ಅಮಾನತು ವಿರೋಧಿಸಿ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಸಂಸದರ ಆಹೋರಾತ್ರಿ ಧರಣಿ

ತಮ್ಮನ್ನು ಅಮಾನತುಗೊಳಿಸಿದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ವಿರುದ್ಧ ಅಮಾನತುಗೊಂಡಿರುವ 8 ರಾಜ್ಯಸಭಾ ಸದಸ್ಯರು ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಸಂಸದರ ಆಹೋರಾತ್ರಿ ಧರಣಿ

ಸಂಸದರ ಆಹೋರಾತ್ರಿ ಧರಣಿ

  • Share this:
ನವದೆಹಲಿ (ಸೆಪ್ಟೆಂಬರ್​  22): ರೈತರ ಪಾಲಿನ ಮರಣಶಾಸನ ಎಂದೇ ವ್ಯಾಖ್ಯಾನಿಸಲಾಗುತ್ತಿರುವ ವಿವಾದಾತ್ಮಕ ಕೃಷಿ ಮಸೂದೆ ವಿರೋಧಿಸಿ‌ ರಾಜ್ಯಸಭೆಯಲ್ಲಿ ಪ್ರತಿಭಟನೆ ಮಾಡಿದ್ದ ತಮ್ಮನ್ನು ಅಮಾನತುಗೊಳಿಸಿದ ಉಪರಾಷ್ಟ್ರಪತಿ ಹಾಗೂ ಸಭಾಪತಿ ವಿರುದ್ಧ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಅಮಾನತುಗೊಂಡಿರುವ 8 ರಾಜ್ಯಸಭಾ ಸದಸ್ಯರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕರ್ನಾಟಕದ ನಾಸೀರ್ ಹುಸೇನ್ ಸೇರಿ ಡೆರೆಕ್ ಒಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್ ಮತ್ತು ಎಲಮರನ್ ಕರೀಮ್‌ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇವರೆಲ್ಲಾ ಭಾನುವಾರ ರಾಜ್ಯಸಭೆಯಲ್ಲಿ ವಿವಾದಿತ ಕೃಷಿ ಮಸೂದೆ ಮಂಡನೆ ವೇಳೆ 'ಕೇಂದ್ರ ಸರ್ಕಾರ ತರಲೊರಟಿರುವ ಕಾನೂನು ರೈತರಿಗೆ ಮಾರಕವಾಗಿದೆ. ಈ‌ ಮಸೂದೆಯನ್ನು ಆತುತಾರುರವಾಗಿ ಪಾಸ್ ಮಾಡಬಾರದು ಸಮರ್ಪಕವಾಗಿ ಚರ್ಚೆಯಾಗಬೇಕೆಂದು‌' ಒತ್ತಾಯಿಸಿದ್ದರು.‌ ಸರ್ಕಾರ ಚರ್ಚೆಗೆ ಅವಕಾಶ ನೀಡದಿದ್ದಾಗ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು.

‌ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್ ಮಸೂದೆಯ ಪ್ರತಿಯನ್ನು ಹರಿದು ಹಾಕಿದರು. ಸಭಾಧ್ಯಕ್ಷರ ಸ್ಥಾನಕ್ಕೆ ಘೆರಾವ್ ಹಾಕಲು ಮುಂದಾಗಿದ್ದರು. ಪ್ರತಿಭಟನೆ ಮಾಡಿದವರ ಪೈಕಿ 8 ಮಂದಿ ಸಂಸದರನ್ನು ಸೋಮವಾರ ಒಂದು ವಾರದ ಮಟ್ಟಿಗೆ ಕಲಾಪದಿಂದ ಅಮಾನತುಗೊಳಿಸಲಾಗಿತ್ತು.

ತುಂಗಭದ್ರಾ ನದಿಯಲ್ಲಿ ಪ್ರವಾಹ ಭೀತಿ; ಜಲಾಶಯದಿಂದ 1 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ

ತಮ್ಮನ್ನು ಅಮಾನತುಗೊಳಿಸಿದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ವಿರುದ್ಧ ಅಮಾನತುಗೊಂಡಿರುವ 8 ರಾಜ್ಯಸಭಾ ಸದಸ್ಯರು ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ನಿನ್ನೆ ಬೆಳಿಗ್ಗೆಯಿಂದ ಆರಂಭವಾದ ಪ್ರತಿಭಟನೆ ರಾತ್ರಿ ಪೂರ್ತಿ ನಡೆದು ಬೆಳಿಗ್ಗೆಯೂ ಮುಂದುವರೆದಿದೆ.‌ ಅಮಾನತುಗೊಂಡಿರುವ 8 ಮಂದಿ ರಾಜ್ಯಸಭಾ ಸದಸ್ಯರು ರಾತ್ರಿಪೂರ್ತಿ ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿಯೇ ಮಲಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಂಸತ್ತಿನ ಒಳಗೆ ಹಾಗೂ ಹೊರಗೆ ಆಹೋರಾತ್ರಿ ಧರಣಿ‌ ನಡೆದಿರಲಿಲ್ಲ.

ಸಂಸದರ ಆಹೋರಾತ್ರಿ ಪ್ರತಿಭಟನೆಯಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಆದುದರಿಂದ ಇಂದು ಬೆಳಿಗ್ಗೆ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರು ಪ್ರತಿಭಟನೆ ನಡೆಯುತ್ತಿರುವ ಗಾಂಧಿ ಪ್ರತಿಮೆ ಬಳಿ ತೆರಳಿ ಸಂಸದರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾನಿರತ ಸಂಸದರು ಉಪಭಾಪತಿಗಳ‌ ಮನವೊಲಿಕೆ ಯಶಸ್ವಿಯಾಗಿಲ್ಲ ಎಂದು ತಿಳಿದುಬಂದಿದೆ.

ಉಪಸಭಾಪತಿ ವಿರುದ್ಧ ವಿಪಕ್ಷಗಳು ನಡೆಸಿದ್ದ ಅವಿಶ್ವಾಸ ನಿರ್ಣಯವನ್ನು ಉಪರಾಷ್ಟ್ರಪತಿಗಳೂ ಆದ ವೆಂಕಯ್ಯ ನಾಯ್ಡು ಅವರು ತಿರಸ್ಕರಿಸಿದ್ದರು. ಈ ನಿರ್ಣಯ ಕ್ರಮಬದ್ಧವಾಗಿಲ್ಲ ಎಂದು ಕಾರಣವೊಡ್ಡಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದರು.

ಕಲಾಪವನ್ನು ಮುಂದೂಡುವಂತೆ ಮನವಿ ಮಾಡಿದರೂ ಲೆಕ್ಕಿಸದೆ ಎರಡು ಕೃಷಿ ಮಸೂದೆಗಳ ಮಂಡನೆಗೆ ಅವಕಾಶ ನೀಡಿದ್ದ ಉಪಸಭಾಪತಿ ಹರಿವಂಶ್ ವಿರುದ್ಧ 12 ವಿಪಕ್ಷಗಳು ಅವಿಶ್ವಾಸ ನಿರ್ಣಯದ ನೋಟೀಸ್ ನೀಡಿದ್ದರು. ಹಾಗೆಯೇ, ಬಿಜೆಪಿ ಕೂಡ  ದುರ್ವರ್ತನೆ ತೋರಿದ್ದ ಹಲವು ವಿಪಕ್ಷಗಳ ಸಂಸದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿತ್ತು.
Published by:Latha CG
First published: