ಬೈಕ್ ಜಾಥಾ ಮೂಲಕ ಲೆಕ್ಕ ಪರಿಶೋಧಕರಿಂದ ಸ್ವಚ್ಛ ಭಾರತ ಅಭಿಯಾನ

ಸ್ವಚ್ಛ ಭಾರತ ಅಭಿಯಾನ

ಸ್ವಚ್ಛ ಭಾರತ ಅಭಿಯಾನ

ಬೈಕ್ ಜಾಥಾಗೆ ಹಿರಿಯ ಲೆಕ್ಕ ಪರಿಶೋಧಕರಾದ ಎಚ್. ಸುಂದರೇಶ್ ಅವರು ಚಾಲನೆ ನೀಡಿದರು. ಜಯನಗರದ ಶಾಲಿನಿ ಮೈದಾನದಿಂದ ರಾಜಾಜಿನಗರದವರೆಗೆ ಈ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

  • Share this:

ಬೆಂಗಳೂರು(ಅ.04): ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ ನಾಯಕತ್ವ ಮತ್ತು ಕೌಶಲ್ಯ ಅಭಿವೃದ್ಧಿ ಸಮಿತಿಯ ವತಿಯಿಂದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೈಕ್ ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು.

ಬೈಕ್ ಜಾಥಾಗೆ ಹಿರಿಯ ಲೆಕ್ಕ ಪರಿಶೋಧಕರಾದ ಎಚ್. ಸುಂದರೇಶ್ ಅವರು ಚಾಲನೆ ನೀಡಿದರು. ಜಯನಗರದ ಶಾಲಿನಿ ಮೈದಾನದಿಂದ ರಾಜಾಜಿನಗರದವರೆಗೆ ಈ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ಬಳಿಕ ರಾಜಾಜಿನಗರದ ಬಾಲವನ ಉದ್ಯಾನವನ್ನು ಸ್ವಚ್ಛ ಮಾಡಲಾಯಿತ್ತು. ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

top videos
    First published: