ಮೊಟ್ಟೆ ಬೇಕಾ? ಬೇಡ್ವಾ? ಕೊಪ್ಪಳ ಜಿಲ್ಲಾ ಸಮೀಕ್ಷೆಯಲ್ಲಿ ಬಯಲಾಯ್ತು ಮಕ್ಕಳ ಅಭಿಪ್ರಾಯ

ಕೊಪ್ಪಳ ಜಿಲ್ಲೆಯಲ್ಲಿ ಮೊಟ್ಟೆ ಬೇಕು ಎನ್ನುವ ಮಕ್ಕಳು ಸಂಖ್ಯೆ ಶೇ. 93 ರಷ್ಟು ಇದೆ. ಇಲ್ಲಿ ಮೊಟ್ಟೆಗೆ ಹೆಚ್ಚು ಬೇಡಿಕೆ ಇರುವುದು ಕಂಡು ಬಂದಿದೆ.

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ

  • Share this:
ಕೊಪ್ಪಳ: ತೀವ್ರ ಅಪೌಷ್ಠಿಕತೆ (MOL Nutrition) ಹೊಂದಿರುವ ಕಲ್ಯಾಣ ಕರ್ನಾಟಕ (Kalyana Karnataka) ಭಾಗದ  ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ (School Children) ವಾರದ ಮೂರು ದಿನ ಮೊಟ್ಟೆ (Boiled Egg) ಅಥವಾ ಬಾಳೆ ಹಣ್ಣು (Banana) ನೀಡುವ ಯೋಜನೆಯನ್ನು ಆರಂಭಿಸಿದ್ದು, ಈಗ ಈ ಯೋಜನೆಯ ಬಗ್ಗೆ ಪರ ವಿರೋಧ ಚರ್ಚೆ ನಡೆದಿದೆ. ಈ ಚರ್ಚೆ ಮಧ್ಯೆ ಕೊಪ್ಪಳ ಜಿಲ್ಲೆಯಲ್ಲಿ ಮೊಟ್ಟೆ ಬೇಕು ಎನ್ನುವ ಮಕ್ಕಳು ಸಂಖ್ಯೆ ಶೇ. 93 ರಷ್ಟು ಇದೆ. ಇಲ್ಲಿ ಮೊಟ್ಟೆಗೆ ಹೆಚ್ಚು ಬೇಡಿಕೆ ಇರುವುದು ಕಂಡು ಬಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆ ತಾಂಡವಾಡುತ್ತಿದೆ. ಅಪೌಷ್ಠಿಕತೆ ನಿವಾರಣೆಗಾಗಿ 6 ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ನೀಡಲು. ಒಂದು ವೇಳೆ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣನ್ನು ನೀಡಬೇಕು, ಹಣ್ಣು ಹಾಗು ಮೊಟ್ಟೆ ತಿನ್ನುವ ಬಗ್ಗೆ ಯಾರಿಗೂ ಒತ್ತಾಯವಿಲ್ಲ, ಆಯ್ಕೆಯನ್ನು ಮಕ್ಕಳಿಗೆ ಬಿಟ್ಟಿದ್ದು ಈ ಕುರಿತು ಪಾಲಕರು ಶಾಲೆ ಮುಖ್ಯಸ್ಥರಿಗೆ ಒಪ್ಪಿಗೆ ಪತ್ರ ನೀಡಬೇಕಾಗಿದೆ.

ಮೊಟ್ಟೆ ಇರಲಿ ಎಂದ ಮಕ್ಕಳು 

ಡಿಸೆಂಬರ್ ಒಂದರಿಂದ ಆರಂಭವಾದ ಮೊಟ್ಟೆ ಅಥವಾ ಬಾಳೆಹಣ್ಣು ನೀಡುವ ಯೋಜನೆಯು ಮಾರ್ಚ ತಿಂಗಳವರೆಗೂ ಪ್ರಾಯೋಗಿಕವಾಗಿದ್ದು, ಈ ದಿನಗಳಲ್ಲಿ ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಯಾಗಿದ್ದರೆ ಮುಂದುವರಿಸುವ ಉದ್ಧೇಶ ಹೊಂದಲಾಗಿದೆ. ಈ ಮಧ್ಯೆ ಶಾಲೆಗಳಲ್ಲಿ ಮೊಟ್ಟೆ ನೀಡುವದನ್ನು ಕೆಲವರು ವಿರೋಧಿಸಿದ್ದರೆ ಇನ್ನೂ ಕೆಲವರು ಮೊಟ್ಟೆ ನೀಡಬೇಕೆಂದು ಒತ್ತಾಯಿಸಿ ಈ ಮೊಟ್ಟೆ ಕುರಿತು ಪರ ವಿರೋಧ ಚರ್ಚೆ ಆರಂಭವಾಗಿದೆ. ಈ ಚರ್ಚೆ ಮಧ್ಯೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಮಕ್ಕಳು ಮೊಟ್ಟೆ ತಿನ್ನೋದಕ್ಕೆ ಹೆಚ್ಚು ಆಸಕ್ತಿ ಹೊಂದಿರುವದು ಕಂಡು ಬಂದಿದೆ.

ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು


ಶೇ. 93 ರಷ್ಟು ಮಕ್ಕಳಿಗೆ ಮೊಟ್ಟೆ ಬೇಕಿದೆ 

ಕೊಪ್ಪಳ ಜಿಲ್ಲೆಯಲ್ಲಿ ಈಗಿನ ವರದಿ ಪ್ರಕಾರ 645 ತೀವ್ರ ಹಾಗು 34000 ಸಾಧಾರಣ ಅಪೌಷ್ಠಿಕತೆಯ ಮಕ್ಕಳಿದ್ದಾರೆ. ಅಪೌಷ್ಠಿಕತೆ ನಿವಾರಣೆಗಾಗಿ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ ಅದರಲ್ಲಿ ಡಿಸೆಂಬರ್ ತಿಂಗಳಿನಿಂದ ಆರಂಭವಾದ ಮೊಟ್ಟೆ ನೀಡುವ ಯೋಜನೆ, ಶಾಲೆಗೆ ಬರುವ ಎಲ್ಲಾ ಮಕ್ಕಳು ಮೊಟ್ಟೆ ತಿನ್ನುವುದಿಲ್ಲ ಎನ್ನುವ ಕಾರಣಕ್ಕೆ ಮೊಟ್ಟೆ ಬದಲು ಬಾಳೆ ಹಣ್ಣು ನೀಡುತ್ತಿದ್ದಾರೆ,. ಕೊಪ್ಪಳ ಜಿಲ್ಲೆಯಲ್ಲಿ 1145 ಶಾಲೆಗಳಲ್ಲಿ 178455 ಮಕ್ಕಳು ಶಾಲೆಗೆ ದಾಖಲಾಗಿದ್ದು ಅದರಲ್ಲಿ 167111 ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ. ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ 157045 ಮಕ್ಕಳು ಶೇ 93.98 ರಷ್ಟು ಮಕ್ಕಳು ಮೊಟ್ಟೆ 10066 ಮಕ್ಕಳು ಅಂದರೆ ಶೇ 6.02 ಮಕ್ಕಳು ಬಾಳೆಹಣ್ಣು ತಿನ್ನುತ್ತಿದ್ದಾರೆ. ಶಾಲೆಗೆ ಬರುವ ಬಹು ಸಂಖ್ಯಾತ ಮಕ್ಕಳು ಮೊಟ್ಟೆ ಬೇಕೆನ್ನುತ್ತಿರುವಾಗ ಅವರು ತಿನ್ನುವ ಹಕ್ಕು ಕಸಿದುಕೊಳ್ಳುವುದು ಬೇಡ ಎಂಬ ಅಭಿಪ್ರಾಯವು ಇದೆ.

ಇದನ್ನೂ ಓದಿ: ಇವತ್ತು ಮೊಟ್ಟೆ ಕೊಡ್ತಾರೆ... ನಾಳೆ ಮಾಂಸಾನೂ ಮಾಡ್ತಾರೆ; ಚನ್ನಬಸವಾನಂದ ಶ್ರೀಗಳ ಕಿಡಿನುಡಿ

ಪರ-ವಿರೋಧ ಚರ್ಚೆ 

ಸರಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವದನ್ನು ವಿರೋಧಿಸಿ ಅಖಿಲ ಭಾರತ ಲಿಂಗಾಯತ್ ಮಹಾಸಭಾದ ರಾಜ್ಯಾಧ್ಯಕ್ಷ ವೀರಣ್ಣ ಕೋರ್ಲಹಳ್ಳಿ ತಮ್ಮ‌ ಮಗ ಟಿಸಿಯನ್ನು ಶಾಲೆಯಿಂದ ತೆಗೆದುಕೊಂಡು ಖಾಸಗಿ ಶಾಲೆಗೆ ಹಾಕಿದ್ದಾರೆ, ಈ ಮಧ್ಯೆ ಮೊಟ್ಟೆ ನೀಡುವ ಕುರಿತು ವಿರೋಧಿಸುವವರು ನಾವು ಮೊಟ್ಟೆ ತಿನ್ನುವದನ್ನು ವಿರೋಧಿಸುತ್ತಿಲ್ಲ, ಶಾಲೆಗಳಲ್ಲಿ ಮೊಟ್ಟೆ ಹಾಗು ಬಾಳೆಹಣ್ಣು ತಿನ್ನುವ ಮಕ್ಕಳ ಮಧ್ಯೆ ಅಸಮಾನತೆ ಉಂಟಾಗುತ್ತಿದೆ, ಬಾಳೆ ಹಣ್ಣು ತಿನ್ನುವ ಮಗು ಯಾವುದೊ ಆಸೆಗೆ ಪಕ್ಕದ ಸ್ನೇಹಿತರೊಂದಿಗೆ ಮೊಟ್ಟೆ ತಿನ್ನಬಹುದು, ಒಂದು ವೇಳೆ ಮೊಟ್ಟೆಯನ್ನು ಮನೆಗೆ ನೀಡಬೇಕು, ಶಾಲೆಯಲ್ಲಿ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಮೊಟ್ಟೆಯ ವಿಷಯವಾಗಿ ಈಗ ಭಾರಿ ಪ್ರಮಾಣದ ಚರ್ಚೆ ಆರಂಭವಾಗಿದ್ದು ಇದಕ್ಕೆ ಸರಕಾರ ಏನು ಮಾಡುತ್ತದೆಯೋ ಕಾದು ನೋಡಬೇಕು.
Published by:Kavya V
First published: