ಕೊಡಗು ಸಂತ್ರಸ್ತರಿಗೆ ಸ್ವಾಮೀಜಿಗಳಿಂದ ದೇಣಿಗೆ ಸಂಗ್ರಹ

news18
Updated:August 21, 2018, 10:27 PM IST
ಕೊಡಗು ಸಂತ್ರಸ್ತರಿಗೆ ಸ್ವಾಮೀಜಿಗಳಿಂದ ದೇಣಿಗೆ ಸಂಗ್ರಹ
news18
Updated: August 21, 2018, 10:27 PM IST
-ಚಂದ್ರಕಾಂತ್ ಸುಗಂಧಿ, ನ್ಯೂಸ್ 18ಕನ್ನಡ

ಬೆಳಗಾವಿ (ಆಗಸ್ಟ್ 21) : ಕೊಡಗು ನೆರೆ ಸಂತ್ರಸ್ಥರಿಗಾಗಿ ಸ್ವಾಮೀಜಿಗಳು ಸ್ವತಃ ಬೀದಿಗೆ ಇಳಿದು ಹೆಗಲಿಗೆ ಜೋಳಿಗೆ ಹಾಕಿ ನಿಧಿ ಸಂಗ್ರಹ ಮಾಡಿದರು. ನಿಡಸೋಸಿ ಸಿದ್ಧಸಂಸ್ಥಾನ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಹುಕ್ಕೇರಿ ಶ್ರೀ ಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಕೊಡಗಿನ ಜನತೆಗಾಗಿ ಹುಕ್ಕೇರಿ ತಾಲೂಕಿನ ಮಠ ಮಾನ್ಯಗಳ ಸ್ವಾಮೀಜಿಗಳು ನಿಧಿ ಸಂಗ್ರಹ ನಡೆಯಿತು.

ಕೇವಲ ಒಂದು ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಸ್ವಾಮೀಜಿಗಳು ಸಂಗ್ರಹ ಮಾಡಿದ್ದಾರೆ. ಹುಕ್ಕೇರಿ ಪಟ್ಟಣದ ಅಡವಿಸಿದ್ದೇಶ್ವರ ಮಠದಿಂದ ಪ್ರಾರಂಭವಾದ ನಿಧಿ ಸಂಗ್ರಹ ಪಾದಯಾತ್ರೆ ನಡೆಯಿತು. ಇಂದು ಹುಕ್ಕೇರಿಯಲ್ಲಿ ಪ್ರಾರಂಭವಾಗಿದ್ದು ನಾಳೆಯೂ ಸಹ ಮುಂದುವರೆಯಲಿದೆ.

ನಾಳೆ ಸಾಯಂಕಾಲ ಸಂಕೇಶ್ವರ ಪಟ್ಟಣದಲ್ಲಿ ಸ್ವಾಮೀಜಿಗಳು ಜೋಳಿಗೆ ಹಾಕಿ ನಿಧಿ ಸಂಗ್ರಹಕ್ಕೆ ಮುಂದಾಗಲಿದ್ದು ಸ್ವಾಮೀಜಿಗಳು ಸೇರಿಸುವ ಹಣವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕೊಡಗಿನ ಜನತೆಗೆ ನೀಡಲಿದ್ದಾರೆ.

ಇನ್ನು ಇದೆ ವೇಳೆ ಮಾತನಾಡಿದ ಶಿವಲಿಂಗೇಶ್ವರ ಸ್ವಾಮೀಜಿಗಳು ಮತ್ತು ಹುಕ್ಕೇರಿ ಮಠದ ಶಿವಾಚಾರ್ಯ ಸ್ವಾಮೀಜಿಗಳು ದೇವರಿಗೆ ದುಡ್ಡು ಖರ್ಚು ಮಾಡಿ ಅಭಿಷೇಕ ಮಾಡಿಸುವುದು ಕೇವಲ ನಮ್ಮ ಶಾಂತಿಗಾಗಿ ಆದರೆ ಇಂತಹ ಕಾರ್ಯ ಮಾಡುವುದು ಸಮಾಜದ ಒಳಿತಿಗಾಗಿ ಅಂತ ಹೇಳಿದರು. ಅಲ್ಲದೆ ಈ ವಿಚಾರದಲ್ಲಿ ರಾಜಕೀಯವನ್ನು ಬಿಟ್ಟು ಎಲ್ಲ ರಾಜಕಾರಣಿಗಳು ಕೊಡಗಿನ ಜನತೆಯ ಪುನರುಜ್ಜೀವನಕ್ಕೆ ಮುಂದಾಗಬೇಕು ಅಂತ ಹೇಳಿದರು.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...