K.S Eshwarappa: ಮಾಜಿ ಸಚಿವ ಈಶ್ವರಪ್ಪ ಮನೆಗೆ ಮಠಾಧೀಶರ ಭೇಟಿ; ಧೈರ್ಯ ತುಂಬಿದ ಸ್ವಾಮೀಜಿಗಳು

ಯಾವ ಲೋಪವೂ ಇಲ್ಲದೇ, ನಿರ್ದೋಷಿಯಾಗಿ ಹೊರಗೆ ಬರ್ತೀರಾ ಎಂದು ಸ್ವಾಮೀಜಿಗಳು ಅಭಯ ನೀಡಿದ್ದಾರೆ. ನಾನೇನು ಕುಗ್ಗಿರಲಿಲ್ಲ. ನನಗೆ ಆನೆಬಲದಷ್ಟು ಧೈರ್ಯ ಬಂದಿದೆ ಎಂದ್ರು ಈಶ್ವರಪ್ಪ.

ಈಶ್ವರಪ್ಪ ಮನೆಯಲ್ಲಿ ಮಠಾಧೀಶರು

ಈಶ್ವರಪ್ಪ ಮನೆಯಲ್ಲಿ ಮಠಾಧೀಶರು

  • Share this:
ಶಿವಮೊಗ್ಗ(ಏ.16): ಗುತ್ತಿಗೆದಾರ ಸಂತೋಷ ಪಾಟೀಲ್ (Santhosh Patil) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಸ್.ಈಶ್ವರಪ್ಪ (K.S Eshwarappa) ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆ‌ ಇಂದು ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ವಿವಿಧ ಸ್ವಾಮೀಜಿಗಳು (Swamiji) ಭೇಟಿ ನೀಡಿದ್ದಾರೆ. ಮಾದಾರ ಚೆನ್ನಯ್ಯ ಸ್ವಾಮೀಜಿ (Madara Chennayya Swamiji), ಕಾಗಿನೆಲೆಯ ನಿರಂಜನಾಂದಪುರಿ ಸ್ವಾಮೀಜಿ,  ಪುರುಷೋತ್ತಮನಂದಪುರಿ ಸ್ವಾಮೀಜಿ, ಹೊಸದುರ್ಗದ ಈಶ್ವರನಂದಪುರಿ ಸ್ವಾಮೀಜಿ ಸೇರಿದಂತೆ ಒಟ್ಟು ಹತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ನೀಡಿ ಈಶ್ವರಪ್ಪ ಜತೆ ಮಾತುಕತೆ ನಡೆಸಿದರು. ಅಲ್ಲದೇ, ಪ್ರಸ್ತುತ ಬೆಳವಣಿಗೆ (Current Development) ಬಗ್ಗೆ ಈಶ್ವರಪ್ಪ ಜತೆ ಚರ್ಚೆ ನಡೆಸಿ ಅವರಿಗೆ ವಿಚಲಿತರಾಗದಂತೆ ಧೈರ್ಯ ತುಂಬಿದ್ದಾರೆ.

‘ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡುತ್ತಿದ್ದೇವೆ’

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪ್ರತಿ ಹುಣ್ಣಿಮೆಯ ದಿನ ಮನೆಯಲ್ಲಿ ವಿಶೇಷ ಪೂಜೆ ಇರುತ್ತದೆ. ಇಂದೂ ಹುಣ್ಣಿಮೆ ಪೂಜೆ ಜತೆಗೆ ಸತ್ಯನಾರಾಯಣ ಪೂಜೆ ಮಾಡುತ್ತಿದ್ದೆವು. ಇದೇ ವೇಳೆ 10ಕ್ಕೂ ಹೆಚ್ಚು ಶ್ರೀಗಳು ನಮ್ಮ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರುಗಳು ಬರುವ ಕಲ್ಪನೆ ಸಹ ನನಗೆ ಇರಲಿಲ್ಲ‌. ಪೂಜೆಯ ಸಮಯಕ್ಕೆ ದೇವರ ರೀತಿ ಬಂದು ಅವರೆಲ್ಲರೂ ಆಶೀರ್ವಾದ ಮಾಡಿದ್ದಾರೆ. ಯಾವ ಲೋಪವೂ ಇಲ್ಲದೇ, ನಿರ್ದೋಷಿಯಾಗಿ ಹೊರಗೆ ಬರ್ತೀರಾ ಎಂದು ಅಭಯ ನೀಡಿದ್ದಾರೆ ಎಂದರು.

'ನನಗೆ ಆನೆ ಬಲದಷ್ಟು ಧೈರ್ಯ ಬಂದಿದೆ'

ನಾನೇನು ಕುಗ್ಗಿರಲಿಲ್ಲ. ನನಗೆ ಆನೆ ಬಲದಷ್ಟು ಧೈರ್ಯ ಬಂದಿದೆ. ಎಲ್ಲಾ ಶ್ರೀಗಳು ಅಶೀರ್ವಾದ ಮಾಡಿದ್ದು, ನನಗೆ ಪೂರ್ವ ಜನ್ಮದ ಪುಣ್ಯ. ಇದರ ಜೊತೆಗೆ ಮಂತ್ರಾಲಯದ ಶ್ರೀಗಳು ಕರೆ ಮಾಡಿದ್ದರು. ನೀವು ರಾಯರ ಭಕ್ತರು. ನಿಮಗೆ ಒಳ್ಳೆಯದಾಗುತ್ತೇ ಎಂದು ಹರಸಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.


ಈಶ್ವರಪ್ಪಗೆ ಸ್ವಾಮೀಜಿಗಳ ಅಭಯ

ಯಾವ ಲೋಪವೂ ಇಲ್ಲದೇ, ನಿರ್ದೋಷಿಯಾಗಿ ಹೊರಗೆ ಬರ್ತೀರಾ ಎಂದು ಸ್ವಾಮೀಜಿಗಳು ಅಭಯ ನೀಡಿದ್ದಾರೆ. ನಾನೇನು ಕುಗ್ಗಿರಲಿಲ್ಲ. ನನಗೆ ಆನೆಬಲದಷ್ಟು ಧೈರ್ಯ ಬಂದಿದೆ. ಎಲ್ಲಾ ಶ್ರೀಗಳು ಆಶೀರ್ವಾದ ಮಾಡಿದ್ದು, ನನಗೆ ಪೂರ್ವ ಜನ್ಮದ ಪುಣ್ಯವಾಗಿದೆ. ಜೊತೆಗೆ ಮಂತ್ರಾಲಯದ ಶ್ರೀಗಳು ಕರೆ ಮಾಡಿದ್ದರು. ರಾಯರ ಭಕ್ತರು ನೀವು. ನಿಮಗೆ ಒಳ್ಳೆಯದಾಗುತ್ತದೆ ಎಂದು ಹರಸಿದ್ದಾರೆ ಎಂದು ತಿಳಿಸಿದರು.


ಇದನ್ನೂ ಓದಿ: Vijayanagar: ಕನ್ನಡ ವಿವಿಯಲ್ಲಿ ಎಂ.ಪಿ ಪ್ರಕಾಶ್​ ಹೆಸರಲ್ಲಿ ಸಂಶೋಧನಾ ಕೇಂದ್ರ ; ಸಿಎಂ ಬೊಮ್ಮಾಯಿ ಘೋಷಣೆ

ನಿನ್ನೆ ರಾತ್ರಿ ಸಚಿವ ಸ್ಥಾನಕ್ಕೆ ರಾಜೀನಾಮೆ

ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ ಈಶ್ವರಪ್ಪ ಶುಕ್ರವಾರ ರಾತ್ರಿ ಸಿಎಂ ಬೊಮ್ಮಾಯಿಗೆ ರಾಜೀನಾಮೆ ಪತ್ರವನ್ನು ನೀಡಿದ್ದರು.

ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ

ಬೆಂಗಳೂರಿಗೆ ಬರುವುದಕ್ಕೂ ಮುನ್ನ ಕೆ.ಎಸ್​ ಈಶ್ವರಪ್ಪ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ರು. ಈ ವೇಳೆ ಮಾತಾಡಿದ ಈಶ್ವರಪ್ಪ, ಇಡೀ ರಾಜ್ಯದ ಸಾಮಾನ್ಯ ಜನರಿಗೆ ಗೊತ್ತಾಗಿದೆ, ಇದು ಷಡ್ಯಂತ್ರ ಎಂದು. ಕರ್ನಾಟಕದ ಎಲ್ಲಾ ಪೂಜ್ಯ ಸ್ವಾಮೀಜಿಗಳು ನನಗೆ ಆಶೀರ್ವಾದ ಮಾಡ್ತಿದ್ದಾರೆ. ಈ ಷಡ್ಯಂತ್ರದಿಂದ ನೀವು ನಿರ್ದೋಶಿಯಾಗಿ ಹೊರ ಬರ್ತೀರಾ ಎಂದಿದ್ದಾರೆ. ಬಿಜೆಪಿಯ ರಾಷ್ಟ್ರ,ರಾಜ್ಯ ನಾಯಕರು, ಸಚಿವರು, ಶಾಸಕರು ಎಲ್ಲಾ ಕಾರ್ಯಕರ್ತರಿಗೆ ಇರಿಸುಮುರಿಸು ಆಗಬಾರದು ಎಂಬ ಒಂದೇ ಕಾರಣಕ್ಕೆ ನಾನು ರಾಜೀನಾಮೆ ಕೊಡ್ತಿದ್ದೇನೆ ಎಂದಿದ್ರು.

ಇದನ್ನೂ ಓದಿ: Congress ಅಹೋರಾತ್ರಿ ಧರಣಿ ಅಂತ್ಯ; K.S ಈಶ್ವರಪ್ಪ ಸಾಮಾನ್ಯ ವ್ಯಕ್ತಿಯಲ್ಲ, ಸಾಕ್ಷಿ ನಾಶ ಮಾಡಬಲ್ಲರು- ಸಿದ್ದರಾಮಯ್ಯ

ತನಿಖೆಯಿಂದ ಎಲ್ಲಾ ಬಯಲಾಗುತ್ತೆ

ಉನ್ನತ ಮಟ್ಟದ ಅಧಿಕಾರಿಗಳನ್ನ ಈಗಾಗಲೇ ನೇಮಕ ಮಾಡಿದ್ದಾರೆ. ಸಿಎಂಗೆ ಆದಷ್ಟು ಬೇಗ ತನಿಖೆಯ ವರದಿ ಹೊರಬರುವ ನಿಟ್ಟಿನಲ್ಲಿ ಮನವಿ ಮಾಡಿದ್ದೇನೆ. ತುಂಬಾ ಸ್ಪಷ್ಟವಾಗಿ ಗೊತ್ತಾಗಿದೆ ಇದು ಒಂದು ಷಡ್ಯಂತ್ರ, ಸಂತೋಷ್ ಪಾಟೀಲ್ ಇವತ್ತು ನಮ್ಮ ಜೊತೆ ಇಲ್ಲ. ಆ ಬಗ್ಗೆನು ಎರಡೆರಡು ಅಭಿಪ್ರಾಯ ಬರ್ತಿದೆ. ಅದು ಆತ್ಮಹತ್ಯೆಯೋ ಕೊಲೆಯೋ ಅನ್ನೋದನ್ನ ಅನೇಕರು ಹೇಳ್ತಿದ್ದಾರೆ. ಕೊಲೆಗಾರರು ಯಾರು ಅಂತ ಹೊರ ಬರಬೇಕಿದೆ. ಷಡ್ಯಂತ್ರದ ಹಿಂದೆ ಯಾರಿದ್ದಾರೆ ಅನ್ನೋದು ಹೊರ ಬರಬೇಕಿದೆ ಎಂದ್ರು.
Published by:Pavana HS
First published: