ಉತ್ತರಪ್ರದೇಶ ಮಾದರಿಯಲ್ಲಿ ಸಾರ್ವಜನಿಕ ಆಸ್ತಿ ಮುಟ್ಟುಗೋಲು ವಿಚಾರ; ಆರ್​ ಅಶೋಕ್​ ಬೆಂಬಲಿಸಿದ ಸುರೇಶ್​ ಕುಮಾರ್​

ಯಾವುದೇ ಪ್ರತಿಭಟನೆವೇಳೆ ಯಾರೂ ಕೂಡ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಬಾರದು. ಇದನ್ನು ಯಾರೂ ಸಹಿಸಿಕೊಳ್ಳಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಒಳ್ಳೆಯ ತೀರ್ಮಾನ ಕೈಗೊಂಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. 

news18-kannada
Updated:December 27, 2019, 1:06 PM IST
ಉತ್ತರಪ್ರದೇಶ ಮಾದರಿಯಲ್ಲಿ ಸಾರ್ವಜನಿಕ ಆಸ್ತಿ ಮುಟ್ಟುಗೋಲು ವಿಚಾರ; ಆರ್​ ಅಶೋಕ್​ ಬೆಂಬಲಿಸಿದ ಸುರೇಶ್​ ಕುಮಾರ್​
ಸುರೇಶ್ ಕುಮಾರ್
  • Share this:
ಬೆಂಗಳೂರು (ಡಿ.27): ಉತ್ತರ ಪ್ರದೇಶ ಸರ್ಕಾರ ಮಾದರಿಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಮಾಡಿದವರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಲು ಯೋಜನೆ ರೂಪಿಸಿರುವ ಕಂದಾಯ ಸಚಿವರ ಆರ್​ ಅಶೋಕ್​ ಅಭಿಪ್ರಾಯವನ್ನು ನಾವು ಒಪ್ಪುತ್ತೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಬೆಂಬಲ ವ್ಯಕ್ತಪಡಿಸಿದ್ದಾರೆ. 

ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವುದೇ ಪ್ರತಿಭಟನೆವೇಳೆ ಯಾರೂ ಕೂಡ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಬಾರದು. ಇದನ್ನು ಯಾರೂ ಸಹಿಸಿಕೊಳ್ಳಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಒಳ್ಳೆಯ ತೀರ್ಮಾನ ಕೈಗೊಂಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ಕೂಡ ಈಗ ಉತ್ತರ ಪ್ರದೇಶ ಸರ್ಕಾರ ಮಾದರಿ ತೀರ್ಮಾನ ಕೈ ಗೊಂಡರೆ ಉತ್ತಮ. ದಾಳಿಕೋರರ ಆಸ್ತಿ ಮುಟ್ಟುಗೋಲಿಗೆ ನಮ್ಮೆಲ್ಲರ ಬೆಂಬಲವಿದೆ. ಈ ಬಗ್ಗೆ ಆರ್​ ಅಶೋಕ್​ ಒಂದು ರೀತಿ ಅಭಿಯಾನ ಮಾಡಿದರೆ, ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ಸಿಗಲಿದೆ ಎಂದರು.

ಇದನ್ನು ಓದಿ: ಸರ್ವಧರ್ಮ ಸಹಿಷ್ಣು ನಾನು; ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ; ಬಿಜೆಪಿ ನಾಯಕರಿಗೆ ಡಿಕೆಶಿ ತಿರುಗೇಟು

ಇನ್ನು ಏಸು ಕ್ರಿಸ್ತನ ಬೃಹತ್​ ಪ್ರತಿಮೆ ನಿರ್ಮಾಣಕ್ಕೆ ಡಿಕೆ ಶಿವಕುಮಾರ್​ ಜಾಗ ಬಿಟ್ಟುಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಪಾಲಿ ಗುಡ್ಡದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಅಲ್ಲಿನವರ ವಿರೋಧವೇ ಇದೆ. ಟ್ರಸ್ಟ್ ಗಳಿಗೆ ಗೋಮಾಳವನ್ನ ಸರ್ಕಾರ ಕೊಟ್ಟಿರುವ ಉದಾಹರಣೆಗಳಿವೆ. ಆದರೆ, ಸರ್ಕಾರಿ ಗೋಮಾಳ ಖರೀದಿಗೆ ಅವಕಾಶ ಇಲ್ಲ. ‘ಯಾವುದನ್ನ ಖರೀದಿ ಮಾಡಬೇಕು, ಯಾವುದನ್ನ ಖರೀದಿ ಮಾಡಬಾರದು ಅನ್ನೋದು ಡಿಕೆಶಿಗೆ ಗೊತ್ತಿದೆ. ಆದರೆ,  ಸಂಬಂಧಪಟ್ಟವರನ್ನ ಓಲೈಸಲು ಏನೆಲ್ಲ ಮಾಡಬೇಕು ಎನ್ನುವುದು ಕೂಡ ಅವರಿಗೆ ಚೆನ್ನಾಗಿ ಗೊತ್ತಿದೆ. ಯಾವ ಸರ್ಕಾರದಲ್ಲಿ ಜಮೀನು ಕೊಟ್ಟಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಅಲ್ಲಿನವರ ಪ್ರತಿರೋಧವಿರುವುದು ಸತ್ಯ ಎಂದರು.
First published:December 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ