Doddaballapur: ಸ್ವಾಮೀಜಿ ಮಾತು ನಂಬಿ ಶನಿ ಮಹಾತ್ಮ ದೇಗುಲಕ್ಕೆ ಮಾಂಸದ ಹಾರ!

ಹೂಗಳ ಮಧ್ಯೆ ಮಾಂಸ ಇರಿಸಿರುವ ಕಿಡಿಗೇಡಿಗಳು

ಹೂಗಳ ಮಧ್ಯೆ ಮಾಂಸ ಇರಿಸಿರುವ ಕಿಡಿಗೇಡಿಗಳು

ಕುಕೃತ್ಯ ಎಸಗಿದಾತನ ಹೆಸರು ಮುನಿರಾಜು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಂಬಳೀಪುರ ನಿವಾಸಿ. ಈ ಮುನಿರಾಜು ಈಗ ಸ್ವಾಮೀಜಿಯೊಬ್ಬನ ಮಾತು ನಂಬಿ ಶನಿಮಹಾತ್ಮಸ್ವಾಮಿಗೆ ಗುಲಾಬಿ ಹಾರದ ಜೊತೆ ಮಾಂಸದ ತುಂಡುಗಳನ್ನ ಇಟ್ಟ ಹಾರ ಸಮರ್ಪಣೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Chikkaballapura (Chik Ballapur), India
  • Share this:

    ದೊಡ್ಡಬಳ್ಳಾಪುರ(ಮಾ.13): ಶನಿಮಹಾತ್ಮ ಹೆಗಲೇರಿದ್ರೆ ಅಷ್ಟಕಷ್ಟಗಳು ಉಂಟಾಗುತ್ತವೆ. ಶನಿ ವಕ್ಕರಿಸಿದ್ರೇ ದಿನಾ ಏನೋ ಒಂದು ಸಮಸ್ಯೆ, ಹೀಗಾಗಿ ಶನಿಮಹಾತ್ಮಸ್ವಾಮಿ ನಿನಗೆ ಹೆಗಲೇರಿದ್ದಾನೆ. ನೀನು ಸ್ವಾಮಿಗೆ ಮಾಂಸದ ನೈವೇದ್ಯ ಮಾಡು ಹೂವಿನ ಹಾರದ ಜೊತೆಯಾದ್ರೂ ಸ್ವಾಮಿಗೆ ಮಾಂಸ ಸಮರ್ಪಣೆ ಮಾಡು ಅಂತ ಸ್ವಾಮೀಜಿಯ ಮಾತು ಕೇಳಿದ ಯುವಕ ಈಗ ಮಾಡಬಾರದ ಕೆಲಸ ಮಾಡಿ ಪೊಲೀಸರ ಅತಿಥಿಯಾಗಿ ಜೈಲು ಸೇರುತ್ತಿದ್ದಾನೆ.


    ಹೌದು ಇಂತಹುದ್ದೊಂದು ಕೃತ್ಯ ಎಸಗಿದಾತನ ಹೆಸರು ಮುನಿರಾಜು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಂಬಳೀಪುರ ನಿವಾಸಿ. ಈ ಮುನಿರಾಜು ಈಗ ಸ್ವಾಮೀಜಿಯೊಬ್ಬನ ಮಾತು ನಂಬಿ ಶನಿಮಹಾತ್ಮಸ್ವಾಮಿಗೆ ಗುಲಾಬಿ ಹಾರದ ಜೊತೆ ಮಾಂಸದ ತುಂಡುಗಳನ್ನ ಇಟ್ಟ ಹಾರ ಸಮರ್ಪಣೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.


    ಇದನ್ನೂ ಓದಿ:  Vijayapura: ಶ್ರೀಶೈಲ ಭಕ್ತರ ಸೇವೆಯಲ್ಲೇ ಇವರಿಗೆ ಸಿಗುತ್ತೆ ಮಲ್ಲಿಕಾರ್ಜುನನ ಕೃಪೆ!


    ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕ ಮಧುರೆ ಗ್ರಾಮದ ಪುರಾತನ ಪ್ರಸಿದ್ದ ಶ್ರೀ ಶನಿಮಹಾತ್ಮಸ್ವಾಮಿ ದೇವಾಲಯಕ್ಕೆ ಕಳೆದ ಎರಡು ತಿಂಗಳ ಹಿಂದೆಯೂ ಸಹ ಇಬ್ಬರು ಯುವಕರು ಆಗಮಿಸಿ ಬೃಹತ್ ಗಾತ್ರದ ಗುಲಾಬಿ ಹೂವಿನ ಹಾರಗಳನ್ನ ಕೊಟ್ಟು ಹೋಗಿದ್ದರು. ಆಗ ಅರ್ಚಕರು ಹಾರ ತೆಗೆದು ನೋಡಿದಾಗ ಗುಲಾಬಿ ಹೂವಿನ ಹಾರದ ಮಧ್ಯೆ ಮಾಂಸದ ತುಂಡುಗಳು ಇರೋದನ್ನ ಕಂಡು ಹಾರವನ್ನು ಹೊರಗೆ ಎಸೆದಿದ್ದರು. ಇಡೀ ದೇವಾಲಯವನ್ನ ಶುಚಿಗೊಳಿಸಿ ಪುನಃ ಪೂಜೆ ಪುನಸ್ಕಾರ ಮಾಡಿದ್ರು.


    ಅಂದಿನಿಂದ ಎಚ್ಚೆತ್ತ ದೇವಾಲಯದ ಆಡಳಿತ ಮಂಡಳಿ ದೇವಾಲಯಕ್ಕೆ ಬರೋ ಭಕ್ತರ ಹಾರವನ್ನ ಪರಿಶೀಲನೆ ಮಾಡಿ ಒಳಗೆ ಬಿಡೋದು ಸೇರಿದಂತೆ ಪ್ಲಾಸ್ಟಿಕ್ ಕವರ್ ಇರುವ ಹಾಗೂ ಥರ್ಮಾಕೋಲ್ ದಿಂಡು ಇರುವ ಹಾರವನ್ನ ಸಂಪೂರ್ಣ ನಿಷೇಧ ಮಾಡಿತ್ತು. ಯಾರಾದ್ರೂ ಹಾರ ತಂದ್ರೂ ಪರಿಶೀಲನೆ ಮಾಡೋದಕ್ಕೆ ಸಿಬ್ಬಂದಿಯನ್ನ ಸಹ ನೇಮಕ ಮಾಡಲಾಗಿತ್ತು. ಈ ಬಗ್ಗೆ ಹಿಂದೆಯೇ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರನ್ನ ಸಹ ದಾಖಲಿಸಲಾಗಿತ್ತು. ಆರೋಪಿಗಳ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನ ಸಹ ಒದಗಿಸಲಾಗಿತ್ತು. ಆದ್ರೂ ಆರೋಪಿಗಳು ಪತ್ತೆಯಾಗಿರಲಿಲ್ಲ.


    ಸದ್ಯ ನಿನ್ನೆ ಸಂಜೆಯೂ ಇದೇ ಯುವಕರು ಈ ಹಿಂದೆ ಮಾಡಿದ ಹಾಗೆ ಅದೇ ಹೂವಿನ ಹಾರ ತಂದಿದ್ದು, ದೇವಾಲಯದ ಸಿಬ್ಬಂದಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.


    ಇದನ್ನೂ ಓದಿ: ಶನಿ ಮಹಾತ್ಮನ ದೇಗುಲದಲ್ಲಿ ಮಾಂಸ ತಂದಿಟ್ಟ ಕಿಡಿಗೇಡಿಗಳು


    ಸದ್ಯ ಹೊಸಕೋಟೆ ತಾಲೂಕಿನ ಕಂಬಳೀಪುರ ಗ್ರಾಮದ ಮುನಿರಾಜು ಹಾಗೂ ಈತನ ಜೊತೆ ಆಟೋ ಚಾಲಕ ಸೋಮಶೇಖರ್ ಎಂಬಾತನನ್ನ ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ಆರೋಪಿ ಮುನಿರಾಜು ವಾಹನ ಅಪಘಾತಕ್ಕೀಡಾಗಿದ್ದು, ನನಗೆ ಶನಿ ಹೆಗಲೇರಿದೆ, ಹೀಗಾಗಿ ನೀನು ಶನಿಮಹಾತ್ಮಸ್ವಾಮಿಗೆ ಮಾಂಸದ ಸಮೇತ ಹೂವಿನ ಹಾರ ಸಮರ್ಪಣೆ ಮಾಡಿದ್ರೆ ಶನಿ ದೋಷ ನಿವಾರಣೆ ಆಗುತ್ತೆ ಅಂತ ಸ್ವಾಮೀಜಿ ಹೇಳಿದ್ರು. ಸ್ವಾಮೀಜಿಯ ಮಾತು ನಂಬಿ ನಾನು ಈ ಕೃತ್ಯ ನಡೆಸಿರೋದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.




    ಸದ್ಯ ಮುನಿರಾಜು ವಿಚಾರಣೆ ನಂತರ ಸ್ವಾಮೀಜಿಯ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ..ಅದೇನೇ ಆದ್ರೂ ಶನಿ ಹೆಗಲೇರಿದೆ ಸ್ವಾಮೀಜಿಯ ಮಾತು ನಂಬಿದ ಯುವಕ ಈಗ ಮಾಡಬಾರದ್ದನ್ನ ಮಾಡಿ ನಿಜವಾಗಲೂ ಶನಿ ಹೆಗಲೇರಿಸಿಕೊಂಡಿದ್ದಾನೆ ಅಂತ ಭಕ್ತರು ಜನ ಗುಸು ಗುಸು ಮಾತಾಡುವಂತಾಗಿದೆ.


    -ಮನು ಹಾದ್ರೀಪುರ, ನ್ಯೂಸ್​ 18 ಕನ್ನಡ

    Published by:Precilla Olivia Dias
    First published: