ಬಹುಮತ ಸಾಬೀತುಪಡಿಸಿದರೆ ನಾವೇ ಸರ್ಕಾರವನ್ನು ಬಿಟ್ಟುಕೊಡುತ್ತೇವೆ; ಶೋಭಾ ಕರಂದ್ಲಾಜೆಗೆ ಸಿದ್ದರಾಮಯ್ಯ ಸವಾಲ್​

ಜನಾದೇಶವಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಡಲಿಲ್ಲ ಎಂದು ಟ್ವಿಟ್ಟರ್​ನಲ್ಲಿ ಕಿಡಿಕಾರಿರುವ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಜಾಪ್ರಭುತ್ವದ ಲೆಕ್ಕಾಚಾರದ ಪಾಠ ಮಾಡಿದ್ದಾರೆ.

Sushma Chakre | news18
Updated:July 3, 2019, 1:04 PM IST
ಬಹುಮತ ಸಾಬೀತುಪಡಿಸಿದರೆ ನಾವೇ ಸರ್ಕಾರವನ್ನು ಬಿಟ್ಟುಕೊಡುತ್ತೇವೆ; ಶೋಭಾ ಕರಂದ್ಲಾಜೆಗೆ ಸಿದ್ದರಾಮಯ್ಯ ಸವಾಲ್​
ಸಿದ್ದರಾಮಯ್ಯ-ಶೋಭಾ ಕರಂದ್ಲಾಜೆ
  • News18
  • Last Updated: July 3, 2019, 1:04 PM IST
  • Share this:
ಬೆಂಗಳೂರು (ಜು. 3): ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ ಕಾಂಗ್ರೆಸ್​-ಜೆಡಿಎಸ್​ನದ್ದು ಅಪವಿತ್ರ ಮೈತ್ರಿ ಎಂದು ಕಿಡಿಕಾರುತ್ತಿದ್ದ ಬಿಜೆಪಿ ಮತ್ತೆ ಅದೇ ವಿಷಯವನ್ನು ಮುಂದಿಟ್ಟುಕೊಂಡು ಟೀಕಾಪ್ರಹಾರ ಮುಂದುವರೆಸಿದೆ. ಈ ವಿಷಯವಾಗಿ ಸದ್ಯಕ್ಕೆ ಟ್ವಿಟ್ಟರ್​ನಲ್ಲಿ ಟ್ವೀಟ್​ ವಾರ್​ ನಡೆಯುತ್ತಿದ್ದು, ನಿಮಗೆ ಸಾಧ್ಯವಾದರೆ ಬಿಜೆಪಿಯ ಬಹುಮತ ಸಾಬೀತುಪಡಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಶಾಸಕ ಆನಂದ್​ ಸಿಂಗ್ ಮತ್ತು ರಮೇಶ್​ ಜಾರಕಿಹೊಳಿ ರಾಜೀನಾಮೆ ವಿಚಾರ ಮೈತ್ರಿ ಸರ್ಕಾರದಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಟ್ವೀಟ್​ ಮಾಡಿದ್ದ ಸಿದ್ದರಾಮಯ್ಯ, ಈ ರಾಜೀನಾಮೆಯ ನಾಟಕದ ಸೂತ್ರಧಾರರು ರಾಜ್ಯದ ಬಿಜೆಪಿ ನಾಯಕರು. ಸರ್ಕಾರವನ್ನು ಮುನ್ನಡೆಸಲು ಜನರು ಅವರಿಗೆ ಅವಕಾಶ ಕೊಡಲಿಲ್ಲ. ಹೀಗಾಗಿ, ಅವರು ಹಿಂಬಾಗಿಲ ಮೂಲಕ ಅಧಿಕಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಲ್ಪವಾದರೂ ಸ್ವಾಭಿಮಾನವಿದ್ದರೆ ಕೊಳಕು ರಾಜಕಾರಣ ಮಾಡುತ್ತಿರುವ ರಾಜ್ಯದ ಬಿಜೆಪಿ ನಾಯಕರಿಗೆ ಸಂವಿಧಾನಬದ್ಧವಾಗಿ ನಡೆದುಕೊಳ್ಳಲು ಸೂಚಿಸಲಿ ಎಂದು ಆಕ್ರೋಶ ಹೊರಹಾಕಿದ್ದರು.

ಸಿಎಂ ಆಗುವ ಕನಸು ಕಂಡಿದ್ದ ಯಡಿಯೂರಪ್ಪಗೆ ಶಾಕ್​ ಕೊಟ್ಟ ಆರ್​ಎಸ್​ಎಸ್​!

ಇದಕ್ಕೆ ಪ್ರತಿಟ್ವೀಟ್​ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ, 105 ಸ್ಥಾನಗಳನ್ನು ಪಡೆದಿದ್ದ ಬಿಜೆಪಿಯ ಮುಂದೆ 78 ಸ್ಥಾನ ಪಡೆದಿದ್ದ ಕಾಂಗ್ರೆಸ್​ ಮತ್ತು 37 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್​ ಸೇರಿ ಅಪವಿತ್ರ ಮೈತ್ರಿ ಮಾಡಿಕೊಂಡರು. ಬಿಜೆಪಿಗೆ ಜನಾದೇಶವಿದ್ದರೂ ಸರ್ಕಾರ ರಚಿಸಿದರು ಎಂದು ಟೀಕಿಸಿದ್ದರು.ಶೋಭಾ ಕರಂದ್ಲಾಜೆ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನನಗೆ ತಿಳಿದಿರುವ ಪ್ರಕಾರ ಕರ್ನಾಟಕದಲ್ಲಿ ಯಾವುದೇ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲು 113 ಸ್ಥಾನಗಳನ್ನು ಗೆಲ್ಲಬೇಕೇ ವಿನಃ 105 ಅಲ್ಲ. 'ಏಕ್​ ಮಿನಿಟ್​' ನಿಮ್ಮ ಕೀಳು ರಾಜಕೀಯದಿಂದ ಬಿಡುವು ಮಾಡಿಕೊಂಡು ಪ್ರಜಾಪ್ರಭುತ್ವದ ಗಣಿತವನ್ನು ಕಲಿಯಿರಿ ಎಂದಿದ್ದಾರೆ.ಒಂದುವೇಳೆ 105 ಸ್ಥಾನಗಳಿಂದ ಸರ್ಕಾರವನ್ನು ರಚಿಸಬಹುದು ಎಂಬ ವಿಶ್ವಾಸ ನಿಮಗಿದ್ದರೆ ರಾಜ್ಯಪಾಲರಿಗೆ ನಿಮ್ಮ ಬಹುಮತ ಸಾಬೀತುಪಡಿಸಿ. ನಿಮ್ಮ ಮನವಿ ಸ್ವೀಕೃತವಾದರೆ ನಾವು ಖುಷಿಯಿಂದಲೇ ಸರ್ಕಾರವನ್ನು ಬಿಟ್ಟುಕೊಡುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ