Bengaluru: ಬೆಂಗಳೂರಿನಲ್ಲಿ ನೆಲೆಸಿದ್ದ ಶಂಕಿತ ಉಗ್ರ ತಾಲಿಬ್ ಹುಸೇನ್ ಅರೆಸ್ಟ್

ನಗರದ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ಓಕಳಿಪುರಂ ಮಸೀದಿ ಬಳಿ ಸಣ್ಣ ಮನೆಯಲ್ಲಿ ತಾಲಿಬ್ ಹುಸೇನ್ ಎಂಟು ತಿಂಗಳಿನಿಂದ ವಾಸವಾಗಿದ್ದನು. ಜಮ್ಮು ಪೊಲೀಸರ ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ನಡೆಸಿ ತಾಲಿಬ್ ಹುಸೇನ್ ಸೆರೆ ಹಿಡಿಯಲಾಗಿದೆ.

ಶಂಕಿತ ಉಗ್ರ

ಶಂಕಿತ ಉಗ್ರ

  • Share this:
ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ (Bengaluru) ನೆಲೆಸಿದ್ದ ಶಂಕಿತ ಉಗ್ರ ತಾಲಿಬ್ ಹುಸೇನ್ (Suspect Terrorist Talib Hussain) ಎಂಬಾತನನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ತಾಲಿಬ್ ಹುಸೇನ್ ಮೂಲತಃ ಜಮ್ಮು ನಿವಾಸಿ. ಜಮ್ಮುವಿನ ಕಿಶ್ತ್ ವಾರ್ ಠಾಣೆ ಪೊಲೀಸರು (Jammu Police) ಒಂದು ವಾರದ ಹಿಂದೆಯೇ ತಾಲಿಬ್ ಹುಸೇನ್ ನನ್ನು ಬಂಧಿಸಿದ್ದಾರೆ. ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರೋ ಆರೋಪದಲ್ಲಿ ಶಂಕಿತ ಉಗ್ರನನ್ನು ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆದೊಯ್ಯಲಾಗಿದೆ. ಬಂಧಿತ ತಾಲಿಬ್ ಹುಸೇನ್, ನಗರದಲ್ಲಿ ಲೋಡಿಂಗ್ ಅನ್‌ ಲೋಡಿಂಗ್ ಕೆಲಸ (Loading Unloading Work) ಮಾಡುತ್ತಿದ್ದಾಗಿ ಹೇಳಿಕೊಂಡಿದ್ದನು.

ನಗರದ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ಓಕಳಿಪುರಂ ಮಸೀದಿ ಬಳಿ ಸಣ್ಣ ಮನೆಯಲ್ಲಿ ತಾಲಿಬ್ ಹುಸೇನ್ ಎಂಟು ತಿಂಗಳಿನಿಂದ ವಾಸವಾಗಿದ್ದನು. ಜಮ್ಮು ಪೊಲೀಸರ ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ನಡೆಸಿ ತಾಲಿಬ್ ಹುಸೇನ್ ಸೆರೆ ಹಿಡಿಯಲಾಗಿದೆ.

ಚಿಕ್ಕ ಮನೆಯಲ್ಲಿ ಉಳಿದುಕೊಂಡಿದ್ದ ತಾಲಿಬ್ ಹುಸೇನ್

ಎರಡನೇ ಲಾಕ್ ಡೌನ್ ವೇಳೆ ಕೆಲಸ ಇಲ್ಲದೆ ಬಾಡಿಗೆ ಮನೆ ತೊರೆದಿದ್ದ ತಾಲಿಬ್ ಹುಸೇನ್, ನಂತರ ಮಸೀದಿಗೆ ಹೊಂದಿಕೊಂಡಿರುವ ಚಿಕ್ಕ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದನು. ಕಳೆದ ಭಾನುವಾರ ಈತನ ಬಂಧನವಾಗಿದ್ದು, ಹೆಬಿಯಸ್ ಕಾರ್ಪಸ್ ಕೇಸ್ ಇದೆ ಅಂತ ಆತನನ್ನ ಕರೆದುಕೊಂಡು ಹೋಗಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:  Officer Suspended: "ಬೆಸ್ಟ್ ಎಂಜಿನಿಯರ್ ಒಸಾಮಾ ಬಿನ್ ಲಾಡೆನ್" ಎಂದು ಕಚೇರಿಯಲ್ಲಿ ಬರೆದುಕೊಂಡಿದ್ದ ಅಧಿಕಾರಿ ಸಸ್ಪೆಂಡ್

ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿಕೆ

ಬೆಂಗಳೂರಿನಲ್ಲಿ ಉಗ್ರ ಬಂಧನ ವಿಚಾರಕ್ಕೆ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಬಂಧನ ಮಾಡಿರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರರು ಮಾಹಿತಿ ನೀಡಿದ್ದಾರೆ. ಆದರೆ ಯಾವ ಕಾರಣಕ್ಕೆ ಅಂತ ನಮಗೆ ಮಾಹಿತಿ ನೀಡಿಲ್ಲ. ನಾವು ಸಾಕಷ್ಟು ಬಾರಿ ಉಗ್ರರರನ್ನ ಪತ್ತೆ ಹಚ್ಚಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದೇವೆ. ಇಲ್ಲಿ ಎಲ್ಲಿ ಉಳಿದುಕೊಂಡಿದ್ದ ಆ ಜಾಗದ ಬಗ್ಗೆ ಮಾಹಿತಿ ಇಲ್ಲ. ಜಮ್ಮು ಪೊಲೀಸರ ತನಿಖೆ ನಡೆಸುತ್ತಿರೋದರಿಂದ ನಾವು ಹಸ್ತಕ್ಷೇಪ ಮಾಡಲು ಬರಲ್ಲ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಜಮ್ಮು ಪೊಲೀಸರಿಗೆ ಸಂಪೂರ್ಣ ಸಹಕಾರ: ಸಿಎಂ

ಇಂತಹವರ ಮೇಲೆ ನಿರಂತರ ಕಣ್ಣಿರುತ್ತದೆ.  ಜಮ್ಮು ಕಾಶ್ಮೀರ ಪೊಲೀಸರಿಗೆ ನಾವು ಎಲ್ಲ ಸಹಕಾರ ಕೊಡ್ತೇಲಿದ್ದೇವೆ. ಹಿಂದೆಯೂ ಇಂತಹ ಬಂಧನಗಳಾಗಿವೆ. ಇದನ್ನು ಜಮ್ಮು ಕಾಶ್ಮೀರ ಪೊಲೀಸರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ.  ಅವರಿಗೆ ನಾವು ಎಲ್ಲ ರೀತಿಯಲ್ಲೂ ಸಂಪೂರ್ಣ ಸಹಕಾರವನ್ನು ಕೊಡುತ್ತಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಅನ್ವರ್ ಮಸೀದಿ ಮುಖ್ಯಸ್ಥ ಹೇಳಿಕೆ

ನಮಗೆ ಅವನ ಬಗ್ಗೆ ಯಾವುದೇ ಅನುಮಾನ ಬಂದಿರಲಿಲ್ಲ. ತನ್ನ ಕೆಲಸ ಆಯ್ತು ತಾನಾಯ್ತು ಹಾಗೆಯೇ ಇಲ್ಲಿದ್ದನು. ಬಡತನದಲ್ಲಿ ಇರುವ ರೀತಿಯಲ್ಲಿ ಕಾಣಿಸುತ್ತಿದ್ದನು. ರಾತ್ರಿ 10 ಗಂಟೆಗೆ ಮಸೀದಿಯ ಗೇಟ್ ಹಾಕಲಾಗುತ್ತದೆ. ಆದ್ರೆ ಇಲ್ಲಿ ಅವನನ್ನು ಭೇಟಿಯಾಗಲು ಯಾರೂ ಬಂದಿರುವ ಮಾಹಿತಿ ನಮಗಿಲ್ಲ ಎಂದು ಆತನಿಗೆ ಆಶ್ರಯ ನೀಡಿದ ಮಸೀದಿ ಮುಖ್ಯಸ್ಥ ಅನ್ವರ್ ನ್ಯೂಸ್ 18 ಕನ್ನಡಕ್ಕೆ ಹೇಳಿದ್ದಾರೆ.

ಇದನ್ನೂ ಓದಿ:  Suicide: ವರದಕ್ಷಿಣೆ ಕಿರುಕುಳಕ್ಕೆ ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ; ಗಂಡನ ಮನೆಯವರು ಎಸ್ಕೇಪ್

ಆಧಾರ್ ಕಾರ್ಡ್ ಪರಿಶೀಲಿಸಿ ಆಶ್ರಯ ನೀಡಲಾಗಿತ್ತು

ಸೆಕೆಂಡ್ ಲಾಕ್ ಡೌನ್ ವೇಳೆ ನಾವು ಊಟ ಹಂಚುತ್ತಿರುವಾಗ ಆತ ನಮಗೆ ಸಿಕ್ಕಿದ್ದ. ಅಂದು ಆತನ ಕೈಯಲ್ಲಿ ಸುಮಾರು ಆರು ತಿಂಗಳ ಮಗು ಸಹ ಇತ್ತು. ಅಂದು ನಮಗೆ ಇರಲು ಸಹಾಯ ಹೇಳಿದ. ಆತನ ಕೈಯಲ್ಲಿದ್ದ ಮಗುವಿನ ಮುಖ ನೋಡಿ ಚಿಕ್ಕ ರೂಮಿನಲ್ಲಿಯೇ ಉಳಿದುಕೊಂಡಿದ್ದನು. ಆತನ ಆಧಾರ್ ಕಾರ್ಡ್ ಪರಿಶೀಲಿಸಿ ಇರಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾನವೀಯತೆ ನಿಟ್ಟಿನಲ್ಲಿ ಆತನಿಗೆ ಚಿಕ್ಕ ಮನೆ ನೀಡಿದ್ದೀವಿ. ಆತನ ಬಂಧನದ ಬಳಿಕ ತಾಲಿಬ್ ಪತ್ನಿ ಮತ್ತು ಮಕ್ಕಳು ಜಮ್ಮುವಿಗೆ ತೆರಳಿದ್ದಾರೆ ಎಂದು ಅನ್ವರ್ ಹೇಳಿದ್ದಾರೆ.
Published by:Mahmadrafik K
First published: