ಸ್ಯಾಂಡಲ್​ವುಡ್​ನಲ್ಲಿ ಮಿಂಚಬೇಕಿದ್ದ ಯುವ ಕಲಾವಿದ ರಸ್ತೆ ಅಪಘಾತದಲ್ಲಿ ದುರ್ಮರಣ

news18
Updated:August 15, 2018, 5:59 PM IST
ಸ್ಯಾಂಡಲ್​ವುಡ್​ನಲ್ಲಿ ಮಿಂಚಬೇಕಿದ್ದ ಯುವ ಕಲಾವಿದ ರಸ್ತೆ ಅಪಘಾತದಲ್ಲಿ ದುರ್ಮರಣ
news18
Updated: August 15, 2018, 5:59 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಆ.15) : ಯುವ ನಟ ನಿರ್ದೇಶಕ ಹೇಮಂತ್​ ಕುಮಾರ್(25) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವಿಕಲಚೇತನರಾಗಿದ್ದ ಹೇಮಂತ್ ಕಿರುತೆರೆಯ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ತನ್ನದೆಯಾದ ಕೆಲ ಕಿರು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಬಯಸಿದ್ದ ಹೇಮಂತ್ ಇಂದು(ಆ.15) ನೆಲಮಂಗಲದ ಬಳಿ ಅಪಘಾತಕ್ಕೀಡಾಗಿದ್ದರು. ರಾಷ್ಟ್ರೀಯ ಹೆದ್ದಾರಿಯ ವಿಭಜಗಕ್ಕೆ  ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವಿಗೀಡಾಗಿದ್ದಾರೆ.ಹೇಮಂತ್ ಅವರ ಸಾಹಸಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ದುನಿಯಾ ವಿಜಯ್ ಮೆಚ್ಚುಗೆ ಸೂಚಿಸಿದ್ದರು. ಕೈಗಳು ಇಲ್ಲದಿದ್ದರೂ ಕಾಲುಗಳ ಸಹಾಯದಿಂದ ಬೈಕ್ ಚಲಾಯಿಸುತ್ತಿದ್ದ ಹೇಮಂತ್ ಅನೇಕ ಸಾಧನೆಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. 'ಹೈಕ' ಎಂಬ ಕಿರುಚಿತ್ರಕ್ಕೂ ಧ್ವನಿ ನೀಡಿದ ಉದಯೋನ್ಮುಖ ಕಲಾವಿದ ಗ್ರಾಮೀಣ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ