ಶಿವಮೊಗ್ಗದಲ್ಲೂ ಶಂಕಿತ ಉಗ್ರರು ಜಾಡು, ಸ್ಯಾಟಲೈಟ್​ ಪೋನ್?; ಮಲೆನಾಡಿನಲ್ಲಿ ಮನೆಮಾಡಿದ ಆತಂಕ

ಸುರಾನಿ ಗ್ರಾಮಕ್ಕೆ ಅಪರಿಚಿತ ವ್ಯಕ್ತಿಗಳು ಬಂದು ಹೋಗುತ್ತಿದ್ದಾರೆ ಎಂಬ ಸುದ್ದಿ  ಹಲವಾರು ದಿನಗಳಿಂದ ತೀರ್ಥಹಳ್ಳಿ ಭಾಗದಲ್ಲಿ ಹರಿದಾಡುತ್ತಿರುವುದು ಸಹ ಪೊಲೀಸರ ಅನುಮಾನವನ್ನು ಗಟ್ಟಿಗೊಳಿಸಿದೆ.

MAshok Kumar | news18-kannada
Updated:October 16, 2019, 12:53 PM IST
ಶಿವಮೊಗ್ಗದಲ್ಲೂ ಶಂಕಿತ ಉಗ್ರರು ಜಾಡು, ಸ್ಯಾಟಲೈಟ್​ ಪೋನ್?; ಮಲೆನಾಡಿನಲ್ಲಿ ಮನೆಮಾಡಿದ ಆತಂಕ
ಸಾಂದರ್ಭಿಕ ಚಿತ್ರ
  • Share this:
ಶಿವಮೊಗ್ಗ (ಅಕ್ಟೋಬರ್ 16); ದಸರಾ ಹಬ್ಬದ ಸಂದರ್ಭದಲ್ಲಿ ಶ್ರೀರಂಗಪಟ್ಟಣದಲ್ಲಿ ನಾಲ್ವರು ಶಂಕಿತ ಉಗ್ರರು ಸ್ಯಾಟಲೈಟ್ ಪೋನ್ ಬಳಕೆ ಮಾಡಿ ಪೊಲೀಸರ ಅತಿಥಿಯಾದ ಸುದ್ದಿ ತಣ್ಣಗಾಗುವುದರೊಳಗಾಗಿ ಶಿವಮೊಗ್ಗದಲ್ಲೂ ಇಂತಹದ್ದೇ ಘಟನೆ ಕಂಡುಬಂದಿದ್ದು ಮಲೆನಾಡಿನಲ್ಲಿ ಆತಂಕ ಮನೆಮಾಡಿದೆ.

ತೀರ್ಥಹಳ್ಳಿಯ ಸುರಾನಿ ಗ್ರಾಮದ ತೋಟದ ಸಮೀಪ ಸೆಟಲೈಟ್ ಪೋನ್ ಬಳಕೆ ಮಾಡಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸೆಟಲೈಟ್ ಫೋನ್ ಬಳಕೆಯಾಗಿರುವ ಮಾಹಿತಿ ಮೇರೆಗೆ ನಿನ್ನೆ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಿಟ್ಟುಕಳಿಸಿದ್ದಾರೆ ಎನ್ನಲಾಗುತ್ತಿದೆ.

ಸುರಾನಿ ಗ್ರಾಮಕ್ಕೆ ಅಪರಿಚಿತ ವ್ಯಕ್ತಿಗಳು ಬಂದು ಹೋಗುತ್ತಿದ್ದಾರೆ ಎಂಬ ಸುದ್ದಿ  ಹಲವಾರು ದಿನಗಳಿಂದ ತೀರ್ಥಹಳ್ಳಿ ಭಾಗದಲ್ಲಿ ಹರಿದಾಡುತ್ತಿರುವುದು ಸಹ ಪೊಲೀಸರ ಅನುಮಾನವನ್ನು ಗಟ್ಟಿಗೊಳಿಸಿದೆ. ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳಾದ ಎಸ್.ಪಿ. ಕೆ.ಎಂ. ಶಾಂತರಾಜ್ ಸುರಾನಿ ಗ್ರಾಮದ ಸುತ್ತಮುತ್ತಲೂ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಪ್ರಕರಣ ಸಂಬಂಧ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಮೈಸೂರು ದಸರಾ ಮೇಲೆ ಉಗ್ರರ ಕರಿ ನೆರಳು?; ಶ್ರೀರಂಗಪಟ್ಟಣದಲ್ಲಿ ನಾಲ್ವರು ಶಂಕಿತರು ವಶಕ್ಕೆ

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading