ಬೆಂಗಳೂರಿನಲ್ಲಿ ಅನುಮಾನಾಸ್ಪದ ವಸ್ತು ಸ್ಪೋಟ; ಓರ್ವ ವ್ಯಕ್ತಿಯ ಕಾಲು ಛಿದ್ರ

ಸ್ಪೋಟಗೊಂಡ ವಸ್ತು ಏನು? ಅದನ್ನು ಇಲ್ಲಿ ಇಟ್ಟದ್ದು ಯಾರು? ಎಂಬ ಕುರಿತು ಈವರೆಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಹೀಗಾಗಿ ಸ್ಫೋಟ ಸಂಭವಿಸಿದ ಸ್ಥಳಕ್ಕೆ. ಡಿಸಿಪಿ ಜೋಶಿ ಶ್ರೀನಾಥ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿ (ಮಾರ್ಚ್​ 08); ನಗರದಲ್ಲಿ ಇಂದು ಸಂಜೆ ಅನುಮಾನಾಸ್ಪದ ವಸ್ತು ಸ್ಪೋಟಗೊಂಡಿದ್ದು, ಸ್ಪೋಟದ ತೀವ್ರತೆಗೆ ಓರ್ವ ವ್ಯಕ್ತಿಯ ಕಾಲು ಸಂಪೂರ್ಣ ಛಿದ್ರಗೊಂಡಿರುವ ಘಟನೆ ನಡೆದಿದೆ.

ನಗರದ ಆಡುಗೋಡಿಯ ಡೈರಿ ಸರ್ಕಲ್​ನಲ್ಲಿ ಕಸದ ರಾಶಿಯ ಬಳಿ ಸ್ಪೋಟ ಸಂಭವಿಸಿದ್ದು, ಈ ಸ್ಫೋಟದಲ್ಲಿ ದಾರಿಹೋಕ ವ್ಯಕ್ತಿ ತನ್ನ ಕಾಲು ಕಳೆದುಕೊಂಡಿದ್ದಾರೆ. ಕಾಲು ಕಳೆದುಕೊಂಡ ವ್ಯಕ್ತಿಯನ್ನು ಆಂಜಿನಪ್ಪ (50) ಎಂದು ಗುರುತಿಸಲಾಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸ್ಪೋಟಗೊಂಡ ವಸ್ತು ಏನು? ಅದನ್ನು ಇಲ್ಲಿ ಇಟ್ಟದ್ದು ಯಾರು? ಎಂಬ ಕುರಿತು ಈವರೆಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಹೀಗಾಗಿ ಸ್ಫೋಟ ಸಂಭವಿಸಿದ ಸ್ಥಳಕ್ಕೆ. ಡಿಸಿಪಿ ಜೋಶಿ ಶ್ರೀನಾಥ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್​ನವರಂತೆ ನಾವು ನೀರು ಕುಡಿಸಲ್ಲ, ಕೊಡಿಸುತ್ತೇವೆ; ಸಂಸದ ಪ್ರಹ್ಲಾದ್ ಜೋಶಿ ಲೇವಡಿ
First published: