ರಾಜ್ಯದಲ್ಲಿ ಎಚ್​1ಎನ್​1ಗೆ ಇದುವರೆಗೂ 7 ಬಲಿ; ಹಾಸನ, ಕಲಬುರ್ಗಿಯಲ್ಲಿ ತಲಾ ಒಂದು ಸಾವು

Sushma Chakre | news18
Updated:October 13, 2018, 11:27 AM IST
ರಾಜ್ಯದಲ್ಲಿ ಎಚ್​1ಎನ್​1ಗೆ ಇದುವರೆಗೂ 7 ಬಲಿ; ಹಾಸನ, ಕಲಬುರ್ಗಿಯಲ್ಲಿ ತಲಾ ಒಂದು ಸಾವು
ಹೆಚ್1ಎನ್1
  • News18
  • Last Updated: October 13, 2018, 11:27 AM IST
  • Share this:
ಶಿವರಾಮ ಅಸುಂಡಿ, ಅಶೋಕ್​, ನ್ಯೂಸ್​18 ಕನ್ನಡ

ಕಲಬುರ್ಗಿ, ಹಾಸನ (ಅ. 13): ಎಚ್​1ಎನ್​1 ಜ್ವರಕ್ಕೆ ರಾಜ್ಯದಲ್ಲಿ ಇದುವರೆಗೂ 7 ಜನ ಸಾವನ್ನಪ್ಪಿದ್ದಾರೆ. ಕಳೆದೆರಡು ವಾರಗಳಿಂದ ಹಂದಿಜ್ವರಕ್ಕೆ ಸಂಬಂಧಿಸಿದಂತೆ ಸುಮಾರು 50 ಪ್ರಕರಣಗಳು ದಾಖಲಾಗಿವೆ.

ಕಲಬುರ್ಗಿ ಜಿಲ್ಲೆಯಲ್ಲಿ ಹಂದಿಜ್ವರಕ್ಕೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಜಿಲ್ಲೆಯಲ್ಲಿ ಇದುವರೆಗೂ 16 ಪ್ರಕರಣಗಳು ಪತ್ತೆಯಾಗಿವೆ. ಎಚ್1ಎನ್1 ಜ್ವರದಿಂದ ಬಳಲುತ್ತಿದ್ದ ಕಲಬುರ್ಗಿ ಜಿಲ್ಲೆ ಅಫಜಲಪುರ ಪಟ್ಟಣದ 48 ವರ್ಷದ ಲಕ್ಷ್ಮಿಪುತ್ರ ಎಂಬುವವರು ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸತ್ತಿರುವ ವ್ಯಕ್ತಿ ಎಚ್1ಎನ್1 ಜ್ವರದಿಂದ ಬಳಲುತ್ತಿದ್ದರು. ಸಾವಿಗೆ ಅದೇ ಜ್ವರ ಕಾರಣವೇ? ಎಂಬ ಕುರಿತು ತನಿಖೆ ಮಾಡಲಾಗುತ್ತಿದೆ  ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಕೆ. ಪಾಟೀಲ ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಲಕ್ಷ್ಮೀಪುತ್ರ ಅವರಿಗೆ ಮಣ್ಣೂರೆಯ ರಕ್ತ ಪರೀಕ್ಷೆ ಮಾಡಿಸಲಾಗಿತ್ತು. ಈ ವೇಳೆ ಎಚ್1ಎನ್1 ಜ್ವರದಿಂದ ಬಳಲುತ್ತಿರುವುದು ಖಾತ್ರಿಯಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಿದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇಂದು ಅಫಜಲಪುರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಇದನ್ನೂ ಓದಿ: ಎಚ್ಚರ...! ರಾಜ್ಯಕ್ಕೆ ಕಾಲಿಟ್ಟಿದೆ ಮಾರಕ ರೋಗ ಎಚ್​1ಎನ್​1: ಈವರೆಗೆ 6 ಮಂದಿ ಬಲಿ

ಕೆಲ ದಿನಗಳ ಹಿಂದೆ ಎಚ್1ಎನ್1 ಜ್ವರದಿಂದ ಬಳಲುತ್ತಿದ್ದ ಸುಧಾಬಾಯಿ ಎಂಬ ಮಹಿಳೆ ಸಾವನ್ನಪ್ಪಿದ್ದರು. ಆಕೆ ಎಚ್1ಎನ್1 ಜ್ವರದಿಂದ ಬಳಲಿದರೂ ಮೃತಪಟ್ಟಿದ್ದು ಮಾತ್ರ ಹೃದಯಾಘಾತದಿಂದ. ಈ ನಿಟ್ಟಿನಲ್ಲಿ ಲಕ್ಷ್ಮೀಪುತ್ರ ಸಾವಿರ ಕುರಿತೂ ವೈದ್ಯಕೀಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎಚ್1ಎನ್1 ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಕೆ. ಪಾಟೀಲ ತಿಳಿಸಿದ್ದಾರೆ.

ಇದನ್ನೂ ಓದಿ: ಭಯದ ವಾತಾವರಣ ಸೃಷ್ಟಿಸಿದ ಹಂದಿಜ್ವರ: ಒಂದೇ ವಾರದಲ್ಲಿ 46 ಪ್ರಕರಣ ದಾಖಲುಜಿಲ್ಲೆಯಲ್ಲಿ ಡೆಂಗ್ಯೂ ಬೆನ್ನಲ್ಲಿಯೇ ಎಚ್1ಎನ್1 ಜ್ವರ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಜ್ವರ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಜ್ವರ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಜೊತೆಗೆ, ಜ್ವರದಿಂದ ಬಳಲುತ್ತಿರುವವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ದೊರಕಿಸಲು ಕ್ರಮ ಕೈಗೊಳ್ಳುವಂತೆ ನಾಗರೀಕರು ಆಗ್ರಹಿಸಿದ್ದಾರೆ.

ಹಾಸನದಲ್ಲಿ ಮೊದಲ ಬಲಿ:

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಣಿಯಾರು ಗ್ರಾಮದ 56 ವರ್ಷದ ಶಿವನಂಜೇಗೌಡ ಎಂಬ ವ್ಯಕ್ತಿ ಎಚ್​1ಎನ್​1ಗೆ ಬಲಿಯಾಗಿದ್ದಾರೆ. ಇದು ಹಾಸನದಲ್ಲಿ ಮೊದಲ ಪ್ರಕರಣವಾಗಿದ್ದು, 4 ದಿನಗಳಿಂದ ಜ್ವರ ಹೆಚ್ಚಾಗಿದ್ದರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆ ಸೇರಿದ್ದ ಶಿವನಂಜೇಗೌಡರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಎಚ್​1ಎನ್​1 ಶಂಕಿತರು ಹಾಸನದ ಅನಿಲ್​ ಕುಮಾರ್ ಮತ್ತು ಕೇಶವಮೂರ್ತಿ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

First published: October 13, 2018, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading