ಪ್ರತಾಪ್ ಸಿಂಹ​ಗೆ ಪಾಠ ಮಾಡಿದ ಟಬುರಾವ್​; ಕೋಮುಭಾವನೆ ಬದಲು ವಿಶ್ವ ಮಾನವ ಸಂದೇಶ ಸಾರಿ

news18
Updated:April 16, 2018, 12:30 PM IST
ಪ್ರತಾಪ್ ಸಿಂಹ​ಗೆ ಪಾಠ ಮಾಡಿದ ಟಬುರಾವ್​; ಕೋಮುಭಾವನೆ ಬದಲು ವಿಶ್ವ ಮಾನವ ಸಂದೇಶ ಸಾರಿ
news18
Updated: April 16, 2018, 12:30 PM IST
ನ್ಯೂಸ್​ 18 ಕನ್ನಡ

ಬೆಂಗಳೂರು, (ಏ.16):  ದಿನೇಶ್​ ಗುಂಡೂರಾವ್​ ವಿರುದ್ಧ ಪ್ರತಾಪ್​ ಸಿಂಹ ಟೀಕಿಸುವ ವೇಳೆ  ದಿನೇಶ್​ ಗುಂಡೂರಾವ್​ ಪತ್ನಿ ಟಬುವನ್ನು ಅವರ ಮಾತುಗಳಲ್ಲಿ ಕರೆತಂದಿರುವುದಕ್ಕೆ ಟಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಾಪ್​ ಸಿಂಹ ದಿನೇಶ್​ ಗುಂಡೂರಾವ್​ ಟೀಕೆ ಮಾಡುವ ನೆಪದಲ್ಲಿ ನನ್ನ ಮೇಲೆ ವಾಗ್ದಾಳಿ ನಡೆಸಿದ್ದಾರೆ.   ಮೈಸೂರು ಸಂಸದರು ದಿನೇಶ್​ ಗುಂಡೂರಾವ್​ ಅವರಿಗೆ  ನನ್ನನ್ನು ಉದಾಹರಣೆಯಾಗಿ  ಹೇಳುವ ಮೂಲಕ ನನ್ನ ಭಾವನೆಗಳಿಗೆ ಘಾಸಿ ಮಾಡಿದ್ದಾರೆ.ಪ್ರತಾಪ್​ ಸಿಂಹ ಕೋಪಗೊಂಡು ನನ್ನ ಪತಿ ದಿನೇಶ್​ ಗುಂಡೂರಾವ್​ ಮೇಲೆ ಮಾತನಾಡಿದ್ದಾರೆ, ಈ ಬಗ್ಗೆ ಸಂಸದರು ದಿನೇಶ್​ ಜೊತೆ  ಮುಕ್ತ ಮಾತುಕತೆ ನಡೆಸಲಿ.  ಆದರೆ. ರಾಜಕೀಯ ಟೀಕೆ ವೇಳೆ ಮಹಿಳೆಯನ್ನು ಕರೆತಂದಿರುವುದು ಸರಿಯಲ್ಲ ಎಂದಿದ್ದಾರೆ

ಸಂಸದರು ತಮ್ಮ ಮಾತುಗಳಲ್ಲಿ ನನ್ನನ್ನು ಬೇಗಂ ಟಬು ಎಂದು ಉಲ್ಲೇಖಿಸಿದ್ದಾರೆ. ಇದು ಕೇವಲ ಕೋಮುವಾದದ ಮನಸ್ಥಿತಿ ತೋರಿಸುತ್ತದೆ. ನಾನು ಮುಸ್ಲಿಂ ಅವರ ಬ್ರಾಹ್ಮಣ ಎಂಬುದರಲ್ಲಿ ಯಾವುದೇ  ರಹಸ್ಯವಿಲ್ಲ. ಭಾರತದ ವಿವಿಧತೆಯಲ್ಲಿ ಏಕತೆ ಎಂಬಂತೆ ನಾವು ಎರಡು ದಶಕಗಳ ಕಾಲ ಉತ್ತಮ ದಾಂಪತ್ಯ ಜೀವನ ನಡೆಸಿದ್ದೇವೆ.

ಘಟನೆ ಹಿನ್ನೆಲೆ:  ಉತ್ತರ ಪ್ರದೇಶದ ಉನ್ನಾವೋ ಪ್ರಕರಣದ ಪ್ರತಿಭಟನೆ ವೇಳೆ ದಿನೇಶ್​ ಗುಂಡೂರಾವ್​  ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದಿದ್ದರು.
Loading...

ಇದಕ್ಕೆ ಬಿಜೆಪಿ ನಾಯಕರು ಪ್ರತಿಭಟಿಸಿದ್ದರು. ಅಲ್ಲದೇ ಸಂಸದ ಪ್ರತಾಪ್​ ಸಿಂಹ, ದಿನೇಶ್ ಗುಂಡೂರಾವ್ ಅವರ ಈ ಮಾತನ್ನ ಮೌಲ್ವಿ ಅಥವ ಮುಲ್ಲಾಗೆ ಹೇಳಬೇಕಿತ್ತು. ಆಗ ಅವರ ಹೆಂಡತಿಯೇ ದಿನೇಶ್ ಗುಂಡೂರಾವ್‌ಗೆ ಆ ಕೆಲಸ ಮಾಡುತ್ತಿದ್ದರು ಎಂದು ಟೀಕಿಸಿದ್ದರು.
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...