ಸಾಲ ತೀರಿಸಲು ಸ್ವಾಮೀಜಿ ಜೊತೆ ಸಹಕರಿಸುವಂತೆ ಹೆಂಡತಿಗೆ ಒತ್ತಾಯಿಸಿದ ಗಂಡ

news18
Updated:September 8, 2018, 8:42 PM IST
ಸಾಲ ತೀರಿಸಲು  ಸ್ವಾಮೀಜಿ ಜೊತೆ ಸಹಕರಿಸುವಂತೆ ಹೆಂಡತಿಗೆ ಒತ್ತಾಯಿಸಿದ ಗಂಡ
news18
Updated: September 8, 2018, 8:42 PM IST
ಪುಟ್ಟಪ್ಪ, ನ್ಯೂಸ್​ 18 ಕನ್ನಡ

ಮೈಸೂರು (ಸೆ.9) : ಸಾಲ ತೀರಿಸುವ ಸಲುವಾಗಿ ಸ್ವಾಮೀಯೊಂದಿಗೆ ಸಹಕರಿಸುವಂತೆ ಪತಿಯೇ ಪತ್ನಿಗೆ ಹೇಳಿ ಆಕೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಕಾರಣನಾಗಿದ್ದಾನೆ,

ರಾಮಕೃಷ್ಣನಗರದಲ್ಲಿ ನೆಲೆಸಿರುವ ರಾಜೇಶ್ ಬೋರೆ ಎಂಬಾತ ಸ್ವಾಮೀಜಿ ಅವರಿಗೆ ನಿಕಟವರ್ತಿ ಪತಿಯು ಸೆ. 4ರಂದು ಚಾತುರ್ಮಸ್ಯ ಪೂಜೆಗೆಂದು ಮಧ್ಯರಾತ್ರಿ ಸ್ವಾಮೀಜಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಸ್ವಾಮೀಜಿಗೆ ಪೂಜೆಯಲ್ಲಿ ಸಹಕರಿಸಿದರೆ ಸಾಲವೆಲ್ಲ ತೀರುತ್ತದೆ ಎಂದು ಮಹಿಳೆಗೆ ಸಹಕರಿಸುವಂತೆ ಒತ್ತಾಯ ಮಾಡಿದ್ದಾನೆ.

ಈ ಮಧ್ಯೆ ಪೂಜೆ ನೆವದಲ್ಲಿ ಸ್ವಾಮೀಜಿ ಲೈಂಗಿಕವಾಗಿ ಕಿರಕುಳ  ನೀಡಿದ್ದು, ಕೊಲೆ ಬೆದರಿಕೆಯನ್ನು ಹಾಕಿದ್ದಾನೆ ಎಂದು ಆತನಿಂದ ತಪ್ಪಿಸಿಕೊಂಡು ಬಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354 ಎ ಮತ್ತು ಬಿ ಪ್ರಕರಣವನ್ನು ಕುವೆಂಪುನಗರ ಪೊಲೀಸರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಸ್ವಾಮೀಜಿ ಮತ್ತು ರಾಜೇಶ್​ ಬೋರೆ ನಾಪತ್ತೆಯಾಗಿದ್ದಾರೆ.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...