ನವದೆಹಲಿ (ಮಾ.22): ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಕಪ್ಪಕಾಣಿಕೆ ನೀಡಿರುವ ಕುರಿತು ನಮ್ಮ ಬಳಿ ದಾಖಲೆ ಇದೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಹೊಸ ಬಾಂಬ್ ಸಿಡಿಸಿದ್ದಾರೆ.
ಯಡಿಯೂರಪ್ಪ ಭಷ್ಟ್ರಾಚಾರ ಮಾಡಿದ್ದಾರೆ. ಅವರು ಕಳ್ಳತನ ಮಾಡಿ ನಮ್ಮ ಬಳಿ ಸಿಕ್ಕಿ ಬಿದ್ದಿದ್ದಾರೆ. ಈ ಕುರಿತು ನಮ್ಮ ಬಳಿ ದಾಖಲೆ ಇದೆ. ಹಣ ವರ್ಗಾವಣೆ ಕುರಿತು ಡೈರಿಯಲ್ಲಿ ದಾಖಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡೈರಿ ಪ್ರದರ್ಶಿಸಿದರು.
ಈ ಡೈರಿ ಮೂಲಕ ಐದು ಸತ್ಯಾಂಶಗಳು ಹೊರಗೆ ಬಂದಿವೆ. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬಿಜೆಪಿ 2690 ಕೋಟಿ ಕೇಳಿತು. ಅದರಲ್ಲಿ, 1800 ಕೋಟಿಯನ್ನು ರಾಷ್ಟ್ರೀಯ ನಾಯಕರಿಗೆ ನೀಡಲಾಗಿದೆ. ಪ್ರತಿ ಪುಟದಲ್ಲಿ ಅವರ ಸಹಿ ಇದೆ. ಈ ಹಣವನ್ನು ಕೇಂದ್ರ ತಂಡಕ್ಕೆ ನೀಡಲಾಗಿದೆ ಎಂದು ಸುರ್ಜೇವಾಲ ಆರೋಪಿಸಿದ್ದಾರೆ.
"2009ರಲ್ಲಿ ಕರ್ನಾಟಕ ಶಾಸಕರು ಪಾವತಿ ಮಾಡಿದ್ದನ್ನು ಯಡಿಯೂರಪ್ಪ ತಮ್ಮ ಕೈ ಬರೆಹದಲ್ಲಿ ಕನ್ನಡದಲ್ಲಿ ದಾಖಲು ಮಾಡಿದ್ದಾರೆ. ಡೈರಿಯ ಪುಟದಲ್ಲಿ ಬಿಜೆಪಿಯ ಕೇಂದ್ರ ಸಮಿತಿಗೆ ಯಡಿಯೂರಪ್ಪ 1000 ಕೋಟಿ ನೀಡಿದ್ದರು. ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ತಲಾ 150 ಕೋಟಿ ನೀಡಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ 100 ಕೋಟಿ, ಎಲ್.ಕೆ.ಆಡ್ವಾನಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ ತಲಾ 50 ಕೋಟಿ ಹಾಗೂ ನಿತಿನ್ ಗಡ್ಕರಿ ಮಗನ ಮದುವೆಗೆ ಯಡಿಯೂರಪ್ಪ 10 ಕೋಟಿ ನೀಡಿದ್ದಾಗಿ," ಕಾರವಾನ್ ವರದಿ ಮಾಡಿದೆ ಎಂದು ಸರ್ಜೆವಾಲಾ ಮಾಧ್ಯಮ ವರದಿ ಉಲ್ಲೇಖಿಸಿ ಆರೋಪ ಮಾಡಿದರು.
ಇದನ್ನು ಓದಿ: ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿರುವ ಛೋಟಾ ಬಾಹುಬಲಿ ಕಥೆ ಹಿಂದಿದೆ ಹೊಟ್ಟೆ ಪಾಡು
ಕೇಂದ್ರ ತಂಡದಲ್ಲಿ ಮೋದಿ ಸೇರಿದಂತೆ ದೊಡ್ಡ ದೊಡ್ಡವರ ಹೆಸರಿದೆ. ನ್ಯಾಯಾಧೀಶರು ಹಾಗೂ ವಕೀಲರಿಗೆ 250 ರಿಂದ 50 ಕೋಟಿವರೆಗೆ ನೀಡಿದ್ದಾರೆ. ಕ್ಯಾರವಾನ್ ಪತ್ರಿಕೆ ವರದಿ ಪ್ರಕಾರ ಈ ಡೈರಿ 2017ರಿಂದ ಆದಾಯ ತೆರಿಗೆ ಅಧಿಕಾರಿಗಳ ಬಳಿಯೇ ಇದೆ ಎಂದರು.
ಈ ಡೈರಿಯಲ್ಲಿರುವ ಅಂಶ ನಿಜವಲ್ಲ ಎಂದ ಮೇಲೆ ಯಾಕೆ ತನಿಖೆ ನಡೆಸಲಿಲ್ಲ. ಇದು ಸತ್ಯವಾದರೆ ಇದು ಭ್ರಷ್ಟಾಚಾರದ ಪ್ರಕರಣದಲ್ಲಿ ಭಾಗಿಯಾದ ನೇರ ಮಾಹಿತಿಯಲ್ಲವೇ? ಯಾಕೆ ಈ ಬಗ್ಗೆ ಸ್ವತಂತ್ರ ತನಿಖೆ ನಡೆಯುವುದಿಲ್ಲ? ಈ ಕುರಿತು ಕಳ್ಳ ಕಾವಲುಗಾರ ಉತ್ತರಿಸಬೇಕು. ಇದು ಸತ್ಯವೋ ಸುಳ್ಳು ಎಂಬ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
Randeep Surjewala just wasted good amount of media personals time talking absolute nonsense & releasing fake diary written & scripted by Congress themselves
Handwriting & the signature on the dairy released by @INCIndia is as fake as the diary itself.
Here is the proof 👇 pic.twitter.com/tVjxnQHyfN
— BJP Karnataka (@BJP4Karnataka) March 22, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ