ಭವ್ಯ ಭಾರತದ ಕನಸು ಕಂಡಿದ್ದ ಸಂತ ವಿವೇಕಾನಂದ: ಹಾಸನ ಜಿಲ್ಲಾಧಿಕಾರಿ ಗಿರೀಶ್

ಪ್ರತಿಯೊಬ್ಬರೂ ಕೂಡ ಜೀವ ಸಂಕುಲವನ್ನು ಪ್ರೀತಿಸಬೇಕು, ಗೌರವಿಸಬೇಕು. ವ್ಯಕ್ತಿ ತನಗಿರುವ ಅವಕಾಶ ಮತ್ತು ಮಿತಿಗಳ ಒಳಗೆ ತನ್ನ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಅದೇ ದೇಶಕ್ಕೆ ಸಲ್ಲಿಸುವ ನಿಜವಾದ ಸೇವೆಯೆಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟಿದ್ಧಾರೆ.

news18
Updated:January 13, 2020, 10:56 AM IST
ಭವ್ಯ ಭಾರತದ ಕನಸು ಕಂಡಿದ್ದ ಸಂತ ವಿವೇಕಾನಂದ: ಹಾಸನ ಜಿಲ್ಲಾಧಿಕಾರಿ ಗಿರೀಶ್
ವಿವೇಕಾನಂದ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾಧಿಕಾರಿ ಗಿರೀಶ್
  • News18
  • Last Updated: January 13, 2020, 10:56 AM IST
  • Share this:
ಹಾಸನ‌(ಜ.. 12): ಸ್ವಾಮಿ ವಿವೇಕಾನಂದ ಅವರು ಭಾರತದ ಬಗ್ಗೆ ಭವ್ಯವಾದ ಕನಸು ಕಂಡ ಏಕೈಕ ಸಂನ್ಯಾಸಿ ಸಂತರಾಗಿದ್ದಾರೆಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಹೇಳಿದರು. ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿಂದು ಯುವ ಸಬಲೀಕರಣ ಕೇಂದ್ರ ಉದ್ಘಾಟನೆ ಹಾಗೂ ಸ್ವಾಮಿ ವಿವೇಕಾನಂದ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ಜೀವನ ಸಂದೇಶವೆಲ್ಲ ರಾಷ್ಟ್ರ ಪ್ರೇಮ, ಹಸಿದವನಿಗೆ ಅನ್ನ ಗಳಿಸುವ ದಾರಿ ತೋರಿಸುವುದು, ಗುರಿ ಮುಟ್ಟುವವರೆಗೆ ಛಲಬಿಡದೆ ಪ್ರಯತ್ನಿಸುವುದು, ಯುವ ಜನತೆ ರಾಷ್ಟ್ರೋದ್ಧಾರದ ಸಂಕೇತ ಎಂಬ ಉದಾತ್ತ ಚಿಂತನೆಗಳಿಂದದಲೇ ತುಂಬಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿ ಹಾಗೂ ಯುವ ಸಮೂಹ ಓದಿ ಕೇವಲ ಕೆಲಸ ಹುಡುಕುವುದಕ್ಕೆ ಸೀಮಿತವಾಗದೆ ಸಾವಿರಾರು ಮಂದಿಗೆ ಕೆಲಸ ನೀಡುವ ಸ್ವ ಉದ್ಯೋಗಿಗಳಾಗಬೇಕು. ಆ ಘನ ಉದ್ದೇಶದಿಂದಲೇ ಇಂದು ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ಕೇಂದ್ರ ಸ್ಥಾಪನೆಯಾಗುತ್ತಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳಿರೆಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಕರೆ ನೀಡಿದರು.

ಇದನ್ನೂ ಓದಿ: ನಾನು ಹೈಸ್ಕೂಲ್ ಓದಬೇಕಾದ್ರೆ ತರಕಾರಿ, ನಿಂಬೆಹಣ್ಣು ಮಾರುತ್ತಿದ್ದೆ; ಸಿಎಂ ಯಡಿಯೂರಪ್ಪ

ಪ್ರತಿಯೊಬ್ಬರೂ ಕೂಡ ಜೀವ ಸಂಕುಲವನ್ನು ಪ್ರೀತಿಸಬೇಕು, ಗೌರವಿಸಬೇಕು. ವ್ಯಕ್ತಿ ತನಗಿರುವ ಅವಕಾಶ ಮತ್ತು ಮಿತಿಗಳ ಒಳಗೆ ತನ್ನ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಅದೇ ದೇಶಕ್ಕೆ ಸಲ್ಲಿಸುವ ನಿಜವಾದ ಸೇವೆಯೆಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಮಾತನಾಡಿ, ಭಾರತದಲ್ಲಿರುವ ಶೇ. 65ರಷ್ಟು ಯುವ ಸಂಪತ್ತು 35 ವರ್ಷದೊಳಗಿನವರಾಗಿದ್ದಾರೆ ಎಂದು ಅವರು ಹೇಳಿದರು.

ಸ್ವಾಮಿ ವಿವೇಕಾನಂದರು ದೇಶದ ಭವಿಷ್ಯದ ಬಗ್ಗೆ ನಂಬಿಕೆ ಇರಿಸಿದ್ದು, ಈ ಯುವ ಶಕ್ತಿ ದೇಶೋದ್ದಾರಕ್ಕೆ ಶ್ರಮಿಸಬೇಕು ಎಂದರಲ್ಲದೆ, ಅವಕಾಶಗಳಿಗೆ ಕಾಯ್ದು ಸಮಯ ವ್ಯಯಿಸದೇ ಅವಕಾಶ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳುವ ಬೌದ್ಧಿಕವಾಗಿ ಸಂಪನ್ಮೂಲರಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಇನ್ನೂ ಓದಿ: ಬೆಂಗಳೂರಿನ ಗುರು ರಾಘವೇಂದ್ರ ಬ್ಯಾಂಕ್​ನಲ್ಲಿ 600 ಕೋಟಿಗೂ ಹೆಚ್ಚು ಎನ್​ಪಿಎ; ಆರ್​ಬಿಐನಿಂದ ನಿರ್ಬಂಧ; ಆತಂಕದಲ್ಲಿ ಗ್ರಾಹಕರು

ಸ್ವಾಮಿ ವಿವೇಕಾನಂದರ ಜೀವನದ ಘಟನೆಗಳು ಒಂದೊಂದು ಬಗೆಯಲ್ಲಿ ಮಾರ್ಗದರ್ಶಕವಾಗಿದ್ದು, ಅವುಗಳನ್ನು ಜೀವನದ ಆದರ್ಶವಾಗಿ ಸ್ವೀಕರಿಸಬೇಕು. ಚಿಂತಿಸದೆ, ಖಿನ್ನರಾಗದೇ ಸತತ ಪರಿಶ್ರಮದಿಂದ ಮುನ್ನುಗ್ಗಬೇಕು. ವಿದ್ಯಾರ್ಥಿಗಳೆಲ್ಲರೂ ಯಶಸ್ಸಿನ ಬೆನ್ನೇರಬೇಕೆಂದು ಬಿ.ಎ. ಪರಮೇಶ್ ಅವರು ಆಶಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ರಾಜಪ್ಪ ಅವರು ಮಾತನಾಡಿ ದೇಶದ ಸಂಸ್ಕೃತಿ, ಸನಾತನ ಧರ್ಮವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ತೋರಿದ ಕೀರ್ತಿ ಸ್ವಾಮಿ ವಿವೇಕಾನಂದರದ್ದು. ಅವರು ದೇಶದ ಯುವ ಸಂತತಿಗೆ ಸದಾ ಪ್ರೇರಕರಾಗಿದ್ದಾರೆಂದು ನುಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ವಿದ್ಯಾ ಅವರು ವಿಶೇಷ ಉಪನ್ಯಾಸ ನೀಡುತ್ತಾ, ದೇಶದಲ್ಲಿ 365 ದಿನವೂ ಸ್ಮರಣಾರ್ಹವಾದ ಇತಿಹಾಸದ ವ್ಯಕ್ತಿ ಮತ್ತು ಶಕ್ತಿಯೆಂದರೆ ಅದು ವಿವೇಕಾನಂದರು ಮಾತ್ರ. ಹಾರ್ವರ್ಡ್‌ ವಿಶ್ವವಿದ್ಯಾಲಯದ ಭಾಷಣದಲ್ಲಿ ಸಂನ್ಯಾಸಿ ಸಂತ ಭಾರತದಲ್ಲಿ ಯುವಕರೇ ಹೆಚ್ಚು ಎಂದು ಹೇಳಿದ್ದರು. ಆ ಯುವಜನತೆ ಇಂದು ಸೋಮಾರಿತನ, ಅಹಂಕಾರವನ್ನು ತೊಲಗಿಸಿ ದೇಶ ನನ್ನದು, ದೇಶದಲ್ಲಿರುವವರೆಲ್ಲ ನನ್ನವರೆಂಬ ಭಾವದಲ್ಲಿ ಬದುಕಬೇಕು. ಅದು ಸುಸಂಸ್ಕೃತವಾದ ಶಿಕ್ಷಣದಿಂದ ಮಾತ್ರವೇ ಸಾಧ್ಯವೆಂದು ಹೇಳಿದರು.

ಇದನ್ನೂ ಓದಿ: ಕನ್ನಡ ಬಾವುಟ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ತಮಿಳುನಾಡು; ಬೆಂಗಳೂರಿಗರ ಮೇಲೆ ಹಲ್ಲೆ

ವಿವೇಕಾನಂದರು ನಂಬಿಕೆ ಇರಿಸಿದ್ದ ದೇಶದ ಯುವ ಸಂಪತ್ತು ಇಂದು ಮೊಬೈಲ್ ಗೀಳಿಗೆ ಬಿದ್ದು ಮಾನಸಿಕವಾಗಿ, ದೈಹಿಕವಾಗಿ ಅನಾರೋಗ್ಯಕ್ಕಿಡಾಗುತ್ತಿದ್ದಾರೆ. WHO ವರದಿಯಂತೆ ಮುಂದಿನ 5 ವರ್ಷಗಳಲ್ಲಿ ಭಾರತದ 37% ಯುವಜನರು ಕಣ್ಣಿನ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಲಿದ್ದಾರೆ ಎಂದು ಈ ಸಂದರ್ಭದಲ್ಲಿ ವಿಷಾದಿಸಿದ ಅವರು, ಯುವಕರು ಎಚ್ಚೆತ್ತುಕೊಂಡು ದೈಹಿಕವಾಗಿ, ಮಾನಸಿಕವಾಗಿ, ಶೈಕ್ಷಣಿಕವಾಗಿ, ನೈತಿಕವಾಗಿ ಆರೋಗ್ಯವಂತರಾಗಬೇಕು. ಜೊತೆಗೆ ಗುರಿ ತಲುಪುವ ಹಂಬಲ ಸದಾಶಯದೊಂದಿಗೆ ಕರ್ತವ್ಯನಿರತರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಶಿವಶಂಕರಪ್ಪ, ಡಿವೈಎಸ್​ಪಿ ಪುಟ್ಟಸ್ವಾಮಿಗೌಡ, ನೆಹರು ಯುವ ಕೇಂದ್ರದ ಅಧಿಕಾರಿ ಅನಂತಪ್ಪ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಮ್. ಶಿವಣ್ಣ, ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ