Surya Namaskar: ಪಿಯು ಕಾಲೇಜುಗಳಲ್ಲಿ ಜ.1ರಿಂದ ಫೆ. 7ರವರೆಗೆ ಸೂರ್ಯ ನಮಸ್ಕಾರ: ಕೇಂದ್ರ ಶಿಕ್ಷಣ ಇಲಾಖೆ ಸೂಚನೆ!

ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜು(PU College)ಗಳಲ್ಲಿ ಜ. 1ರಿಂದ ಫೆ. 7ರವರೆಗೆ ‘ಸೂರ್ಯ ನಮಸ್ಕಾರ’(Surya Namaskar) ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. ಅಲ್ಲದೆ, ಜ 26ರಂದು ‘ಸಂಗೀತ ದೊಂದಿಗೆ ಸೂರ್ಯ ನಮಸ್ಕಾರ’(Surya Namskar With Music) ಆಯೋಜಿಸಬೇಕು ಎಂದೂ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜು(PU College)ಗಳಲ್ಲಿ ಜ. 1ರಿಂದ ಫೆ. 7ರವರೆಗೆ ‘ಸೂರ್ಯ ನಮಸ್ಕಾರ’(Surya Namaskar) ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. ಅಲ್ಲದೆ, ಜ 26ರಂದು ‘ಸಂಗೀತ ದೊಂದಿಗೆ ಸೂರ್ಯ ನಮಸ್ಕಾರ’(Surya Namskar With Music) ಆಯೋಜಿಸಬೇಕು ಎಂದೂ ತಿಳಿಸಿದೆ. 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಶಿಕ್ಷಣ ಇಲಾಖೆ(Central Education Department) ಸೂಚನೆ ಹಿನ್ನೆಲೆಯಲ್ಲಿ ಈ ಆದೇಶ ಮಾಡಿದ್ದು, ಜನವರಿ 26ರಂದು ‘ಸಂಗೀತದೊಂದಿಗೆ ಸೂರ್ಯ ನಮಸ್ಕಾರಕ್ಕೂ ಸೂಚನೆ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು(Principal), ಉಪನ್ಯಾಸಕರು(Teachers), ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು(Students) ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬಳಿಕ ಕಾರ್ಯಕ್ರಮದ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ಶಾಖೆಗೆ ಸಲ್ಲಿಸಬೇಕು ಎಂದು ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ‘ಸೂರ್ಯ ನಮಸ್ಕಾರ‘ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಡಿ.16 ರಂದು ಪತ್ರ ಬರೆದು ಸೂಚಿಸಿತ್ತು.

ಆರೋಗ್ಯ ವೃದ್ಧಿ, ಮನಬೋಲ ಹೆಚ್ಚಿಸಲು ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರವುಯೋಗಾಸನದ 10 ಭಂಗಿಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳ ಆರೋಗ್ಯ ವೃದ್ದಿಗೆ ಹಾಗೂ ಮನೋಬಲ ಹೆಚ್ಚಿಸುವುದಕ್ಕೆ ನೆರವಾಗಲಿದೆ. ಕೇಂದ್ರದ ಸೂಚನೆಯಂತೆ ಜ. 1ರಿಂದ ಫೆ. 7ರವರೆಗಿನ ಒಟ್ಟು 38 ದಿನಗಳ ಪೈಕಿ, 21 ದಿನ ಬೆಳಗ್ಗಿನ ಅಸೆಂಬ್ಲಿ ಅವಧಿಯಲ್ಲಿ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬೇಕಿದೆ.ಸೂರ್ಯ ನಮಸ್ಕಾರ ಕಾರ್ಯಕ್ರಮ ಮಾಡಿದ ನಂತರ ಶಿಕ್ಷಣ ಇಲಾಖೆಗೆ ಮಾಹಿತಿಯನ್ನು ನೀಡಬೇಕು. ಪ್ರತಿ ದಿನ 13 ಸೂರ್ಯ ನಮಸ್ಕಾರಗಳಂತೆ ಒಟ್ಟು 273 (21 ದಿನಗಳಲ್ಲಿ) ಸೂರ್ಯ ನಮಸ್ಕಾರಗಳನ್ನು ಮಾಡಿದ ವರಿಗೆ ಇ–ಪ್ರಮಾಣಪತ್ರ ನೀಡುವುದಾಗಿ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್‌ ತಿಳಿಸಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದನ್ನು ಓದಿ : ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದೂ ಸಹ ವಿದ್ಯುತ್ ವ್ಯತ್ಯಯ


ಕೇಂದ್ರದ ಪತ್ರದಲ್ಲಿ ಏನಿದೆ?

‘ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್‌ (ಎನ್‌ವೈಎಸ್‌ಎಫ್‌) ಡಿ. 9ರಂದು ಪತ್ರ ಬರೆದು 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಆಯೋಜಿಸುವ ಬಗ್ಗೆ ತಿಳಿಸಿದೆ. 30 ರಾಜ್ಯಗಳಲ್ಲಿ 30 ಸಾವಿರ ಸಂಸ್ಥೆಗಳ 3 ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿ 75 ಕೋಟಿ ಸೂರ್ಯ ನಮಸ್ಕಾರ ಮಾಡಿಸಲು ಫೆಡರೇಷನ್‌ ನಿರ್ಧರಿಸಿದೆ.ಜ 26ರಂದು ತ್ರಿವರ್ಣ ಧ್ವಜದ ಎದುರು ‌ಸಂಗೀತದೊಂದಿಗೆ ಸೂರ್ಯ ನಮಸ್ಕಾರದ ಮೂಲಕ ತಾಯಿ ಭಾರತಾಂಬೆಗೆ ಭಾವಪೂರ್ಣ ನಮನ ಸಲ್ಲಿಸಬೇಕು ಎಂದೂ ಫೆಡರೇಷನ್‌ ತಿಳಿಸಿದೆ. ಹೀಗಾಗಿ, ನಿಮ್ಮ ವ್ಯಾಪ್ತಿಯಲ್ಲಿರುವ ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಿರ್ದೇಶನ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಬೇಕು’ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಸೂಚಿಸಿದೆ.

ಇದನ್ನು ಓದಿ : ರಾಜ್ಯದಲ್ಲಿ ಸದ್ಯಕ್ಕಿಲ್ಲ ವರುಣನ ಅಬ್ಬರ.. ಮೈ ನಡುಗುವ ಚಳಿಗೆ ಕರುನಾಡು ಗಢ ಗಢ!

ಸೂರ್ಯ ನಮಸ್ಕಾರದಿಂದ ಆಗುವ ಲಾಭಗಳೇನು?

ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ. ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ. ದೇಹ ದಂಡನೆ, ಕತ್ತು, ಬೆನ್ನು ಹುರಿ, ತೊಡೆಮ ಮೀನಖಂಡಗಳಲ್ಲಿನ ನೋವಿಗೆ ಸೂರ್ಯ ನಮಸ್ಕಾರ ಸಹಕಾರಿ. ದೇಹದ ಎಲ್ಲಾ ಅವಯವಗಳು ಸಡಿಲಗೊಂಡು, ನರ-ನಾಡಿಗಳು ಚೈತನ್ಯ ಪಡೆಯುತ್ತವೆ. ಮನಸ್ಸು ಸದಾ ಲವಲವಿಕೆಯಿಂದ ಕೂಡಿರುತ್ತದೆ. ಸ್ವಪ್ನದೋಷ, ವೀರ್ಯಸ್ಖಲನ, ಸಂದಿವಾತ, ಸ್ತ್ರೀಯರಲ್ಲಿ ಸೂತಕ(ಮಾಸಿಕ ಸ್ರಾವ) ದೋಷ, ಗರ್ಭಾಶಯ ವಿಕಾರ ದೋಷಗಳನ್ನು ನಿವಾರಿಸಬಲ್ಲ ಶಕ್ತಿ ಸೂರ್ಯ ನಮಸ್ಕಾರಕ್ಕಿದೆ.

Published by:Vasudeva M
First published: