Kalyana Karnataka: ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಉತ್ಸವಕ್ಕೆ ಆಗಮಿಸಿದ್ದ ಸಿಎಂಗೆ ಕಪ್ಪುಪಟ್ಟಿ ಪ್ರದರ್ಶನ

ಬೀದರ್ ಟೂ ಬಳ್ಳಾರಿಗೆ ಎಕ್ಸ್‌ಪ್ರೆಸ್‌ ವೇ ಹೆದ್ದಾರಿ ಕಲಬುರಗಿ-ಯಾದಗಿರಿ ಮೂಲಕ ಹಾದು ಹೋಗಲಿದೆ. ಈ ಎಕ್ಸ್‌ಪ್ರೆಸ್‌ ವೇ ನಿಂದ ಬೆಂಗಳೂರಿಗೆ ಮತ್ತಷ್ಟು ಬೇಗ ತಲುಪಬಹುದು. ರಾಯಚೂರು/ಕೊಪ್ಪಳದಲ್ಲಿ ಏರ್‌ಪೋರ್ಟ್​‌ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬಹಳ ಸರ್ಕಾರಗಳು ಕಂಡಿದ್ದ ಕನಸ್ಸನ್ನ ನಾವು ನನಸ್ಸು ಮಾಡುತ್ತಿದ್ದೇವೆ ಎಂದು ಹೇಳಿದರು.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಉತ್ಸವ (Kalyana Karnataka Utsava) ಹಿನ್ನೆಲೆ ಕಲಬುರಗಿ (Kalaburagi) ನಗರಕ್ಕೆ ಆಗಮಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರಿಗೆ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ತಳವಾರ ಸಮುದಾಯದ (Talawara Community) ಕೆಲ ಜನರು ಕಪ್ಪು ಬಟ್ಟೆ (Black cloth) ಪ್ರದರ್ಶಿಸಿದರು. ತಳವಾರ ಸಮುದಾಯಕ್ಕೆ ಎಸ್​​ಟಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ತಳವಾರ ಸಮುದಾಯ ಹೋರಾಟ ನಡೆಸುತ್ತಿದೆ. ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಸಿಎಂಗೆ ಕಪ್ಪುಪಟ್ಟಿ‌ ಪ್ರದರ್ಶನ ಮಾಡಲಾಗಿದೆ ಎಂದು ಹೋರಾಟಗಾರರು ಹೇಳಿಕೆ ನೀಡಿದ್ದಾರೆ. ಕಪ್ಪು ಪಟ್ಟಿ ಪ್ರದರ್ಶನಕ್ಕೆ ಸಂಬಂಧಿಸಿದ್ದಂತೆ ಪೊಲೀಸರು 25 ಕ್ಕೂ ಅಧಿಕ ಜನರನ್ನು (Arrest) ಬಂಧಿಸಿದ್ದಾರೆ.

ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಕಲಬುರಗಿ ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ಬಳಿಕ ವಿವಿಧ ಪೊಲೀಸ್ ತುಕಡಿಗಳಿಂದ ಮುಖ್ಯಮಂತ್ರಿಗಳಿಗೆ ಗೌರವ ವಂದನೆ ಸಲ್ಲಿಸಲಾಯ್ತು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧ

ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಬಜೆಟ್‌ನಲ್ಲಿ ಕೆಕೆಆರ್‌ಡಿಬಿಗೆ 3,000 ಕೋಟಿ ರೂ ಮೀಸಲಿರಿಸಲಾಗಿದ್ದು. ಈಗಾಗಲೇ 1,500 ಕೋಟಿ ರೂ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Talawara community people show black flag to CM Basavaraj Bommai in Kalaburagi mrq
ಸಿಎಂ ಬೊಮ್ಮಾಯಿ


ನಮ್ಮದು ಕ್ರಿಯಾಶೀಲವಾಗಿರೋ ಸರ್ಕಾರ, ಪ್ರಾದೇಶಿಕ ಅಸಮತೋಲನ ನಿವಾರಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ‌ ಜಿಲ್ಲೆಗಳಲ್ಲಿ 2,001 ಶಾಲಾ ಕೋಣೆಗಳ ನಿರ್ಮಾಣದ‌ ಗುರಿ ಹೊಂದಿದೆ. ಈ ಭಾಗದ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಕೈಗಾರಿಕೆ ನೀತಿ ತರಲಾಗಿದೆ.

ಶೀಘ್ರದಲ್ಲಿಯೇ ಟೆಕ್ಸ್ಟ್‌ಟೈಲ್ ಪಾರ್ಕ್‌ ನಿರ್ಮಾಣಕ್ಕೆ ಅಡಿಗಲ್ಲು

ರಾಯಚೂರು ಹಾಗೂ ವಿಜಯಪುರ ಜಿಲ್ಲೆಯಲ್ಲಿ ಟೆಕ್ಸ್ಟ್‌ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದ್ದು, 25 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಶೀಘ್ರದಲ್ಲಿಯೇ ಟೆಕ್ಸ್ಟ್‌ಟೈಲ್ ಪಾರ್ಕ್‌ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಾಗುವುದು ಎಂದು ಜನತೆಗೆ ಭರವಸೆ ನೀಡಿದರು.

Talawara community people show black flag to CM Basavaraj Bommai in Kalaburagi mrq
ಸಿಎಂ ಬೊಮ್ಮಾಯಿ


ಇದನ್ನೂ ಓದಿ:  Hyderabad-Karnataka Liberation Day: ಕಲ್ಯಾಣ ಕರ್ನಾಟಕ ಉತ್ಸವ ಹೆಸರಿಗೆ ಮಾತ್ರ ಸೀಮಿತನಾ? ಕಲ್ಯಾಣ ಆಗುವುದು ಯಾವಾಗ?

ಕುರುಳ್ ಚುರ್​ ಅನ್ನುತ್ತೆ

ಬೀದರ್‌ನಲ್ಲಿ ಪೆಟ್ರೋಲಿಯಂ ವಸ್ತುಗಳ ಉತ್ಪಾದನ ಘಟಕ ಸ್ಥಾಪನೆ, ರೈತರ ಮಕ್ಕಳಿಗೆ ವಿಶೇಷವಾದ ಪೌಷ್ಟಿಕ ಆಹಾರ ಯೋಜನೆ ಜಾರಿಗೆ ತರಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಕಡೆ ಜನ ಗುಳೆ ಹೋಗುತ್ತಿದ್ದಾರೆ. ವಲಸೆ ನಿಯಂತ್ರಣಕ್ಕಾಗಿ ಸರ್ಕಾರ ಸ್ಥಿರವಾದ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಗುಳೆ ಹೋಗುವವರನ್ನು ನೋಡಿದ್ರೆ ಕರುಳು ಚುರ್ ಅನ್ನುತ್ತೆ ಎಂದರು.

Talawara community people show black flag to CM Basavaraj Bommai in Kalaburagi mrq
ಸಿಎಂ ಬೊಮ್ಮಾಯಿ


ಬೀದರ್ ಟೂ ಬಳ್ಳಾರಿಗೆ ಎಕ್ಸ್‌ಪ್ರೆಸ್‌ ವೇ ಹೆದ್ದಾರಿ ಕಲಬುರಗಿ-ಯಾದಗಿರಿ ಮೂಲಕ ಹಾದು ಹೋಗಲಿದೆ. ಈ ಎಕ್ಸ್‌ಪ್ರೆಸ್‌ ವೇ ನಿಂದ ಬೆಂಗಳೂರಿಗೆ ಮತ್ತಷ್ಟು ಬೇಗ ತಲುಪಬಹುದು. ರಾಯಚೂರು/ಕೊಪ್ಪಳದಲ್ಲಿ ಏರ್‌ಪೋರ್ಟ್​‌ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬಹಳ ಸರ್ಕಾರಗಳು ಕಂಡಿದ್ದ ಕನಸ್ಸನ್ನ ನಾವು ನನಸ್ಸು ಮಾಡುತ್ತಿದ್ದೇವೆ ಎಂದು ಹೇಳಿದರು.

ಪ್ರಧಾನಿ ಮೋದಿ ಶುಭಾಶಯ ಪತ್ರ

ಭಾರತ ಕಂಡಂತಹ ಶ್ರೇಷ್ಠ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಹಾಗೂ ರಾಜ್ಯದ ಜನರ ಪರವಾಗಿ ಜನ್ಮದಿನದ ಶುಭಾಶಯ ಕೋರುವೆ. ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಶುಭಾಶಯ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:  PM Modi 72nd Birthday: ಪ್ರಧಾನಿ ಮೋದಿ ಬರ್ತ್​ ಡೇ; ರಾಜ್ಯದ ಬಿಜೆಪಿ ನಾಯಕರಿಂದ ಶುಭಾಶಯ

Talawara community people show black flag to CM Basavaraj Bommai in Kalaburagi mrq
ಸಿಎಂ ಬೊಮ್ಮಾಯಿ


ಕಲ್ಯಾಣ ಕರ್ನಾಟಕ ಭಾಗದ ಜನರ ಪ್ರತಿಯೊಬ್ಬರಿಗೆ ಅಭಯ ನೀಡಿ. ಆ ಭಾಗದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮಲ್ಲರ ಬೆಂಬಲದಿಂದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ದಿಟ್ಟ ಹೆಜ್ಜೆ ಇಟ್ಟಿದ್ದೇನೆ. ದಾರಿ ದೂರವಿದ್ದರು ನಮ್ಮ ಗುರಿ ತಲುಪುತ್ತೆವೆ ಎಂದು ತಿಳಿಸಿದರು.
Published by:Mahmadrafik K
First published: