• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Ramanagara Politics: ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ವೇದಿಕೆಯಲ್ಲಿಯೇ ಗರಂ ಆದ ಅನಿತಾ ಕುಮಾರಸ್ವಾಮಿ

Ramanagara Politics: ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ವೇದಿಕೆಯಲ್ಲಿಯೇ ಗರಂ ಆದ ಅನಿತಾ ಕುಮಾರಸ್ವಾಮಿ

ಅನಿತಾ ಕುಮಾರಸ್ವಾಮಿ ಮತ್ತು ಅಶ್ವತ್ಥ್ ನಾರಾಯಣ್

ಅನಿತಾ ಕುಮಾರಸ್ವಾಮಿ ಮತ್ತು ಅಶ್ವತ್ಥ್ ನಾರಾಯಣ್

ಇದು ಶಿಷ್ಟಾಚಾರ ಮಾತ್ರವಲ್ಲ, ಶಾಸಕರ ಹಕ್ಕು ಕೂಡ. ಆದರೆ, ಸಚಿವರು ನನ್ನ ಹಕ್ಕನ್ನು ಕಸಿದುಕೊಂಡಿದ್ದಾರೆ. ಇದು ಅನ್ಯಾಯದ ಪರಮಾವಧಿ. ಬಿಜೆಪಿ ಸರಕಾರದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಗೌರವ ಈ ರೀತಿಯದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.

 • News18 Kannada
 • 4-MIN READ
 • Last Updated :
 • Ramanagara, India
 • Share this:

ರಾಮನಗರ: ಮಂಡ್ಯ, ಹಾಸನದಂತೆ ರಾಮನಗರ (Ramanagar) ಕೂಡ ಈ ಬಾರಿಯ ಎಲೆಕ್ಷನ್‌ನಲ್ಲಿ ಹವಾ ಸೃಷ್ಟಿಸಿರುವ ಕ್ಷೇತ್ರ. ಇಲ್ಲಿಯವರೆಗೆ ಜೆಡಿಎಸ್‌ ವರ್ಸಸ್‌ ಕಾಂಗ್ರೆಸ್ (JDS Vs Congress) ನಡುವೆ ನಡೆಯುತ್ತಿದ್ದ ಕದನಕ್ಕೆ ಕಳೆದ ವರ್ಷದಿಂದ ಬಿಜೆಪಿ (BJP) ಕೂಡ ಸೇರ್ಪಡೆಗೊಂಡಿದೆ. ಡಿಕೆ ಬ್ರದರ್ಸ್ (DK Brothers) ವಿರುದ್ಧ ಗಂಡಸ್ತನದ ಸವಾಲು ಹಾಕಿದ್ದ ಸಚಿವ ಅಶ್ವತ್ಥ್‌ ನಾರಾಯಣ (Minister Ashwath Narayan) ವಿರುದ್ಧ ಜೆಡಿಎಸ್‌ ಶಾಸಕಿ ಅನಿತಾ ಕುಮಾರಸ್ವಾಮಿ (JDS MLA Anitha Kumaraswamy) ಕೆಂಡಾಮಂಡಲ ಆಗಿದ್ದಾರೆ. ರಾಮನಗರ ಅಭಿವೃದ್ಧಿ ವಿಚಾರವಾಗಿ ಜೆಡಿಎಸ್ ಹಾಗೂ ಬಿಜೆಪಿ (JDS Vs BJP) ನಡುವಿನ ತಿಕ್ಕಾಟ ಜೋರಾಗಿತ್ತು. ಹಾರೋಹಳ್ಳಿ (Harohalli) ನೂತನ ತಾಲೂಕು ಕೇಂದ್ರದ ಉದ್ಘಾಟನಾ ಸಮಾರಂಭ ಇತ್ತು. ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ 1,800 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಬಗ್ಗೆ ವೇದಿಕೆಯಲ್ಲೇ ಶಾಸಕಿ ಅನಿತಾ ಕುಮಾರಸ್ವಾಮಿ ಕೆರಳಿದ್ರು. ಸಚಿವರ ಭಾಷಣಕ್ಕೆ ವೇದಿಕೆ ಮೇಲೆಯೇ ಅನಿತಾ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.


ಸಚಿವ ಅಶ್ವತ್ಥ ನಾರಾಯಣ ಭಾಷಣ ಮಾಡಿ ಎದ್ದು ಹೊರಟು ಹೋದ್ರು. ಅನಿತಾ ಭಾಷಣ ಕೇಳೋದಕ್ಕೆ ಇರಲಿಲ್ಲ. ಆಮೇಲೆ ಸಿಟ್ಟಿಗೆದ್ದ ಅನಿತಾ ಕುಮಾರಸ್ವಾಮಿ, ಮಲ್ಲೇಶ್ವರಂಗೆ ಹೋಗಿ ಬುರುಡೆ ಬಿಡಿ ಅಂತಾ ಸಚಿವರಿಗೆ ಟಾಂಗ್‌ ಕೊಟ್ಟರು.


ಈಗ ಬಂದು ನಮ್ಮ ಯೋಜನೆ ಅಂತಾರೆ


540 ಕೋಟಿ ಸತ್ಯಗಾಲದಿಂದ ನೀರು ಪಂಪ್ ಯೋಜನೆಯನ್ನು ತಂದಿರೋದು ಕುಮಾರಸ್ವಾಮಿಯವರು. ಈ ನೀರನ್ನು ಕುಡಿಯಲು ಮತ್ತು ಕೃಷಿಗೂ ಬಳಸಬಹುದಾಗಿದೆ. ಈ ಯೋಜನೆಯ ಶೇ.70 ರಿಂದ 80ರಷ್ಟು ಕೆಲಸ ಆಗಿದೆ. ಈಗ ಬಂದು ಆ ಯೋಜನೆ ನನ್ನದು ಎಂದು ಹೇಳುತ್ತಾರೆ ಅಂದ್ರೆ ಅವರ ಬಗ್ಗೆ ಏನು ಮಾತನಾಡಬೇಕು ಎಂದು ಕಿಡಿಕಾರಿದರು.


ಕುಮಾರಸ್ವಾಮಿ ಇದ್ದಿದ್ರೆ ಮಾತಾಡ್ತಾ ಇರಲಿಲ್ಲ


ಈ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಅವರು ಬರಬೇಕಿತ್ತು. ಒಂದು ದಿನ ಮುಂಚೆಯೇ ಕಾರ್ಯಕ್ರಮಕ್ಕೆ ಬನ್ನಿ ಅಂತ ಮನವಿ ಮಾಡಿಕೊಂಡಿದ್ದೆ. ಆದ್ರೆ ದಾವಣಗೆರೆಯಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದರಿಂದ ಇಲ್ಲಿಗೆ ಬರಲಿಲ್ಲ. ಒಂದು ವೇಳೆ ಕುಮಾರಸ್ವಾಮಿ ಅವರು ಇಲ್ಲಿಗೆ ಬಂದಿದ್ರೆ ಯಾರೂ ಮಾತನಾಡುತ್ತಿರಲಿಲ್ಲ ಎಂದು ಅಶ್ವತ್ಥ್ ನಾರಾಯಣ್ ವಿರುದ್ಧ ವಾಗ್ದಾಳಿ ನಡೆಸಿದರು.


ಸತ್ಯ ಜನರಿಗೆ ಗೊತ್ತು


ಸತ್ಯ ಏನು ಅನ್ನೋದು ಜನತೆಗೆ ಗೊತ್ತಿದೆ. ಈ ಕಾರ್ಯಕ್ರಮದಲ್ಲಿ ಹೀಗೆಲ್ಲಾ ಆಗುತ್ತೆ ಅಂತ ಅಂದಾಜಿಸಿದ್ದೆ. ಆದ್ದರಿಂದಲೇ ಕುಮಾರಸ್ವಾಮಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೆ. ಆದ್ರೆ ಒಂದು ತಿಂಗಳ  ಮುಂಚೆಯೇ ಅವರ ಕಾರ್ಯಕ್ರಮ ನಿಗದಿಯಾಗಿದ್ದರಿಂದ ಇಲ್ಲಿಗೆ ಬರಲಿಲ್ಲ ಎಂದು ಹೇಳಿದರು.


ಜೆಡಿಎಸ್ ಕಾರ್ಯಕರ್ತರ ಆಕ್ರೋಶ


ಇನ್ನು ಅನಿತಾ ಕುಮಾರಸ್ವಾಮಿ ಬರುವ ಮೊದಲೇ ಕಾರ್ಯಕ್ರಮ ಉದ್ಘಾಟನೆ ಮಾಡಲಾಗಿತ್ತು. ತಾಲೂಕು ಕೇಂದ್ರದ ಶಿಲಾನ್ಯಾಸದಲ್ಲೂ ಕುಮಾರಸ್ವಾಮಿ ಅವರ ಹೆಸರನ್ನ ಸಣ್ಣದಾಗಿ ಹಾಕಲಾಗಿತ್ತು. ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಗೌತಮ್ ಗೌಡ ಹೆಸರನ್ನ ದಪ್ಪಕ್ಷರಗಳಿಂದ ಹಾಕಿದ್ದರಿಂದ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.


ಸಚಿವ ಅಶ್ವತ್ಥ ನಾರಾಯಣ ಸ್ಥಳೀಯ ಶಾಸಕರು, ಸಂಸದರನ್ನ ಸೈಡಿಗಿಟ್ಟು ಒಬ್ಬರೇ ಕಾರ್ಯಕ್ರಮ ಉದ್ಘಾಟಿಸಿದ್ರು. ಇದಕ್ಕೆ ಡಿ.ಕೆ.ಸುರೇಶ್​​​ ಮತ್ತು ಅಶ್ವತ್ಥ ನಾರಾಯಣ ಮಧ್ಯೆನೂ ವಾಕ್ಸಮರ ನಡೆಯಿತು.
ಸಾಲು ಸಾಲು ಟ್ವೀಟ್


ಇನ್ನು ಇಷ್ಟಕ್ಕೆ ಸುಮ್ಮನಾಗದ ಅನಿತಾ ಕುಮಾರಸ್ವಾಮಿ ಟ್ವಿಟ್ಟರ್​​ನಲ್ಲಿಯೂ ಹಾರೋಹಳ್ಳಿ ನೂತನ ತಾಲೂಕು ಉದ್ಘಾಟನೆ ಕಾರ್ಯಕ್ರಮದಲ್ಲಿ ನಡೆದ ಘಟನೆಯನ್ನು ಹೇಳಿ, ಅಶ್ವತ್ಥ್ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ರಾಮನಗರ ವಿಧಾನಸಭೆ ಕ್ಷೇತ್ರದ ಹಾರೋಹಳ್ಳಿ ತಾಲೂಕು ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಲಾಯಿತು. ಜನತೆಯ ಆಶೋತ್ತರಗಳಿಗೆ ಧಕ್ಕೆ ಆಗದಂತೆ ಕರ್ತವ್ಯ ನಿರ್ವಹಿಸಿದ ಸಂತೋಷ ನನ್ನದು. ಹಾರೋಹಳ್ಳಿ ತಾಲೂಕು ರಚನೆ ಹಾಗೂ ಈ ಹೊಸ ತಾಲೂಕು ಕೇಂದ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಾನು ಕೈಗೊಂಡ ಕ್ರಮಗಳು, ಸರಕಾರದಿಂದ ತರಲಾದ ಅನುದಾನದ ಬಗ್ಗೆ ಹಾಗೂ ಈವರೆಗೆ ಆಗಿರುವ ಕೆಲಸಗಳ ಬಗ್ಗೆ ಜನತೆಗೆ ವಿವರವಾಗಿ ತಿಳಿಸಲಾಯಿತು.


ಇದನ್ನೂ ಓದಿ:  D Roopa Audio Viral: ವರ್ಗಾವಣೆ ಬಳಿಕ ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಸ್ಪೋಟಕ ಆಡಿಯೋ ವೈರಲ್


ಶಾಸಕಿಯನ್ನು ಅಪಮಾನಿಸುವುದು ಎಷ್ಟು ಸರಿ?


ಹಾರೋಹಳ್ಳಿ ತಾಲೂಕು ಕಚೇರಿ ಲೋಕಾರ್ಪಣೆಗೊಳಿಸುವ ವಿಷಯದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ತೋರಿದ ಆತುರ ನನಗೆ ಅತೀವ ಅಚ್ಚರಿ ಉಂಟು ಮಾಡಿದೆ. ಕ್ಷುಲ್ಲಕ ರಾಜಕೀಯಕ್ಕಾಗಿ ಶಿಷ್ಟಾಚಾರ ಹತ್ತಿಕ್ಕಿ, ಓರ್ವ ಶಾಸಕಿಯನ್ನು ಅಪಮಾನಿಸುವುದು ಎಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ ಎಂದು ಕೇಳಿದ್ದಾರೆ.
ಉಸ್ತುವಾರಿ ಸಚಿವರಿಗೆ  ಗೊತ್ತಿಲ್ಲವೆ?


ಹಾರೋಹಳ್ಳಿ ತಾಲೂಕು ಕೇಂದ್ರ ರಚನೆಗೆ ಕಾರಣಕರ್ತರು ಯಾರೆನ್ನುವುದು ಜನತೆಗೆ ಗೊತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಒತ್ತಾಸೆ, ನನ್ನ ಬದ್ಧತೆಯ ಕುರುಹಾಗಿ ಹಾರೋಹಳ್ಳಿ ತಾಲೂಕು ಕೇಂದ್ರವಾಗಿದೆ. ಶ್ರೀ ಕುಮಾರಸ್ವಾಮಿ ಅವರೇ ಹಾರೋಹಳ್ಳಿ ತಾಲೂಕು ಕೇಂದ್ರ ಘೋಷಣೆ ಮಾಡಿದ್ದು. ಉಸ್ತುವಾರಿ ಸಚಿವರಿಗೆ  ಗೊತ್ತಿಲ್ಲವೆ ಎಂದು ಅನಿತಾ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.


ಈ ತಾಲೂಕು ಕೇಂದ್ರದ ಅಭಿವೃದ್ಧಿಗೆ ನಾನು ಸಾಕಷ್ಟು ಅನುದಾನ ತಂದಿದ್ದೇನೆ. ನಾನು, ಶ್ರೀ ಕುಮಾರಸ್ವಾಮಿ ಅವರು ರಾಜಕೀಯ ಬದಿಗಿಟ್ಟು ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಆದರೆ, ಪ್ರತಿ ಸಣ್ಣ ವಿಷಯದಲ್ಲಿಯೂ ರಾಜಕೀಯ ಹುಡುಕುವ ಉಸ್ತುವಾರಿ ಸಚಿವರಿಗೆ, ಶಾಸಕರು ಕೂಡ ಉತ್ತರದಾಯಿ ಎನ್ನುವ ಸಾಮಾನ್ಯ ಜ್ಞಾನ ಇಲ್ಲದಾಯಿತಲ್ಲಕ್ಷೇತ್ರದಲ್ಲಿ ಯಾವುದೇ ಸರಕಾರಿ ಕಾರ್ಯಕ್ರಮ ನಡೆದರೂ ಅದರ ಅಧ್ಯಕ್ಷತೆ ಆಯಾ ಕ್ಷೇತ್ರದ ಶಾಸಕರೇ ವಹಿಸಬೇಕು. ಇದು ಶಿಷ್ಟಾಚಾರ ಮಾತ್ರವಲ್ಲ, ಶಾಸಕರ ಹಕ್ಕು ಕೂಡ. ಆದರೆ, ಸಚಿವರು ನನ್ನ ಹಕ್ಕನ್ನು ಕಸಿದುಕೊಂಡಿದ್ದಾರೆ. ಇದು ಅನ್ಯಾಯದ ಪರಮಾವಧಿ. ಬಿಜೆಪಿ ಸರಕಾರದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಗೌರವ ಈ ರೀತಿಯದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.


ಮಾನ್ಯ ಸಚಿವರಿಗೆ ಹಾರೋಹಳ್ಳಿ ತಾಲೂಕು ಕೇಂದ್ರದ ಅಭಿವೃದ್ಧಿಗೆ ನಾನು ಮತ್ತು ಶ್ರೀ ಕುಮಾರಸ್ವಾಮಿ ಅವರು ನಡೆಸಿರುವ ಪ್ರಯತ್ನಗಳು, ತಂದ ಅನುದಾನದ ಬಗ್ಗೆ ಮಾಹಿತಿ ಇಲ್ಲದಿದ್ದರೆ ಮೊದಲು ದಾಖಲೆಗಳನ್ನು ಪರಿಶೀಲನೆ ಮಾಡಲಿ, ಅದಕ್ಕೂ ಸಮಯ ಇಲ್ಲ ಎಂದಾದರೆ ಅವರ ಸಂಪುಟ ಸಹೋದ್ಯೋಗಿ, ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್ ಅವರನ್ನು ಸಂಪರ್ಕ ಮಾಡಲಿ


ಮಹಿಳಾ ಶಾಸಕರನ್ನು ಅಪಮಾನಿಸುವುದಾ?


ಜನರ ಸಂಕಷ್ಟಗಳ ಪರಿಹಾರ, ಅಭಿವೃದ್ಧಿ ವಿಷಯದಲ್ಲಿ ನಾನಾಗಲಿ, ಶ್ರೀ ಕುಮಾರಸ್ವಾಮಿ ಅವರಾಗಲಿ ಕ್ಷುಲ್ಲಕ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. ಅಂತಹ ರಾಜಕೀಯದಲ್ಲಿ ನಿಪುಣರಾಗಿರುವ ಬಿಜೆಪಿಗರಿಗೆ ಶಿಷ್ಟಾಚಾರ ಎನ್ನುವುದು ಗೊತ್ತಿರಲು ಹೇಗೆ ಸಾಧ್ಯ? ಉನ್ನತ ಶಿಕ್ಷಣ ಸಚಿವರ ಉನ್ನತ ಮೌಲ್ಯ ಎಂದರೆ, ಮಹಿಳಾ ಶಾಸಕರನ್ನು ಅಪಮಾನಿಸುವುದಾ?ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಇದಕ್ಕೆ ಉತ್ತರ ನೀಡಬೇಕು ಹಾಗೂ ಓರ್ವ ಶಾಸಕಿಗೆ ಅಪಮಾನಿಸಿದ ಸಚಿವರ ನಡೆಯನ್ನು ಖಂಡಿಸಬೇಕು. ಈ ಬಗ್ಗೆ ನನಗೆ ಬಹಳ ನೋವಾಗಿದೆ. ಮಾನ್ಯ ಸಭಾಧ್ಯಕ್ಷರು ಹಾಗೂ ಹಕ್ಕು ಭಾದ್ಯತಾ ಸಮಿತಿಯ ಅಧ್ಯಕ್ಷರಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

Published by:Mahmadrafik K
First published: