ಹಸಿರುಸೌಧವಾಗಿ ಬದಲಾದ ಬೆಳಗಾವಿಯ ಸುವರ್ಣಸೌಧ

news18
Updated:August 26, 2018, 1:21 PM IST
ಹಸಿರುಸೌಧವಾಗಿ ಬದಲಾದ ಬೆಳಗಾವಿಯ ಸುವರ್ಣಸೌಧ
  • Advertorial
  • Last Updated: August 26, 2018, 1:21 PM IST
  • Share this:
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ 

 ಬೆಳಗಾವಿ ( ಆಗಸ್ಟ್ . 26) :  ಈ ಭವ್ಯ ಕಟ್ಟಡ ಉತ್ತರ ಕರ್ನಾಟಕ ಜನರ ಪಾಲಿಗೆ ಶಕ್ತಿ ಸೌಧವಾಗಬೇಕಿತ್ತು. ಆದರೇ ಕೇವಲ ಬಿಳಿಯಾನೆಯಾಗಿ ಮಾರ್ಪಟಿದೆ. ಇಷ್ಟು ದಿನ ಮುಖ್ಯ ಕಚೇರಿಯನ್ನು ಈ ಭವ್ಯ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಎಂದು ಹೋರಾಟ ನಡೆಸುತ್ತಿದ್ದ ಜನ ಈಗ ಸೌಧದ ಉಳಿವಿಗಾಗಿಯೇ ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ನಾವು ಹೇಳುತ್ತಿರೋದು ಬೆಳಗಾವಿಯ ಸುವರ್ಣ ಸೌಧ ಅಲ್ಲಲ್ಲಾ ಹಸಿರು ಸೌಧ ಸ್ಟೋರಿ...

ಇಷ್ಟು ದಿನ ಶ್ವೇತ ವರ್ಣದಿಂದ ಕಂಗೊಳ್ಳಿಸುತ್ತಿದ್ದ ಬೆಳಗಾವಿಯ ಸುವರ್ಣ ಸೌಧದ ಬಣ್ಣ ಬದಲಾಗಿದೆ. ಇದಕ್ಕೆ ಕಾರಣ ನಿರಂತರವಾಗಿ ಸುರಿಯುತ್ತಿರೋ ಮಳೆ. ಮಳೆಯಿಂದ ಬೆಳಗಾವಿಯ ಸುವರ್ಣ ಸೌಧ ಹಸಿರು ಸೌಧವಾಗಿ ಮಾರ್ಪಟಿದೆ. ಸುವರ್ಣ ಸೌಧ ಉತ್ತರ ಕರ್ನಾಟಕ ಭಾಗದ ಜನರ ಶಕ್ತಿ ಕೇಂದ್ರವಾಗಬೇಕಿತ್ತು. ಆದರೇ ಇಚ್ಛಾಶಕ್ತಿ ಕೊರತೆಯಿಂದ ಬೇಡಿಕೆ ಇಡೇರಿಲ್ಲ. ಇತ್ತೀಚಿಗೆ ಉತ್ತರ ಕರ್ನಾಟಕದ ವಿವಿಧ ಮಠಾದೀಶರು ಸೌಧಕ್ಕೆ ಕಚೇರಿ ಸ್ಥಳಾಂತರಿಸಿ ಎಂದು ಬೃಹತ್ ಪ್ರತಿಭಟನೆ ಸಹ ಮಾಡಿದರು.

ಆಗ ಎಚ್ಚೆತ್ತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೌಧಕ್ಕೆ ಕಚೇರಿ ಸ್ಥಳಾಂತರದ ಭರವಸೆ ನೀಡಿದ್ದಾರೆ. ಆದರೇ ಈಗ ಕಚೇರಿ ಬಿಡಿ ಬೃಹತ್ ಕಟ್ಟಡ ಉಳಿಸಿಕೊಳ್ಳಲು ಈ ಭಾಗದ ಹೋರಾಟಗಾರರು ಪ್ರತಿಭಟನೆ ಮಾಡೋ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ಸಂಪೂರ್ಣವಾಗಿ ಹಸಿರು ಬಣಕ್ಕೆ ತಿರುಗಿದೆ. ಇಷ್ಟಾದರೂ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ವರ್ಷಕ್ಕೆ 3 ಕೋಟಿ ರೂಪಾಯಿ ವೆಚ್ಚದಲ್ಲಿ ಸುವರ್ಣ ಸೌಧದ ನಿರ್ವಹಣೆ ನಡೆಯುತ್ತದೆ. ಆದರೇ ಶ್ವೇತ ಬಣ್ಣದ ಸೌಧದ ಹಸಿರು ಬಣ್ಣಕ್ಕೆ ತಿರುಗಿದರು ಯಾರೊಬ್ಬರನ್ನು ಇತ್ತ ನೋಡಿಲ್ಲ.

ಬೆಳಗಾವಿಯ ಸುವರ್ಣ ಸೌಧವನ್ನು ಕೇವಲ ವರ್ಷದಲ್ಲಿ ಹತ್ತು ಅಧಿವೇಶನಕ್ಕೆ ಮಾತ್ರ ಸೀಮಿತವಾಗಿದೆ. 500 ಕೋಟಿ ರೂಪಾಯಿ ಖರ್ಚು ಮಾಡಿ ಬೃಹತ್ ಬಂಗಲೇ ನಿರ್ಮಾಣ ಮಾಡಲಾಗಿದೆ. ಪ್ರತಿ ವರ್ಷ ಸೌಧದ ನಿರ್ವಹಣೆಗೆ ಅಂತಲೇ 3.5 ಕೋಟಿ ಗೂ ಹೆಚ್ಚುಹಣ ವೆಚ್ಚ ಮಾಡಲುತ್ತಿದೆ. ಇಷ್ಟಾದರೂ ಸೌಧ ಹಸಿರು ಬಣಕ್ಕೆ ತಿರುಗಿದೆ.

ಸೌಧದ ಸ್ಥಿತಿಯ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ. ಬೆಳಗಾವಿಯಲ್ಲಿ ಈ ಭಾರೀ ಹೆಚ್ಚು ಮುಂಗಾರು ಮಳೆಯಾಗಿದ್ದು, ಸೌಧದ ಎತ್ತರ ಪ್ರದೇಶದಲ್ಲಿ ಇರೋದರಿಂದ ಹೀಗಾಗಿದೆ. ಮಳೆ ನಿಂತ ಮೇಲೆ ಶುಚಿಗೊಳಿಸಲಾವುದು ಎನ್ನುತ್ತಾರೆ.

ಮೇಲ್ನೋಟಕ್ಕೆ ಸುವರ್ಣ ಸೌಧ ಹಸಿರು ಬಣ್ಣಕ್ಕೆ ತಿರುಗಿದ್ದು, ಒಳಗೆ ಎಲ್ಲೆಲ್ಲಿ ಎನಾಗಿದೆಯೋ ಅಧಿಕಾರಿಗಳೆ ಬಲ್ಲರು.ಒಟ್ಟಾರೆಯಾಗಿ ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರ ವಿಚಾರ ಇನ್ನೂ ಭರವಸೆಯಾಗಿಯೇ ಉಳಿದೆ. ಈ ನಡುವೆ ಕಟ್ಟಡ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಸ್ಥೀತಿ ಇಲ್ಲಿನ ಜನರಿಗೆ ನಿರ್ಮಾಣವಾಗಿದೆ. ಇನ್ನಾದರೂ ಸರ್ಕಾರ ಭವ್ಯ ಬಂಗಲೆಯ ಸದುಪಯೋಗಕ್ಕೆ ಮುಂದಾಗಬೇಕು. ಇಲ್ಲಾವದಲ್ಲಿ ಇದೊಂದು ಭೂತ ಬಂಗಲೆಯಾಗಿ ಮಾರ್ಪಾಡಾಗಲಿದೆ.
First published:August 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ