• Home
  • »
  • News
  • »
  • state
  • »
  • ಗೋವು - ಗಂಗೆ ಸಂರಕ್ಷಣೆಯಾಗದ ಹೊರತು ಸ್ವದೇಸಿ ವಿಕಾಸ ಅಸಾಧ್ಯ; ಖ್ಯಾತ ಚಿಂತಕ ಕೆ.ಎನ್.ಗೋವಿಂದಾಚಾರ್ಯ

ಗೋವು - ಗಂಗೆ ಸಂರಕ್ಷಣೆಯಾಗದ ಹೊರತು ಸ್ವದೇಸಿ ವಿಕಾಸ ಅಸಾಧ್ಯ; ಖ್ಯಾತ ಚಿಂತಕ ಕೆ.ಎನ್.ಗೋವಿಂದಾಚಾರ್ಯ

ಖ್ಯಾತ ಚಿಂತಕ ಕೆ.ಎನ್.ಗೋವಿಂದಾಚಾರ್ಯ

ಖ್ಯಾತ ಚಿಂತಕ ಕೆ.ಎನ್.ಗೋವಿಂದಾಚಾರ್ಯ

ರೈತರ ಹೋರಾಟ ರಾಜಕೀಕರಣ ಆಗಬಾರದು. ಯಾರೂ ಸಹ ಅದನ್ನು ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳಬಾರದೆಂದರು

  • Share this:

ಕಲಬುರ್ಗಿ (ನ.4):  ಗೋವು ಹಾಗೂ ಗಂಗೆ ಸಂರಕ್ಷಣೆಯಾಗದ ಹೊರತು ಭಾರತ ದೇಶದಲ್ಲಿ ಸ್ವದೇಶಿ ವಿಕಾಸ ಆಗಲ್ಲ ಎಂದು ಖ್ಯಾತ ಚಿಂತಕ, ಭಾರತ ವಿಕಾಸ ಸಂಗಮದ ಸಂಸ್ಥಾಪಕ ಗೋವಿಂದಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಆರ್ಥಿಕತೆ ಮತ್ತು ರಾಜಕೀಯ ಕೇಂದ್ರಿಕೃತ ಆಗಬಾರದು. ಆದರೆ, ಕೇಂದ್ರಿಕೃತ ಆಗಿರೋದರಿಂದ ಭಾರತದ ಸ್ಥಿತಿ ಹೀಗಾಗಿದೆ. ಭಾರತದಲ್ಲಿ 127 ಇಕೋ ಕೃಷಿ ಹವಾಮಾನ ಬದಲಾವಣೆ ವಲಯಗಳಿವೆ. ಭಾರತ ದೇಶ ಶೇ.60 ರಷ್ಟು ವೈವಿಧ್ಯತೆ ಹೊಂದಿದೆ. ಮಾನವ ಕೇಂದ್ರೀತದ ಜೊತೆಗೆ ಪ್ರಕೃತಿ ಕೇಂದ್ರಿತ ವಿಕಾಸವೂ ಆಗಬೇಕಿತ್ತು. ಕಾಡು, ಭೂಮಿ, ನೀರು ಮತ್ತು ಜಾನುವಾರ ರಕ್ಷಣೆಯಾಗಬೇಕು. ಪ್ರತಿ ಜಿಲ್ಲೆಯಲ್ಲಿಯೂ ರಿಸೋರ್ಸ್ ಅಟ್ಲಾಸ್ ಸಿದ್ದರವಾಗಬೇಕು. ಗೋವು ಮತ್ತು ಗಂಗಾ ರಕ್ಷಣೆಯಾದರೆ ಮಾತ್ರ ಸ್ವದೇಸಿ ವಿಕಾಸವಾಗುತ್ತದೆ. ಈ ನಿಟ್ಟಿನಲ್ಲಿ ಭಾರತ ವಿಕಾಸ ಸಂಗಮದ ನೇತೃತ್ವದಲ್ಲಿ ಭಾರತೀಯ ಸಂಸ್ಕೃತಿ ಉತ್ಸವಗಳನ್ನು ನಡೆಸಲಾಗುತ್ತಿದೆ. ಮುಬರುವ 7ನೇ ಉತ್ಸವವನ್ನು 2025 ರಲ್ಲಿ  ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
 
ರೈತರ ಹೋರಾಟ ರಾಜಕೀಕರಣಗೊಳ್ಳಬಾರದು


ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ದೆಹಲಿ ಬಳಿ ರೈತರು ನಡೆಸಿರುವ ಹೋರಾಟ ರಾಜಕೀಯ ಸ್ವರೂಪ ಪಡೆದುಕೊಳ್ಳಬಾರದು. ರೈತರ ಹೋರಾಟ ರಾಜಕೀಕರಣ ಆಗಬಾರದು. ಯಾರೂ ಸಹ ಅದನ್ನು ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳಬಾರದೆಂದರು. ರೈತರು ತಮ್ಮ ಬೇಡಿಕೆಗಾಗಿ ಹೋರಾಟ ಮುಂದುವರಿಸಿದ್ದಾರೆ. ಎಂ.ಎಸ್.ಪಿ.ಗಿಂತ ಕಡಿಮೆ ದರಕ್ಕೆ ಮಾರುವ ಮತ್ತು ಖರೀದಿಸುವವನಿಗೆ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಮಾತುಕತೆ ಆರಂಭಗೊಂಡಿರೋದನ್ನು ಸ್ವಾಗತಿಸುತ್ತೇನೆ. ಆದರೆ ಸಾಮಾಜಿಕ ಜಾಲ ತಾಣಗಳು ಹೋರಾಟವನ್ನು ತನ್ನ ಟ್ರೋಲ್ ಗಳ ವೇದಿಕೆಯನ್ನಾಗಿಸಿಕೊಂಡಿದೆ. ಮನಬಂದಂತೆ ಟ್ರೋಲ್ ಗಳನ್ನು ಮಾಡಲಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು.


ಕೇಂದ್ರ ಸರ್ಕಾರ ರೈತರೊಂದಿಗೆ ಮಾತುಕತೆ ಮುಂದುವರೆಸಿದೆ. ರೈತರ ಜೊತೆ ಖುದ್ದು ಪ್ರಧಾನಿಯೇ ಮಾತನಾಡಬೇಕೆಂದಿಲ್ಲ. ಮೂವರು ಕೇಂದ್ರ ಸಚಿವರನ್ನು ಮಾತುಕತೆಗೆ ಕಳುಹಿಸಿಕೊಟ್ಟಿದ್ದಾರೆ. ಯಾರು ಗೋಲ್ ಮಾಡಿದ್ದಾರೆ ಎನ್ನೋದು ಮುಖ್ಯವಲ್ಲ. ಗೋಲ್ ಆಗೋದು ಮುಖ್ಯ ಅಷ್ಟೆ. ಹಾಗೆಯೇ ರೈತರ ಬೇಡಿಕೆ ಈಡೋರೋದು ಮುಖ್ಯ ವಿಷಯ. ರೈತರೂ ಸಹ ನಿರ್ಧಿಷ್ಟವಾದ ಬೇಡಿಕೆ ಇಟ್ಟುಕೊಳ್ಳಬೇಕು. ರೈತರಿಗೆ ಅನುಕೂಲವಾಗುವ ಅಂಶಗಳನ್ನು ವಿರೋಧಿಸೋದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Published by:Seema R
First published: