ಶಿವಮೊಗ್ಗ: ತಾಳಗುಪ್ಪಾ- ಬೆಂಗಳೂರು ಎಕ್ಸಪ್ರೆಸ್ (Talaguppa-Bengaluru Express) ರೈಲು ಭದ್ರಾವತಿ (Bhadravati) ಸಮೀಪ ಇಂಜಿನ್ ಕಳಚಿ ಬೋಗಿಗಳ ಬಿಟ್ಟು ಮುಂದೆ ಹೋಗಿರುವ ಘಟನೆ ನಡೆದಿದೆ. ಬೋಗಿಗಳು ಮಾರ್ಗ ಮಧ್ಯೆದಲ್ಲಿಯೇ ಬೇರ್ಪಟ್ಟ ಕಾರಣ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ಹಿಂದೆ ರಾಮನಗರದಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟ ರೈಲು ಬೆಳಗ್ಗೆ 7 ಗಂಟೆಗೆ ಬಿದರೆ ಬಳಿ ಬರುತ್ತಿದ್ದಂತೆ ಇಂಜಿನ್ನಿಂದ ಬೋಗಿಗಳು ಬೇರ್ಪಟ್ಟಿವೆ. ಕಪ್ಲಿಂಗ್ ಸಡಿಲಗೊಂಡ ಹಿನ್ನೆಲೆ ಬೋಗಿಗಳಿಂದ ಇಂಜಿನ್ ಬೇರ್ಪಟ್ಟಿದೆ ಎಂದು ತಿಳಿದು ಬಂದಿದೆ.
ಬಿದರೆ ಪ್ರದೇಶ ಸಮತಟ್ಟಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಅದೃಷ್ಟವಶಾತ್ ಯಾವುದೇ ಸಾವು ನೋವುಗಳಾಗಿಲ್ಲ.
ಇಂಜಿನ್ ಬೇರ್ಪಟ್ಟ ನಂತರ ಬೋಗಿಗಳ ಬಿಟ್ಟು ಸ್ವಲ್ಪ ದೂರ ಚಲಿಸಿವೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ, ಸಮಸ್ಯೆ ಬಗೆಹರಿಸಿದ ಕಾರಣ ರೈಲು ತನ್ನ ಪ್ರಯಾಣ ಮುಂದುವರಿಸಿದೆ.
‘ನಾವು ಕರೆಂಟ್ ಬಿಲ್ ಕಟ್ಟಲ್ಲ’
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 200 ಯುನಿಟ್ ಫ್ರೀ ಎಂದು ಘೋಷಿಸಿದ್ದ ಹಿನ್ನೆಲೆಯಲ್ಲಿ ಅಫಜಲಪುರ ತಾಲೂಕಿನ ಬಾಸ್ಗಿ ಗ್ರಾಮದಲ್ಲಿ ಗ್ರಾಮಸ್ಥರು ವಿದ್ಯುತ್ ಬಿಲ್ ಕಟ್ಟೋದಕ್ಕೆ ತಕರಾರು ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 200 ಯುನಿಟ್ ಫ್ರೀ ಎಂದಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದಿದೆ ನಾವು ಕಟ್ಟೊಲ್ಲಾ ಎಂದು ಗ್ರಾಮಪಂಚಾಯತಿ ಸದಸ್ಯ ಸಂಗಯ್ಯ ಹೀರೇಮಠ್ ವಿದ್ಯುತ್ ಬಿಲ್ ಪಾವತಿಗೆ ತಕರಾರು ಮಾಡಿದ್ದಾರೆ.
ಇದನ್ನೂ ಓದಿ: Mangaluru: ಕಟೀಲಿನಲ್ಲಿ ಇಂದು ಏಕಕಾಲಕ್ಕೆ ಆರು ಮೇಳಗಳ ಯಕ್ಷಗಾನ ಪ್ರದರ್ಶನ!
ಗೆಳೆಯರಿಂದಲೇ ಕೊಲೆ
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳ ನಡೆದಿದ್ದು, ಈ ಸಮಯದಲ್ಲಿ ಓರ್ವನ ಪ್ರಾಣಪಕ್ಷಿ ಹಾರಿ ಹೋಗಿದೆ. ಮಂಡ್ಯದ ಮದ್ದೂರಿನ ಬೋರಾಪುರದ ಬಳಿ ಈ ಕೊಲೆ ನಡೆದಿದೆ. ಚಿಕ್ಕರಸಿನಕೆರೆ ಗ್ರಾಮದ ಪುನೀತ್ ಕೊಲೆಯಾದ ಯುವಕ.
ಗುರುವಾರ ರಾತ್ರಿ ಹಣದ ವಿಚಾರವಾಗಿ ಪುನೀತ್ ಮತ್ತು ಆತನ ಸ್ನೇಹಿತರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಪುನೀತ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಕೂಡಲೇ ಪುನೀತ್ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆ.ಎಂ ದೊಡ್ಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ