HOME » NEWS » State » SURESH ANGADI UNION MINISTER OF STATE FOR RAILWAYS LAST RITES HELD AT DELHI TODAY HK

ಸರ್ಕಾರಿ ಗೌರವ ಹಾಗೂ ಲಿಂಗಾಯತ ವಿಧಿ ವಿಧಾನಗಳ ಅನ್ವಯ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ

ಸುರೇಶ್ ಅಂಗಡಿ ಕೊರೋನಾಗೆ ಬಲಿಯಾದ ಕಾರಣ ಕೋವಿಡ್ ಶಿಷ್ಟಾಚಾರದ ಪ್ರಕಾರವೇ ಅವರನ್ನು ಮಣ್ಣು ಮಾಡಲಾಯಿತು. ರುದ್ರಭೂಮಿಗೆ ಕೆಲವೇ ಕೆಲವು ಜನರಿಗೆ ಪ್ರವೇಶಾವಕಾಶ ನೀಡಲಾಗಿತ್ತು. ಕುಟುಂಬ ವರ್ಗದವರು ಪಿಪಿಇ ಕಿಟ್ ಹಾಕಿಕೊಂಡೆ ಪೂಜಾ ವಿಧಾನಗಳನ್ನು ಪೂರೈಸಿದರು.

news18-kannada
Updated:September 24, 2020, 7:39 PM IST
ಸರ್ಕಾರಿ ಗೌರವ ಹಾಗೂ ಲಿಂಗಾಯತ ವಿಧಿ ವಿಧಾನಗಳ ಅನ್ವಯ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ
  • Share this:
ನವದೆಹಲಿ(ಸೆಪ್ಟೆಂಬರ್​. 24): ಕೊರೋನಾ ಸೋಂಕಿಗೆ ಬಲಿಯಾದ ಮೊದಲ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಗುರುವಾರ ನವದೆಹಲಿಯಲ್ಲಿ ನೆರವೇರಿತು. 65 ವರ್ಷದ ಸುರೇಶ್ ಅಂಗಡಿ ಸಕಲ ಸರ್ಕಾರಿ ಗೌರವ ಹಾಗೂ ಲಿಂಗಾಯತ ವಿಧಿ ವಿಧಾನಗಳ ಪ್ರಕಾರ ಮಣ್ಣು ಸೇರಿದರು. ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆಯನ್ನು ಎಲ್ಲಿ ಮಾಡಬೇಕೆಂಬುದೇ ದೊಡ್ಡ ಗೊಂದಲವಾಗಿತ್ತು. ಕುಟುಂಬ ವರ್ಗದವರು ಸಹಜವಾಗಿ ಸುರೇಶ್ ಅಂಗಡಿಯವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ಮಾಡಲು ಬಯಸಿದ್ದರು. ಆದರೆ, ಕೋವಿಡ್ ಶಿಷ್ಟಾಚಾರದ ಪ್ರಕಾರ ಅವರ ಹುಟ್ಟೂರಿಗೆ ಕೊಂಡೊಯ್ಯಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಲಿಲ್ಲ‌. ಹಾಗಾಗಿ ದೆಹಲಿಯಲ್ಲೇ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಯಿತು. ದೆಹಲಿಯಲ್ಲೇ ಅಂತ್ಯಕ್ರಿಯೆ ಮಾಡಬೇಕೆಂದು ನಿಶ್ಚಯಿಸಿದ ಬಳಿಕ ದೆಹಲಿಯಲ್ಲಿ ಎಲ್ಲಿ ಮಾಡಬೇಕಂಬ ಗೊಂದಲ ನಿರ್ಮಾಣವಾಗಿತ್ತು. ಕಡೆಗೆ ದೆಹಲಿಯ ದ್ವಾರಕಾ ಸೆಕ್ಟರ್ 24 ರಲ್ಲಿರುವ ಲಿಂಗಾಯತರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಯಿತು. ಈ ರುದ್ರಭೂಮಿಯಲ್ಲಿ ಮೊದಲು ಮಣ್ಣಾದವರು ಸುರೇಶ್ ಅಂಗಡಿ.

ಕೋವಿಡ್ ಕರಿನೆರಳಿನಲ್ಲಿ ಅಂತ್ಯಕ್ರಿಯೆ :

ಸುರೇಶ್ ಅಂಗಡಿ ಕೊರೋನಾಗೆ ಬಲಿಯಾದ ಕಾರಣ ಕೋವಿಡ್ ಶಿಷ್ಟಾಚಾರದ ಪ್ರಕಾರವೇ ಅವರನ್ನು ಮಣ್ಣು ಮಾಡಲಾಯಿತು. ರುದ್ರಭೂಮಿಗೆ ಕೆಲವೇ ಕೆಲವು ಜನರಿಗೆ ಪ್ರವೇಶಾವಕಾಶ ನೀಡಲಾಗಿತ್ತು. ಕುಟುಂಬ ವರ್ಗದವರು ಪಿಪಿಇ ಕಿಟ್ ಹಾಕಿಕೊಂಡೆ ಪೂಜಾ ವಿಧಾನಗಳನ್ನು ಪೂರೈಸಿದರು. ಬಾಳಯ್ಯ ಹೀರೇಮಠ್ ಮತ್ತು ಶ್ರೀಕಾಂತ್ ಚೌಕಿಮಠ್ ಇತರೆ ವಿಧಿ ವಿಧಾನಗಳನ್ನು ಪೂರೈಸಿದರು. ಇದೇ ವೇಳೆ ರೈಲ್ವೆ ಇಲಾಖೆ ಸಿಬ್ಬಂದಿ ಕುಶಾಲ ತೋಪು ಹಾರಿಸಿ ಅಗಲಿದ ಸುರೇಶ್ ಅಂಗಡಿ ಅವರಿಗೆ ಸರ್ಕಾರಿ ಗೌರವ ಸಲ್ಲಿಸಿದರು.

ಇದನ್ನೂ ಓದಿ :  Big News: ಕೊರೋನಾ ಸೋಂಕಿನಿಂದ ಕಾಂಗ್ರೆಸ್​ ಶಾಸಕ ಬಿ.ನಾರಾಯಣ ರಾವ್​ ಸಾವು

ಅಂತ್ಯಕ್ರಿಯೆ ವೇಳೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಹೆಂಡತಿ, ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಬೀಗರಾದ ಸಚಿವ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿ‌, ಸಂಸದರಾದ ಈರಣ್ಣ ಕಡಾಡಿ, ಅಣ್ಣಸಾಹೇಬ್ ಜೊಲ್ಲೆ ಇದ್ದರು.

ಸುರೇಶ್ ಅಂಗಡಿ ಅವರ ಪಾರ್ಥೀವ ಶರೀರ ರುದ್ರಭೂಮಿಗೆ ಬರುತ್ತಿದ್ದಂತೆ ಕುಟುಂಬ ವರ್ಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ಪೂಜೆ ಮಾಡುವ ವೇಳೆ ಸುರೇಶ್ ಅಂಗಡಿ ಅವರ ಮಡದಿ ಕುಸಿದುಬಿದ್ದರು. ಇದಕ್ಕೂ ಮುನ್ನ ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರು ಸುರೇಶ್ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
Published by: G Hareeshkumar
First published: September 24, 2020, 7:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading