ಓಟು ಹಾಕಿಸಿಕೊಳ್ಳಲು ಸ್ವಾಮೀಜಿಗಳು ಬೇಕು, ಸಚಿವ ಸ್ಥಾನ ಕೇಳಲು ಮಾತ್ರ ಬೇಡವಾ?; ವಚನಾನಂದ ಶ್ರೀಗೆ ಡಿಕೆಶಿ ಸಾಂತ್ವನ

ನಾವು ರಾಜಕಾರಣಿಗಳಾದವರು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ಸ್ವಾಮಿಗಳೇ ನೀವೇನು ಬೇಜಾರು ಮಾಡಿಕೊಳ್ಳಬೇಡಿ.  ನಡೆಯುವವರು ಎಡವುತ್ತಾರೆ, ಹೊರತು ನಡೆಯದಿರುವವರು ಎಡವಲು ಸಾಧ್ಯವಿಲ್ಲ.  ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ವಚನಾನಂದ ಸ್ವಾಮೀಜಿಗೆ ಸಮಾಧಾನ ಹೇಳಿದರು.

HR Ramesh | news18-kannada
Updated:January 15, 2020, 8:18 PM IST
ಓಟು ಹಾಕಿಸಿಕೊಳ್ಳಲು ಸ್ವಾಮೀಜಿಗಳು ಬೇಕು, ಸಚಿವ ಸ್ಥಾನ ಕೇಳಲು ಮಾತ್ರ ಬೇಡವಾ?; ವಚನಾನಂದ ಶ್ರೀಗೆ ಡಿಕೆಶಿ ಸಾಂತ್ವನ
ಡಿ.ಕೆ. ಶಿವಕುಮಾರ್
  • Share this:
ದಾವಣಗೆರೆ: ಹರಿಹರದಲ್ಲಿ ನಡೆದ ಹರ ಜಾತ್ರೆ ಸಮಾರಂಭದಲ್ಲಿ ಪಂಚಮಸಾಲಿ ಮಠದ ಸ್ವಾಮೀಜಿ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ನಡುವಿನ ಮಾತಿನ ಚಕಮಕಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್ ಅವರು ಅಧಿಕಾರದಲ್ಲಿ ಇರುವವರು ತಾಳ್ಮೆ ಕಳೆದುಕೊಂಡರೆ ಹೇಗೆ ಎಂದು ಹೇಳುವ ಮೂಲಕ ಬಿಎಸ್​ವೈಗೆ ಟಾಂಗ್ ನೀಡಿದ್ದಾರೆ.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಹರ ಜಾತ್ರೆಯ ಎರಡನೇ ದಿನದ ಕಾರ್ಯಕ್ರಮ ಪಾಲ್ಗೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ನಾವು ಮಠಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತೇವೆ. ನಮ್ಮ ಅನುಕೂಲಕ್ಕೆ ಮಠಗಳನ್ನು ಬಳಸಿಕೊಳ್ಳುತ್ತೇವೆ. ಅವರಿಗೂ ಒತ್ತಡವಿರುತ್ತದೆ. ನಾವು ರಾಜಕಾರಣಿಗಳಾದವರು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ಸ್ವಾಮಿಗಳೇ ನೀವೇನು ಬೇಜಾರು ಮಾಡಿಕೊಳ್ಳಬೇಡಿ.  ನಡೆಯುವವರು ಎಡವುತ್ತಾರೆ, ಹೊರತು ನಡೆಯದಿರುವವರು ಎಡವಲು ಸಾಧ್ಯವಿಲ್ಲ.  ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ವಚನಾನಂದ ಸ್ವಾಮೀಜಿಗೆ ಸಮಾಧಾನ ಹೇಳಿದರು.

ಜೀವನದಲ್ಲಿ ಏನೇ ಮಾಡಿದರೂ ನಮ್ಮ ರೀತಿಯಲ್ಲಿ ಮಾಡಬೇಕು. ಭಕ್ತ ಮತ್ತು ಭಗವಂತ ನಡುವೆ ಪೂಜಾರಿ ಇರುತ್ತಾರೆ. ದೇವರು ಮತ್ತು ನಮ್ಮ ಮಧ್ಯೆ ನಿಮ್ಮನ್ನು ಇಟ್ಟಿದ್ದಾರೆ. ಓಟು ಹಾಕಿಸಲು ಅವರು ಬೇಕು, ಮಾತು ಕೇಳಲ್ಲ ಅಂದರೆ ಹೇಗೆ. ನಿಮ್ಮ ಕೆಲಸ ನೀವು ಮಾಡಿ ಎಂದು ವಚನಾನಂದ ಸ್ವಾಮೀಜಿಗೆ ಸಲಹೆ ನೀಡಿದರು. ಮುಂದುವರೆದು, ನಾನು ಮಾತನಾಡಿದರೆ ವಿವಾದ ಹೆಚ್ಚಾಗುತ್ತಿದೆ. ಮಾಧ್ಯಮದವರು ಯಾವುದೋ ತುಣುಕು ಹಿಡಿದುಕೊಂಡು ಎಳೆದಾಡುತ್ತಾರೆ. ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೆ.  ನಿಮ್ಮೆಲ್ಲರ ಒತ್ತಾಯಕ್ಕೆ ಒಂದೈದು ನಿಮಿಷ ಮಾತನಾಡುತ್ತೇನೆ. ಧರ್ಮ ಯಾವುದಾದರೂ ಸಾರ ಒಂದೇ. ದೈವ ಯಾವುದಾದರೂ ಭಕ್ತಿ ಒಂದೇ. ನಾಮ ನೂರಾದರೂ ದೈವ ಒಂದೇ ಎಂದು ನಂಬಿದವನು ನಾನು. ನಾವು ಆರ್ಜಿ ಹಾಕೊಂಡು ನಮ್ಮ ಜಾತಿಯಲ್ಲಿ ಹುಟ್ಟಿಲ್ಲ.  ಸ್ವಾಮಿಗಳು ಅರ್ಜಿ ಹಾಕೊಂಡು ಹುಟ್ಟಿಲ್ಲ. ಯಾವುದೇ ಧರ್ಮದಲ್ಲಿ ದ್ವೇಷ ಮಾಡು ಎಂದು ಹೇಳಿಲ್ಲ. ನಾವು ನಮ್ಮ ಕೆಲಸದ ಜತೆ ಸಂಬಂಧಗಳನ್ನು ಜೋಡಿಸುವುದು ಒಂದು ಕಲೆ. ಅದನ್ನು ಉಳಿಸಿಕೊಂಡು ಹೋಗುವುದು ಸಾಧನೆ. ಒ‍ಳ್ಳೆಯವರು, ಕೆಟ್ಟವರು ಎಂದು ತೀರ್ಮಾನ ಮಾಡುವುದು ಪರಮಾತ್ಮ, ನಮ್ಮ ಆತ್ಮ. ಪರೋಪಕಾರವೇ ಈ ದೇಹದ ಧರ್ಮ.
ಕೇವಲ ನಮ್ಮ ಸ್ವಾರ್ಥಕ್ಕಾಗಿ ಮಾತ್ರ ನಮ್ಮ ದೇಹ ಬಳಕೆಯಾಗುತ್ತದೆ. ಸ್ವಾಮೀಜಿಗಳು ಮಾತ್ರ ಮನುಕುಲದ ಶಾಂತಿಗೆ ಕೆಲಸ ಮಾಡುತ್ತಾರೆ. ಓಟು ಹಾಕಿಸಲು, ಬೇರೆಯ ಕೆಲಸಗಳಿಗೆ ಸ್ವಾಮೀಜಿಗಳು ಬೇಕು. ಸಚಿವ ಸ್ಥಾನ ಕೇಳಲು ಮಾತ್ರ ಬೇಡವಾ. ನೀವು ಧೈರ್ಯವಂತರು ನಿಮ್ಮ ಕೆಲಸ‌ ನೀವು ಮಾಡಿ ತಲೆಕೆಡಿಸಿಕೊಳ್ಳಬೇಡಿ. ಪಂಚಮಸಾಲಿ ಪೀಠದ ಜೊತೆ‌ ನಾನಿದ್ದೇನೆ ಎಂದು ತಿಳಿಸಲು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಸಮಾಜ, ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದನ್ನು ಓದಿ: 17 ಜನರನ್ನು ಮಂತ್ರಿ ಮಾಡೋದು ಹೇಗೆ ಅನ್ನೋ ಚಿಂತೆ ನನಗೆ, ಈ ವೇಳೆ ಶ್ರೀಗಳು ಆಗ್ರಹಿಸಿದರೆ ಹೇಗೆ?; ಸಿಎಂ ಬಿಎಸ್​ವೈ
Published by: HR Ramesh
First published: January 15, 2020, 8:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading