಡಿಕೆ ಹೊಸ ಬಾಂಬ್​

ಸಿಟಿ ರವಿ ಸಿದ್ದು ಕ್ಷಮೆ ಕೇಳಲಿ

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ ಟಿ ರವಿ ಅವಾಚ್ಯ ಶಬ್ದ ಬಳಕೆ ಮಾಡಿದ್ದರೆ ಜನ ಅದನ್ನು ಸಹಿಸಲ್ಲ. ಈ ಬಗ್ಗೆ ಸಿ ಟಿ ರವಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಎಂ ಬಿ ಪಾಟೀಲ್ ಆಗ್ರಹಿಸಿದರು.
Published by:ಪಾವನ ಎಚ್ ಎಸ್
First published: