• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಚಾಮರಾಜನಗರದಲ್ಲಿ ಭಾರೀ ಮಳೆ - ಇನ್ನೂ ಭರ್ತಿಯಾಗದ ಸುವರ್ಣಾವತಿ - ಚಿಕ್ಕಹೊಳೆ ಅವಳಿ ಜಲಾಶಯ

ಚಾಮರಾಜನಗರದಲ್ಲಿ ಭಾರೀ ಮಳೆ - ಇನ್ನೂ ಭರ್ತಿಯಾಗದ ಸುವರ್ಣಾವತಿ - ಚಿಕ್ಕಹೊಳೆ ಅವಳಿ ಜಲಾಶಯ

ಚಾಮರಾಜನಗರದಲ್ಲಿ ಭಾರೀ ಮಳೆ - ಇನ್ನೂ ಭರ್ತಿಯಾಗದ ಸುವರ್ಣಾವತಿ - ಚಿಕ್ಕಹೊಳೆ ಅವಳಿ ಜಲಾಶಯ

ಚಾಮರಾಜನಗರದಲ್ಲಿ ಭಾರೀ ಮಳೆ - ಇನ್ನೂ ಭರ್ತಿಯಾಗದ ಸುವರ್ಣಾವತಿ - ಚಿಕ್ಕಹೊಳೆ ಅವಳಿ ಜಲಾಶಯ

ಸುವರ್ಣಾವತಿ ಜಲಾಶಯ ಭರ್ತಿಯಾದರೆ ಎಡ ಮತ್ತು ಬಲದಂಡೆಗಳ ಮೂಲಕ ನೀರು ಹರಿಸಿ 7000 ಎಕರೆ ಪ್ರದೇಶದಲ್ಲಿ ಭತ್ತ, ಜೋಳ, ರಾಗಿ ಸೇರಿದಂತೆ ಆಹಾರ ಬೆಳೆಗಳನ್ನ ಬೆಳೆಯಬಹುದಾಗಿತ್ತು. ಇನ್ನು ಚಿಕ್ಕಹೊಳೆ ಜಲಾಶಯದ ಎಡ ಮತ್ತು ಬಲ ದಂಡೆ ನಾಲೆಗಳ ಮೂಲಕ ನೀರು ಹರಿಸಿದರೆ ಸುಮಾರು 4000 ಎಕರೆ ಪ್ರದೇಶದಲ್ಲಿ ಕೃಷಿ ಮಾಡಬಹುದಾಗಿದೆ.

ಮುಂದೆ ಓದಿ ...
  • Share this:

ಚಾಮರಾಜನಗರ(ಸೆ.06): ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು ನೀರಿನಿಂದ ತುಂಬಿ ನಳ ನಳಿಸುತ್ತಿವೆ. ಕೆರೆಕಟ್ಟೆಗಳು, ನದಿ, ತೊರೆ, ಕಾಲುವೆಗಳು ತುಂಬಿ ಹರಿಯುತ್ತಿವೆ. ಆದರೆ ಬರದ ನಾಡು ಚಾಮರಾಜನಗರ ಜಿಲ್ಲೆಯ ಜೋಡಿ ಜಲಾಶಯಗಳು ಮಾತ್ರ ನೀರಿಲ್ಲದೆ ಬಣಗುಡುತ್ತಿವೆ. ಕಾವೇರಿ ನದಿ ಹರಿಯುವ ಗಡಿಭಾಗದಲ್ಲಿ ಈ ದುಸ್ಥಿತಿ ಇರುವುದು ಈ ಭಾಗದ ರೈತರಲ್ಲಿ ನಿರಾಸೆ ಮೂಡಿಸಿದೆ. ಕಳೆದ ಮೂರ್ನಾಲ್ಕು ವರ್ಷಗಳಿಗೆ ಹೋಲಿಸಿದರೆ ಚಾಮರಾಜನಗರ ಜಿಲ್ಲೆಗೆ ಈ ಬಾರಿ ಮಳೆ ನೀರೀಕ್ಷಿತ ಪ್ರಮಾಣದಲ್ಲಿ ಬಿದ್ದಿದೆ. ಸಹಜವಾಗಿಯೇ ರೈತರು ಹರ್ಷಗೊಂಡಿದ್ದಾರೆ. ಆದರೆ ಜಿಲ್ಲೆಯ ಅವಳಿ ಜಲಾಶಯಗಳಾದ  ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ಮಾತ್ರ ಇನ್ನೂ ಭರ್ತಿಯಾಗಿಲ್ಲ. ಇದು ಅಚ್ಚುಕಟ್ಟಿನ ರೈತರ ನೆಮ್ಮದಿ ಕೆಡಿಸಿದೆ.


ಸುವರ್ಣಾವತಿ ಜಲಾಶಯದ ಗರಿಷ್ಟ ಮಟ್ಟ2455 ಅಡಿಯಾಗಿದ್ದು, ಪ್ರಸ್ತುತ 2434 ಅಡಿಗಳು ಮಾತ್ರ ನೀರಿದೆ. ಇನ್ನೂ 21 ಅಡಿ ನೀರು ಬರಬೇಕಾಗಿದೆ.  ಇನ್ನು ಚಿಕ್ಕಹೊಳೆ ಜಲಾಶಯದ ಗರಿಷ್ಟ ಮಟ್ಟ 2474 ಅಡಿಗಳಾಗಿದ್ದು, ಪ್ರಸ್ತುತ ಕೇವಲ 2451 ಅಡಿ ನೀರಿದೆ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಮಾಹಿತಿ ನೀಡಿದ್ದಾರೆೆ


ಸುವರ್ಣಾವತಿ ಜಲಾಶಯ ಭರ್ತಿಯಾದರೆ ಎಡ ಮತ್ತು ಬಲದಂಡೆಗಳ ಮೂಲಕ ನೀರು ಹರಿಸಿ 7000 ಎಕರೆ ಪ್ರದೇಶದಲ್ಲಿ ಭತ್ತ, ಜೋಳ, ರಾಗಿ ಸೇರಿದಂತೆ ಆಹಾರ ಬೆಳೆಗಳನ್ನ ಬೆಳೆಯಬಹುದಾಗಿತ್ತು. ಇನ್ನು ಚಿಕ್ಕಹೊಳೆ ಜಲಾಶಯದ ಎಡ ಮತ್ತು ಬಲ ದಂಡೆ ನಾಲೆಗಳ ಮೂಲಕ ನೀರು ಹರಿಸಿದರೆ  ಸುಮಾರು 4000 ಎಕರೆ ಪ್ರದೇಶದಲ್ಲಿ ಕೃಷಿ ಮಾಡಬಹುದಾಗಿದೆ.


ಅಲ್ಲದೆ, ನಾಲೆಗಳಲ್ಲಿ ನೀರು ಹರಿದರೆ ತಾಲೂಕಿನ ಕಾಗಲವಾಡಿ, ಸಿದ್ದಯ್ಯನಪುರ, ನಾಗವಳ್ಳಿ, ಹೆಬ್ಬಸೂರು, ಚಂದಕವಾಡಿ ಸೇರಿದಂತೆ 15 ಕ್ಕು ಹೆಚ್ಚು ಕೆರೆಗಳು ತುಂಬಿ ಹತ್ತಾರು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿ ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ ಈ ಬಾರಿ ಈ ಎರಡು ಜಲಾಶಯಗಳು ಇನ್ನೂ ತುಂಬದೆ ರೈತರಲ್ಲಿ ನಿರಾಸೆ ಮೂಡಿಸಿವೆ.


ಈ ಜೋಡಿ ಜಲಾಶಯಗಳು ಭರ್ತಿಯಾದರೆ ಅಂತರ್ ಜಲಮಟ್ಟ ವೃದ್ಧಿಯಾಗಿ ಕೃಷಿ ಪಂಪ್ ಸೆಟ್ ಗಳಿಗೆ ಮರುಜೀವ ಬರುತ್ತಿತ್ತು. ಜೊತೆಗೆ ಕುಡಿಯುವ ನೀರಿನ ಸಮಸ್ಯೆ ತಾನಾಗಿಯೇ ಬಗೆಹರಿಯುತ್ತು. ಅಚ್ಚುಕಟ್ಟು ಪ್ರದೇಶದಲ್ಲಿ ಬರುವ  ಕೆರೆಗಳು ತುಂಬಿ ಜಾನುವಾರುಗಳು ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ತಪ್ಪುತ್ತಿತ್ತು.


ಆದರೆ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳಿಗೆ ಹರಿದು ಬರುವ ನೀರಿನ ಮೂಲಗಳಾದ ತಮಿಳುನಾಡಿನ ದಿಂಬಂ, ತಾಳವಾಡಿ ಹಾಗೂ ಕರ್ನಾಟಕದ ಅತ್ತಿಖಾನೆ, ಬೆಡಗುಳಿ, ಪುಣಜನೂರು ಭಾಗಗಳಲ್ಲಿ ಈ ಬಾರಿ ಸಮರ್ಪಕ  ಮಳೆಯಾಗದೆ ಇರುವುದರಿಂದ ಅವಳಿ ಜಲಾಶಯಗಳು ಭರ್ತಿಯಾಗಿಲ್ಲ.


ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿರುವ ಕಬಿನಿ ಮತ್ತು ಕಾವೇರಿ ನೀರನ್ನ ಕಬಿನಿ ಎರಡನೇ ಹಂತ ನೀರಾವರಿ ಯೋಜನೆ ಜಾರಿಗೊಳಿಸಿ ಈ ಜಲಾಶಯಗಳನ್ನ  ತುಂಬಿಸಿದರೆ ರೈತರು ಮತ್ತು ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂಬುದು ಈ ಭಾಗದ ಆಗ್ರಹವಾಗಿದೆ.


ಇದನ್ನೂ ಓದಿ: ಕೊರೋನಾ ಹೆಸರಲ್ಲಿ ಸುಲಿಗೆ - ಕಲಬುರ್ಗಿಯ ಎರಡು ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್


ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ನಿರ್ಮಾಣವಾದಾಗಿನಿಂದ ಇಲ್ಲಿವರೆಗೆ ಒಮ್ಮೆಯೂ  ಹೂಳು ಎತ್ತಿಲ್ಲದೆ ಇರುವುದರಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಸಾಮರ್ಥ್ಯ ಕಡಿಮೆಯಾಗಿದೆ. ಹೊಳೆತ್ತುವಂತೆ ರೈತರು ಸರ್ಕಾರವನ್ನ ಆಗ್ರಹಿಸಿದ್ದಾರೆ. ಜೊತೆಗೆ ಶೀಘ್ರಗತಿಯಲ್ಲಿ ಕಬಿನಿ ನದಿಯಿಂದ ಎರಡು ಜಲಾಶಯಗಳನ್ನು ಭರ್ತಿ ಮಾಡುವಂತೆ  ಸರ್ಕಾರವನ್ನ ಆಗ್ರಹಿಸಿದ್ದಾರೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಬೇಕಾಗಿದೆ.

Published by:Ganesh Nachikethu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು