HOME » NEWS » State » TAHSILDAR TAPANGUCCHI DANCE GOES VIRAL AT VILLAGE STAYING PROGRAMME AT KOLAR RRK LG

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಪ್ಪಾಂಗುಚ್ಚಿ ಡ್ಯಾನ್ಸ್; ವಿಡಿಯೋ ಸಖತ್ ವೈರಲ್

ನರಿನತ್ತ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಧಿಕಾರಿಗಳೇನೋ ಸಖತ್ತಾಗಿಯೇ ಕುಣಿದು ಕುಪ್ಪಳಿಸಿದ್ದಾರೆ. ತಹಶಿಲ್ದಾರ್ ಸಾಹೇಬರೇ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡುತ್ತಿರುವಾಗ ನಾವೂ ಸುಮ್ಮನಿದ್ದರೆ ಹೇಗೆಂದು ಮಹಿಳಾ ಅಧಿಕಾರಿಗಳು ಸಾಥ್ ನೀಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು.

news18-kannada
Updated:February 22, 2021, 9:26 AM IST
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಪ್ಪಾಂಗುಚ್ಚಿ ಡ್ಯಾನ್ಸ್; ವಿಡಿಯೋ ಸಖತ್ ವೈರಲ್
ಬಿಳಿ ಬಣ್ಣದ ಶರ್ಟ್​ ಹಾಕಿರುವವರು ತಹಶೀಲ್ದಾರ್
  • Share this:
ಕೋಲಾರ(ಫೆ.22): ಇತ್ತೀಚೆಗೆ ರಾಜ್ಯ ಸರ್ಕಾರ ಅಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎನ್ನುವ ಧ್ಯೇಯ ವಾಕ್ಯದೊಂದಿಗೆ, ಹಳ್ಳಿಗಳಿಗೆ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ತಹಶೀಲ್ದಾರ್ ಗಳು ತೆರಳಿ ಜನರ ಸಮಸ್ಯೆಗಳನ್ನ ಆಲಿಸುವ, ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಆದೇಶ ಮಾಡಿದ್ದರು. ಅದರಂತೆ ಕೋಲಾರ ಜಿಲ್ಲೆಯಾದ್ಯಂತ, ಜಿಲ್ಲಾಧಿಕಾರಿಗಳಿಂದ ತಾಲೂಕು ತಹಶೀಲ್ದಾರ್​ಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿ ಜನರ ಸಮಸ್ಯೆಗಳನ್ನ ಆಲಿಸುತ್ತಿದ್ದಾರೆ. ಹೀಗೆ ಬಂಗಾರಪೇಟೆ ತಾಲೂಕಿನ ನರಿನತ್ತ ಗ್ರಾಮದಲ್ಲಿ ತಹಶಿಲ್ದಾರ್ ದಯಾನಂದ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ  ಮುಗಿದಿದ್ದು, ಕಾರ್ಯಕ್ರಮದಲ್ಲಿ ಅಧಿಕಾರಿಗಳ ಜೊತೆಗೂಡಿ ಸಿನಿಮಾ ಹಾಡಿಗೆ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್  ವೈರಲ್ ಆಗಿದೆ.

ಕೋಲಾರದ ನೂತನ ಜಿಲ್ಲಾಧಿಕಾರಿ  ಸೆಲ್ವಮಣಿ ಅವರು ಈಗಾಗಲೇ ಮುಳಬಾಗಿಲು ಹಾಗೂ ಕೋಲಾರದ ಎರಡು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಿದ್ದು, ಜನರ ಸಮಸ್ಯೆಗಳನ್ನ ಆಲಿಸಿದ್ದಾರೆ.  ಆದರೆ ಬಂಗಾರಪೇಟೆ ತಹಶೀಲ್ದಾರ್ ಹಾಗೂ ಇತರ ಸಿಬ್ಬಂದಿಗೆ ಕಾರ್ಯಕ್ರಮದಲ್ಲಿ ನೃತ್ಯ ಮಾಡುವುದೇ ಹೆಚ್ಚಾಯಿತೆ ಎನ್ನುವ ಚರ್ಚೆಗಳು ನಡೆಯುತ್ತಿವೆ.  ಕಳೆದ ಶನಿವಾರ ಬಂಗಾರಪೇಟೆ ತಾಲೂಕಿನ  ನರಿನತ್ತ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜನರ ಸಮಸ್ಯೆಗಳನ್ನು ಆಲಿಸಲು ಹಾಕಿದ್ದ ಪೆಂಡಾಲ್ ಹಾಗು ಮೈಕ್ ಸೆಟ್ ನಲ್ಲಿ ಅಧಿಕಾರಿಗಳು ಕುಣಿದು ಕುಪ್ಪಳಿಸಿದ್ದಾರೆ.

ಗುರು ರಾಘವೇಂದ್ರ ಬ್ಯಾಂಕ್ ಮೋಸ ಮಾಡಿದ್ದು ಹಣ ಮಾತ್ರ ಅಲ್ಲ; ಅತ್ಯಮೂಲ್ಯವಾದ ಆರೋಗ್ಯವನ್ನು ಕಳೆದುಕೊಂಡವರ ಗೋಳಿನ ಕತೆ ಇದು !

ತಹಶೀಲ್ದಾರ್​​ಗೆ ಮಹಿಳಾ ಅಧಿಕಾರಿಗಳು ಸಾಥ್; ಕೋವಿಡ್ ನಿಯಮಗಳು ಗಾಳಿಗೆ

ನರಿನತ್ತ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಧಿಕಾರಿಗಳೇನೋ ಸಖತ್ತಾಗಿಯೇ ಕುಣಿದು ಕುಪ್ಪಳಿಸಿದ್ದಾರೆ. ತಹಶಿಲ್ದಾರ್ ಸಾಹೇಬರೇ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡುತ್ತಿರುವಾಗ ನಾವೂ ಸುಮ್ಮನಿದ್ದರೆ ಹೇಗೆಂದು ಮಹಿಳಾ ಅಧಿಕಾರಿಗಳು ಸಾಥ್ ನೀಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಕನ್ನಡದ ಕುರುಬನ ರಾಣಿ ಹಾಗೂ ಸಿಂಹಾದ್ರಿಯ ಸಿಂಹ ಸಿನಿಮಾದ ಎರಡು ಹಾಡುಗಳಿಗೆ ಡ್ಯಾನ್ಸ್ ಮಾಡಿರುವ ಅಧಿಕಾರಿಗಳು ಶಾಲಾ ಆವರಣವನ್ನೆ ನೃತ್ಯಕ್ಕೆ ಬಳಸಿಕೊಂಡಿದ್ದಾರೆ. ಅಲ್ಲದೆ ಸರ್ಕಾರಿ ಅನುದಾನದಿಂದ ಜನರ ಸಮಸ್ಯೆಗಳನ್ನ ಆಲಿಸಲು  ಹಾಕಿದ್ದ ಪೆಂಡಾಲ್ ಹಾಗೂ ಮೈಕ್ ಸೆಟ್ ಅನ್ನು ಮೋಜಿಗಾಗಿ ಬಳಸಿಕೊಂಡಿದ್ದಾರೆ. ಡ್ಯಾನ್ಸ್ ಮಾಡುವಾಗ ಯಾರೊಬ್ಬರು ಮಾಸ್ಕ್ ಸಹ ಧರಿಸದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ವರ್ತಿಸಿದ್ದು, ಸರ್ಕಾರದ ಅಧಿಕಾರಿಗಳ ಬೇಜವಬ್ದಾರಿಯನ್ನ ಪ್ರಶ್ನೆ ಮಾಡೋರೆ ಇಲ್ವಾ ಎನ್ನುವಂತಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ತಹಶೀಲ್ದಾರ್ ಸಾಹೇಬರು ಡ್ಯಾನ್ಸ್ ಮಾಡಿದ್ದು ಏನಾದರು ತಪ್ಪಾ? ರಾಜಕೀಯ ನಾಯಕರು ಡ್ಯಾನ್ಸ್ ಮಾಡಲ್ವಾ ಎಂದು ಕೆಲವರು ಅಧಿಕಾರಿಗಳ ಪರವಾಗಿ ಮಾತನಾಡುತ್ತಿದ್ದಾರೆ. ಇನ್ನು ಕೆಲವರು, "ಡ್ಯಾನ್ಸ್ ಮಾಡೋಕೆ ಸರ್ಕಾರಿ ಕಾರ್ಯಕ್ರಮದ ವೇದಿಕೆಯೆ ಬೇಕಾಯಿತೆ ", "ಅಧಿಕಾರಿಗಳು ಕಚೇರಿಯಲ್ಲೂ ಸರಿಯಾಗಿ ಕೆಲಸ ಮಾಡಲ್ಲ, ಇದೀಗ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಬಂದು ಮೋಜು ಮಸ್ತಿಯಲ್ಲಿ ತೊಡಗಿದ್ದು ಎಷ್ಟು ಸರಿಯೆಂದು" ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸುತ್ತಿದ್ದಾರೆ.
ಒಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಧಿಕಾರಿಗಳ ವರ್ತನೆಗೆ ಖಂಡನೆ ವ್ಯಕ್ತವಾಗಿದ್ದು, ಇದಕ್ಕೆ ಕೋಲಾರ ಜಿಲ್ಲಾಡಳಿತ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂಬುದು ಕಾದುನೋಡಬೇಕಿದೆ.
Published by: Latha CG
First published: February 22, 2021, 9:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories