JDS ಬೆಂಬಲ ಇಲ್ಲದಿದ್ದರೆ ಡಿಕೆಶಿ ಸೋದರ ಡಿಕೆ ಸುರೇಶ್ ಸಹ ಗೆಲ್ಲುತ್ತಿರಲಿಲ್ಲ: CT Ravi ತಿರುಗೇಟು

CT Ravi v/s DK Shivakumar: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಗೆದ್ದಿರುವುದೇ ಒಂದು ಕ್ಷೇತ್ರ. ಅದರಲ್ಲೂ ಜೆಡಿಎಸ್​ ಬೆಂಬಲ ಇಲ್ಲದಿದ್ದರೆ ಡಿಕೆ ಶಿವಕುಮಾರ್​​ ಸೋದರ ಡಿಕೆ ಸುರೇಶ್​ ಸಹ ಸಂಸದರಾಗಿ ಗೆಲ್ಲುತ್ತಿರಲಿಲ್ಲ ಎಂದು ಸಿಟಿ ರವಿ ತಿರುಗೇಟು ನೀಡಿದರು.

ಡಿಕೆ ಶಿವಕುಮಾರ್​, ಸಿಟಿ ರವಿ

ಡಿಕೆ ಶಿವಕುಮಾರ್​, ಸಿಟಿ ರವಿ

 • Share this:
  ಚಿಕ್ಕಮಗಳೂರು: ಬಿಜೆಪಿ (BJP) ರಾಜ್ಯದಲ್ಲಿ ವೀಕ್ ಆಗಿದೆ, ಹೀಗಾಗಿಯೇ ಪರಿಷತ್​ ಚುನಾವಣೆಯಲ್ಲಿ (MLC Election)  ಜೆಡಿಎಸ್ (JDS) ಬೆಂಬಲ ಪಡೆಯುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ತಿರುಗೇಟು ನೀಡಿದರು. ಜೆಡಿಎಸ್ ಬೆಂಬಲ ಇಲ್ಲದಿದ್ದರೆ ಡಿಕೆಶಿ ಸಹೋದರ ಡಿಕೆ ಸುರೇಶ್ (DK Suresh) ಲೋಕಸಭಾ ಚುನಾವಣೆಯಲ್ಲಿ​​​ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು. ಡಿಕೆಶಿ ಕೂಡ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಳ್ಳದಿದ್ದರೆ ಶಾಸಕರಾಗುತಿರಲಿಲ್ಲ ಎಂದು ಶಿವಕುಮಾರ್ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದರು. ಜೆಡಿಎಸ್ ಜೊತೆ ಸ್ವಲ್ಪ ಓಟ್ ಇದೆ, ನಾವು ಕೇಳಿದ್ದೇವೆ. ಆದರೆ ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.

  ಕುಮಾರಸ್ವಾಮಿಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಯಾರು?

  ವಾಗ್ದಾಳಿ ಮುಂದುವರೆಸಿದ ಸಿಟಿ ರವಿ ಅವರು,  ಕುಮಾರಸ್ವಾಮಿಯವರನ್ನು ಸಿಎಂ ಮಾಡಿ ಕೊನೆಗೆ ಅವರನ್ನ ಇಳಿಸಿದ್ದು ಯಾರು? ಇಳಿಸಲು ಅವರ ಪಕ್ಷದ ಶಾಸಕರನ್ನು ಕಳುಹಿಸಿದ್ದು ಯಾರು? ಕೂರಿಸಿದ್ದು ಅವರೇ, ಕಾಲು ಎಳೆಯುವ ಕೆಲಸ ಮಾಡಿದ್ದು ಅವರೇ. ನಮ್ದು ಜೆಡಿಎಸ್ ಜೊತೆ ಒಪ್ಪಂದ ಇಲ್ಲ, ಜನರ ಜೊತೆ ಸಂಬಂಧ ಅಷ್ಟೇ ಎಂದರು.

  ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಮೈಸೂರು ಗೂಳಿ-ಕನಕಪುರ ಗೂಳಿ ಮಧ್ಯೆ ಕಾಳಗ ನಡೆಯುತ್ತಿದೆ: ಶ್ರೀರಾಮುಲು ಮಾತಿನೇಟು!

  ಪಾಕ್​​ನಲ್ಲಿ ಸಿದ್ದರಾಮಯ್ಯ ಹೆಸರು ಹೇಳಬಹುದು ಅಷ್ಟೇ

  ಪ್ರಧಾನಿ ಮೋದಿಯನ್ನು ಟೀಕಿಸುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧನೂ ಸಿಟಿ ರವಿ ಕಿಡಿಕಾರಿದರು.   ಭಾರತದ ಪ್ರಧಾನಿ ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕಾ ಎಲ್ಲಿಗೆ ಹೋದ್ರು ಮೋದಿ...ಮೋದಿ... ಅಂತಾರೆ. ಸಿದ್ದರಾಮಯ್ಯನವರ ಹೆಸರನ್ನ ಪಾಕಿಸ್ತಾನದಲ್ಲಿ ಯಾರಾದರೂ ಹೇಳಬಹುದು ಅಷ್ಟೇ. ಬಾವಿಯೊಳಗಿರೋ ಕಪ್ಪೆ ಬಾವಿಯನ್ನೇ ಪ್ರಪಂಚ ಎಂದು ಭಾವಿಸುತ್ತೆ, ಅವರು ಬಾವಿಯಲ್ಲಿರುವ ಕಪ್ಪೆ ಅಲ್ಲ. ಸಿದ್ದರಾಮಯ್ಯನವರೇ, ಇಂಗ್ಲೆಂಡಿನ ಅಧ್ಯಕ್ಷ ಬೋರಿಸ್ ಜಾನ್ಸನ್ ಅವರ ಮಾತನ್ನ ಕೇಳಿಸಿಕೊಳ್ಳಿ . ಒನ್ ಸನ್, ಒನ್ ಗ್ರೀಕ್, ಒನ್ ವಲ್ಡ್ ಓನ್ಲಿ ಒನ್ ನರೇಂದ್ರ ಮೋದಿ ಎಂದಿದ್ದಾರೆ.

  ಕರ್ನಾಟಕದಿಂದ ಆಚೆ ಸಿದ್ದರಾಮಯ್ಯ ಹೆಸರೇಳುತ್ತಾರಾ?

  ಇಸೇಲ್ ಅಧ್ಯಕ್ಷ ನಮ್ಮ ದೇಶದಲ್ಲಿ ನನಗಿಂತ ಪಾಪುಲರ್ ಯಾರಾದ್ರು ಇದ್ರೆ ಅದು ಮೋದಿ ಎಂದಿದ್ದಾರೆ. ದೇಶದಲ್ಲಿ ಎಲ್ಲಿ ಹೋದ್ರು ಮೋದಿ...ಮೋದಿ...ಮೋದಿ... ಅಂತಾರೆ. ಕರ್ನಾಟಕದಿಂದ ಆಚೆ ಸಿದ್ದರಾಮಯ್ಯ ಹೆಸರೇಳುತ್ತಾರಾ? ರಾಹುಲ್ ಗಾಂಧಿ ಹೆಸರನ್ನೇ ಯಾರೂ ಹೇಳುವುದಿಲ್ಲ. ಯದ್ಬಾವಂ ತದ್ಬವತಿ ಎಂದು ಶ್ಲೋಕವಿದೆ. ನಾನಿದ್ದಂತೆ ಉಳಿದವರನ್ನ ಭಾವಿಸೋದು ಎಂದರ್ಥ. ಅವರು ಹಾಗೇ ಇದ್ದಾರೆ, ಅದಕ್ಕೆ ಎಲ್ಲರೂ ಹಾಗೇ ಕಾಣುತ್ತಾರೆ. ನರೇಂದ್ರ ಮೋದಿ ಓರ್ವ ಅಗ್ರಗಣ್ಯ ನಾಯಕ, ಇವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ ಎಂದು ಮೋದಿ ಅವರನ್ನು ಸಮರ್ಥಿಸಿಕೊಂಡರು.

  ಇದನ್ನೂ ಓದಿ: ಜಾತ್ಯಾತೀತ ಅಂತ ಹೇಳಿಕೊಂಡು ಕೋಮುವಾದಿಗಳ ಜೊತೆ ಕೈಜೋಡಿಸಿದ್ದಾರೆ: BJP- JDS ಮೈತ್ರಿಗೆ ಸಿದ್ದರಾಮಯ್ಯ ವ್ಯಂಗ್ಯ

  ಸಿದ್ದರಾಮಯ್ಯಗೆ ಎಚ್​ಡಿಕೆ ತಿರುಗೇಟು

  ಇನ್ನು ನಿನ್ನೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ಜೆಡಿಎಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯನವರ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ,ಕುಮಾರಸ್ವಾಮಿ  ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ. ಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತ, ಟರ್ಮಿನೇಟರ್‌, ಸಿದ್ದಕಲೆಯ ನಿಪುಣಾಗ್ರೇಸರು ಈಗ ʼJDFʼ ಎಂಬ ಹೊಸ ಜಪ ಮಾಡಿಕೊಂಡು ತಮ್ಮ ಜಾತ್ಯತೀತ ತತ್ವಾದರ್ಶಗಳಿಗೆ ಮಂಡ್ಯದಲ್ಲಿ ಎಳ್ಳೂನೀರು ಬಿಟ್ಟಿದ್ದಾರೆ. ಸಹಕಾರ ಸಚಿವರ ಸಹಾಯಕನನ್ನು ಗೆಲ್ಲಿಸಿಕೊಳ್ಳಲು ʼಜಾತಿ ಸಹಕಾರʼಕ್ಕೆ ಮೊರೆ ಹೋಗಿದ್ದಾರೆ. ಅಯ್ಯೋ, ಎಂಥಾ ದುರ್ವಿಧಿ ಎಂದು ವ್ಯಂಗ್ಯವಾಡಿದ್ದಾರೆ. ಮತಫಸಲಿಗಾಗಿ ಜಾತಿ ರಾಜಕೀಯ ಮಾಡುತ್ತಿರುವ ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ. ಸಮುದಾಯದ ಅಧ್ಯಕ್ಷರೊಬ್ಬರು, ನೀವು ಮತ ಹಾಕುವುದು ಕಾಂಗ್ರೆಸ್‌ ಪಕ್ಷಕ್ಕಲ್ಲ, ನಮ್ಮ ಸಮುದಾಯದ ಸಿದ್ದಕಲಾಕೋವಿದನಿಗೆ ಎಂದು ಮನೆಮನೆಗೂ ಹೋಗಿ ಪ್ರಚಾರ ಮಾಡುತ್ತಿರುವುದು ಮಂಡ್ಯದಲ್ಲಿ ಮಜಭೂತಾಗಿ ನಡೆಯುತ್ತಿದೆ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
  Published by:Kavya V
  First published: