Nithyananda: ಐ ಆ್ಯಮ್ ಗಾಡು, ಶೀಘ್ರವೇ ನನ್ನನ್ನು ನೋಡು! ಕೈಲಾಸದಿಂದ ಬಂತು ನಿತ್ಯಾನಂದ ಸ್ವಾಮಿ ಸಂದೇಶ

ತನ್ನ ಸಾವಿನ ಕುರಿತ ವದಂತಿಗಳಿಗೆ ನಿತ್ಯಾನಂದ ಸ್ವಾಮಿ ತೆರೆ ಎಳೆದಿದ್ದಾರೆ. ತಾವೇ ಸೃಷ್ಟಿಸಿಕೊಂಡ ಕೈಲಾಸದಲ್ಲಿ ಸಮಾಧಿ ಸ್ಥಿತಿಯಲ್ಲಿರುವ ನಿತ್ಯಾನಂದ ಸ್ವಾಮಿ, ಸಮಾಧಿಯಲ್ಲಿ ಆನಂದಿಸುತ್ತಿರುವುದಾಗಿ, ಶೀಘ್ರವೇ ಇಲ್ಲಿಂದ ಹೊರಬಂದಿ ಭಕ್ತರ ಜೊತೆ ಸತ್ಸಂಗ ಮರಳಿ ನಡೆಸುವೆ ಎಂದು ಸಂದೇಶ ರವಾನಿಸಿದ್ದಾರೆ.

ಸ್ವಾಮಿ ನಿತ್ಯಾನಂದ

ಸ್ವಾಮಿ ನಿತ್ಯಾನಂದ

  • Share this:
ಸ್ವಾಮಿ ನಿತ್ಯಾನಂದ (Swamy Nithaynanda) ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ವಿವಾದಗಳಿಂದಲೇ (Controversy) ಸುದ್ದಿಯಾಗುತ್ತಿದ್ದ (News) ನಿತ್ಯಾನಂದ ಸ್ವಾಮಿ, ಈ ಬಾರಿ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ನಿತ್ಯಾನಂದ ಸ್ವಾಮಿಗೆ ಅನಾರೋಗ್ಯವಾಗಿದೆ (Illness), ಅವರ ಮರಣವಾಗಿದೆ (Death) ಅಂತೆಲ್ಲ ಸುದ್ದಿಗಳು ಓಡಾಡುತ್ತಿದ್ದವು. ಆದ್ರೆ ಕೈಲಾಸದಿಂದ (Kailasa) ಡೈರೆಕ್ಟ್ ಆಗಿ ಭಕ್ತರಿಗೊಂದು (Devotees) ಮೆಸೇಜ್ (Message) ಬಂದಿದೆ. ನಿತ್ಯಾನಂದ ಸ್ವಾಮಿ ಆರೋಗ್ಯವಾಗಿದ್ದಾರೆ. (Healthy) ಶೀಘ್ರವೇ ಭಕ್ತರಿಗೆ ದರ್ಶನ (Darshana) ಕೊಡುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ನಿತ್ಯಾನಂದ ಆರೋಗ್ಯ ಏರುಪೇರಾಗಿ ತೀವ್ರ ಅಸ್ವಸ್ಥರಾಗಿದ್ದಾರೆ ಎನ್ನಲಾಗಿತ್ತು. ಕೈಲಾಸದಲ್ಲೇ ನಿತ್ಯಾನಂದನಿಗೆ ಚಿಕಿತ್ಸೆ (Treatment) ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನಿತ್ಯಾನಂದ ಇನ್ನಿಲ್ಲ ಅನ್ನೋ ಪೋಸ್ಟ್‌ಗಳು ಹರಿದಾಡಿತ್ತು. ಅನಾರೋಗ್ಯದಿಂದ ನಿತ್ಯಾನಂದ ಸ್ವಾಮಿ ಸಾವನ್ನಪ್ಪಿದ್ದಾರೆ ಅನ್ನೋ ವದಂತಿಗಳು ಹರಿದಾಡಿತ್ತು. ಆದರೆ ಸಾವಿನ ಸುದ್ಧಿ ಸುಳ್ಳು ಎಂದು ಸಾಮಾಜಿಕ ಜಾಲತಾದಲ್ಲಿ ಸ್ಪಷ್ಟನೆ ನೀಡಲಾಗಿದೆ. 

 ನಿತ್ಯಾನಂದ ಸ್ವಾಮಿ ಸಾವಿನ ಕುರಿತು ವದಂತಿ

ಕೆಲ ದಿನಗಳ ಹಿಂದಷ್ಟೇ ನಿತ್ಯಾನಂದ ಸ್ವಾಮಿ ಸಾವಿನ ಕುರಿತು ವದಂತಿಗಳು ಹರಿದಾಡುತ್ತಿದ್ದವು. ಕೈಲಾಸದ ನಿತ್ಯನಂದ ಸ್ವಾಮಿಗಳಿಗೆ ಅನಾರೋಗ್ಯವಾಗಿದ್ದು, ಮೃತಪಟ್ಟಿದ್ದಾರೆ ಎಂದು ವಿರೋಧಿಗಳು ಸುಳ್ಳು ವದಂತಿಯನ್ನು ಹರಡಿಸಿದ್ದರು. ಇದನ್ನು ತಿಳಿದ ನಿತ್ಯಾನಂದ ಫೇಸ್​ಬುಕ್ ಮೂಲಕ ತಮ್ಮ ಭಕ್ತರಿಗೆ ಸ್ಪಷ್ಟ ಸಂದೇಶವನ್ನು ತಲುಪಿಸಿದ್ದಾರೆ. ಫೇಸ್​ಬುಕ್ ನಲ್ಲಿ ಬರೆದುಕೊಂಡಿರುವ ನಿತ್ಯಾನಂದ ಅವರು, ತಾನು ಮೃತಪಟ್ಟಿಲ್ಲ  ಹಾಗೂ ಸಮಾಧಿಯಲ್ಲಿರುವುದಾಗಿ ತಿಳಿಸಿದ್ದರು.

ಶೀಘ್ರವೇ ಭಕ್ತರಿಗೆ ಸಿಗಲಿದೆ ನಿತ್ಯಾನಂದ ದರ್ಶನ

ತನ್ನ ಸಾವಿನ ಕುರಿತ ವದಂತಿಗಳಿಗೆ ನಿತ್ಯಾನಂದ ಸ್ವಾಮಿ ತೆರೆ ಎಳೆದಿದ್ದಾರೆ. ತಾವೇ ಸೃಷ್ಟಿಸಿಕೊಂಡ ಕೈಲಾಸದಲ್ಲಿ ಸಮಾಧಿ ಸ್ಥಿತಿಯಲ್ಲಿರುವ ನಿತ್ಯಾನಂದ ಸ್ವಾಮಿ, ಸಮಾಧಿಯಲ್ಲಿ ಆನಂದಿಸುತ್ತಿರುವುದಾಗಿ, ಶೀಘ್ರವೇ ಇಲ್ಲಿಂದ ಹೊರಬಂದಿ ಭಕ್ತರ ಜೊತೆ ಸತ್ಸಂಗ ಮರಳಿ ನಡೆಸುವೆ ಎಂದು ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: Swami Nithyananda: ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಹೇಗೆ ಏಮಾರಿಸಿದ್ದ? ಡಾಕ್ಯೂ ಸಿರೀಸ್​ನಲ್ಲಿದೆಯಂತೆ ವಿವರಣೆ

ಈ ಹಿಂದೆಯೂ ಸಂದೇಶ ನೀಡಿದ್ದ ಸ್ವಾಮಿ ನಿತ್ಯಾನಂದ

ಕೈಲಾಸ ಎಂಬ ದೇಶ ನಿರ್ಮಿಸಿಕೊಂಡು ಸಮಾಧಿವಾಸಿಯಾಗಿರುವ ನಿತ್ಯಾನಂದ ಸ್ವಾಮಿ ಮರಣ ಹೊಂದಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ನಿತ್ಯಾನಂದ ಸ್ವಾಮಿ ತಾನು ಸಮಾಧಿಯಲ್ಲಿ ಜೀವಂತವಾಗಿದ್ದೇನೆ ಎಂದು ಸಂದೇಶವನ್ನು ಸಮಾಧಿಯಿಂದಲೇ ನೀಡಿದ್ದರು.



ನಿತ್ಯ ಸಂದೇಶದಲ್ಲಿ ಏನಿದೆ?

'ಪ್ರಿಯ ಭಕ್ತರೇ, ಶಿಷ್ಯರೇ ಮತ್ತು ಕೈಲಾಸವಾಸಿಗಳೇ ನಾನು ಸಮಾಧಿ ಸ್ಥಿತಿಯನ್ನು ಆನಂದಿಸುತ್ತಿದ್ದೇನೆ. ಇಲ್ಲಿಂದಲೇ ನಿಮ್ಮನ್ನು ಆಂತರಿಕವಾಗಿ ಸಂಪರ್ಕಿಸುತ್ತಿದ್ದೇನೆ. ಸಮಾಧಿಯಲ್ಲಿ ದೇಹವನ್ನು ತಹಬದಿಗೆ ತಂದುಕೊಂಡು ಶೀಘ್ರವೇ ಇಲ್ಲಿಂದ ಹೊರಬರುವೆ. ಬಳಿಕ ಎಂದಿನಂತೆ ಸತ್ಸಂಗ, ದರ್ಶನ ಮತ್ತು ತತ್ವ ಸಾರಗಳನ್ನು ಪ್ರಚುರಪಡಿಸಲಾಗುವುದು. ಮಹಾ ಕೈಲಾಸ ಇನ್ನಷ್ಟು ಬೆಳಗಲಿದೆ, ಉತ್ಕೃಷ್ಟಗೊಳ್ಳಲಿದೆ ಎಂದು ನಿತ್ಯಾನಂದ ಸ್ವಾಮಿ ತಮ್ಮ ಭಕ್ತರಿಗೆ ಸಂದೇಶ ಕಳಿಸಿದ್ದಾರೆ.

ಇದನ್ನೂ ಓದಿ: Nithyananda: ಐ ಆ್ಯಮ್ ಗಾಡ್, ಗಾಡ್ ಈಸ್ ಸೇಫ್! ಸಮಾಧಿಯಿಂದ ಬಂತು ಸ್ವಾಮಿ ನಿತ್ಯಾನಂದನ ಸಂದೇಶ

ನಿತ್ಯಾನಂದ ಆರೋಪಗಳ ಕುರಿತು ಸಾಕ್ಷ್ಯಚಿತ್ರ

ಸದಾ ವಿವಾದದ ಕೇಂದ್ರಬಿಂದುವೇ ಆಗಿರುವ ನಿತ್ಯಾನಂದನ ಕುರಿತು My Daughter Joined a Cult ಎಂಬ ಡಾಕ್ಯೂ ಸಿರೀಸ್ (Docu Series)​ ಬಿಡುಗಡೆಯಾಗಿತ್ತು.  ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಕುರಿತಾದ ಡಾಕ್ಯೂ ಸರಣಿ My Daughter Joined a Cult ಡಿಸ್ಕವರಿ+ ನಲ್ಲಿ ಬಿಡುಗಡೆಯಾಗಿದೆ. VICE ಸ್ಟುಡಿಯೋಸ್‌ನಿಂದ ನಿರ್ಮಿಸಲ್ಪಟ್ಟ ಸರಣಿಯು ಜೂನ್ 2 ರಿಂದ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲು ಪ್ರಾರಂಭಿಸಿದೆ. ಇದು ಹಿಂದಿ, ತಮಿಳು, ತೆಲುಗು, ಇಂಗ್ಲೀಷ್, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ.
Published by:Annappa Achari
First published: